ದೆಹಲಿಯಲ್ಲಿ ನಿರಂತರ ಹುಲ್ಲು ಸುಡುವಿಕೆಯಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ರೈತರನ್ನು ಹೊಣೆಗಾರರನ್ನಾಗಿಸುವುದಲ್ಲ, ರಾಜ್ಯ ಸರ್ಕಾರ ಹೊಣೆ ಹೊರಬೇಕು ಎಂದು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ಸಮಿತಿ ಸೂಚಿಸಿದೆ. ದೆಹಲಿ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ ರಾಜ್ಯಕ್ಕೆ ಸೂಚನೆ ನೀಡಿದ್ದು, 4 ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿದೆ.
ದೆಹಲಿ ವಾಯುಮಾಲಿನ್ಯ ಕುರಿತು 4 ದಿನದಲ್ಲಿ ವರದಿಗೆ ನೀಡಬೇಕು, ಹಾಗೆಯೇ ನ.18ರಂದು ಮುಂದಿನ ವಿಚಾರಣೆಗೆ ನಡೆಸುವುದಾಗಿ ಎನ್ಎಚ್ಆರ್ಸಿ ಹೇಳಿದೆ. ಈ ಹಿಂದೆಯೇ, ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತೀವ್ರ ಅಸಮಾದಾನ ಹೊರಹಾಕಿತ್ತು.
ಮತ್ತಷ್ಟು ಓದಿ: Delhi Air Pollution: ಕೊಂಚವೂ ಸುಧಾರಿಸದ ದೆಹಲಿ ವಾಯುಮಾಲಿನ್ಯ, ನೊಯ್ಡಾದಿಂದ ಬರುವ ಟ್ರಕ್, ಕಾರುಗಳಿಗೆ ನಿಷೇಧ
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ದೆಹಲಿಯ ಮುಖ್ಯ ಕಾರ್ಯದರ್ಶಿಗಳಿಗೆ ಈ ತಿಂಗಳ 10 ರಂದು ಆಯೋಗದ ಮುಂದೆ ಹಾಜರಾಗಿ ವಿವರ ನೀಡುವಂತೆ ಸೂಚಿಸಿತ್ತು. ಈ ನಿಟ್ಟಿನಲ್ಲಿ ವಿವರವಾದ ಚರ್ಚೆ. ವೈಯಕ್ತಿಕವಾಗಿ ಅಥವಾ ಹೈಬ್ರಿಡ್ ಮೋಡ್‌ನಲ್ಲಿ ಆಯೋಗದ ಮುಂದೆ ಹಾಜರಾಗುವಂತೆ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿತ್ತು.
ಅಧಿಕಾರಿಗಳು ತಮ್ಮ ಪ್ರದೇಶಗಳಲ್ಲಿನ ಹುಲ್ಲುಗಾವಲುಗಳನ್ನು ಸುಡುವುದನ್ನು ತಡೆಯಲು ಆಯಾ ಸರ್ಕಾರಗಳು ಕೈಗೊಂಡ ಕ್ರಮಗಳ ಬಗ್ಗೆ ಆಯೋಗಕ್ಕೆ ಸಮಗ್ರ ವಿವರ ನೀಡಬೇಕು ಎಂದು ಆಯೋಗ ಹೇಳಿತ್ತು.
ಸ್ಮಾಗ್ ಟವರ್‌ಗಳು ಮತ್ತು ಆಂಟಿ-ಸ್ಮಾಗ್ ಗನ್‌ಗಳ ಪರಿಣಾಮದ ಬಗ್ಗೆ ಸಂಬಂಧಿಸಿದ ಸರ್ಕಾರಗಳು ಮುಂದಿನ ದಿನಗಳಲ್ಲಿ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಿವೆ ಎಂಬುದರ ಕುರಿತು ತಮ್ಮ ವರದಿಗಳಲ್ಲಿ ಸೇರಿಸಲು ಆಯೋಗ ಅಧಿಕಾರಿಯನ್ನು ಕೇಳಿತ್ತು.
ಪಂಜಾಬ್ ಮತ್ತು ಹರಿಯಾಣದ ವರದಿಯು ಬೆಳೆ ಅವಶೇಷಗಳ ನಿರ್ವಹಣೆಯ ಯೋಜನೆಯ ಪರಿಣಾಮದ ಬಗ್ಗೆ ನಿರ್ದಿಷ್ಟವಾಗಿ ತಿಳಿಸಬೇಕು ಎಂದು ಆಯೋಗ ಸೂಚಿಸಿದೆ.
ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟ ಹೆಚ್ಚಾಗಿದ್ದು ಜನರು ತೊಂದರೆ ಅನುಭವಿಸುವಂತಾಗಿದೆ. ದೆಹಲಿಯ ಎನ್‌ಸಿಟಿಯಲ್ಲಿ ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಲು ಇದುವರೆಗೆ ತೆಗೆದುಕೊಂಡ ಕ್ರಮಗಳು ಸಾಕಾಗುವುದಿಲ್ಲ ಎಂದು ಆಯೋಗವು ಗಮನಿಸಿದೆ. ಮಾಲಿನ್ಯದ ಮಟ್ಟವನ್ನು ತಕ್ಷಣವೇ ಕಡಿಮೆ ಮಾಡಲು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಹೇಳಿದೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ