ತಮಿಳುನಾಡಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ, ಇದರ ಬೆನ್ನಲ್ಲೇ 5 ಜಿಲ್ಲೆಗಳಿಗೆ ಪ್ರವಾಹದ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಥೇಣಿ, ದಿಂಡಿಗಲ್, ಮಧುರೈ, ಶಿವಗಂಗಾ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಣೆಕಟ್ಟುಗಳು ತುಂಬಿ ಹರಿಯುತ್ತಿದ್ದು, ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.
ANI ಜೊತೆ ಮಾತನಾಡಿದ DAM ಅಧಿಕಾರಿ, ಅಧಿಕಾರಿಗಳು ಥೇಣಿಯ ವೈಗೈ ಅಣೆಕಟ್ಟಿನಿಂದ 4,230 ಅಡಿ ಹೆಚ್ಚುವರಿ ನೀರನ್ನು ಹೊರಹಾಕಿದ್ದಾರೆ ಮತ್ತು ತೇಣಿ, ದಿಂಡಿಗಲ್, ಮಧುರೈ, ಶಿವಗಂಗಾ ಮತ್ತು ರಾಮನಾಥಪುರಂ ಜಿಲ್ಲೆಗಳಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ.
ಏತನ್ಮಧ್ಯೆ, ರೆಡ್ ಹಿಲ್ಸ್ ಕೆರೆಯಿಂದ ನೀರು ಬಿಟ್ಟ ನಂತರ ತಿರುವಳ್ಳೂರು ಜಿಲ್ಲಾಡಳಿತವು 11 ಹಳ್ಳಿಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿದಿದ್ದರಿಂದ 500 ಕ್ಯೂಸೆಕ್ ನೀರು ಬಿಡಲಾಗಿದೆ.
ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ರೆಡ್ ಹಿಲ್ ಕೆರೆಯಿಂದ 500 ಕ್ಯೂಸೆಕ್ ನೀರು ಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ಆಲ್ಬಿ ಜಾರ್ಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಂಡಾಲ್, ನಾರಾವರಿಕುಪ್ಪಂ, ಕಜಾನಿ, ಗ್ರ್ಯಾಂಡ್‌ಲೈನ್, ವಡಕರೈ, ಪುಝಲ್, ವಡ್ಪೆರುಂಬುಕ್ಕಂ, ಮಾಥೂರ್, ವಾಸಪುರ, ಮನಾಲಿ, ಸದಾಯಂಕುಪ್ಪಂ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳು ಎಂದು ಜಿಲ್ಲಾಧಿಕಾರಿ ಹೇಳಿದರು.
ಚೆಂಬರಂಬಾಕಂ ಕೆರೆಯಿಂದ 569 ಕ್ಯೂಸೆಕ್ ಹೆಚ್ಚುವರಿ ನೀರನ್ನು ಹೊರಬಿಡಲಾಗಿರುವುದನ್ನು ಗಮನಿಸಬಹುದು. ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಅಧಿಕಾರಿಗಳು ಪೂಂಡಿ, ಚೋಳವರಂ ಜಲಾಶಯಗಳ ಮೇಲೆ ನಿಗಾ ಇರಿಸಿದ್ದಾರೆ.
ತಮಿಳುನಾಡು ಮಳೆ
ರಾಜ್ಯದಲ್ಲಿ 2 ವಾರಗಳ ಕಾಲ ನಿರಂತರ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಮತ್ತಷ್ಟು ಓದಿ: Karnataka Rain: ಕರ್ನಾಟಕದಲ್ಲಿ ಇಂದಿನಿಂದ 3 ದಿನ ಚದುರಿದ ಮಳೆ; ಮಲೆನಾಡಿಗೆ ಇಂದು ಹಳದಿ ಅಲರ್ಟ್ ಘೋಷಣೆ
ಭಾರತೀಯ ಹವಾಮಾನ ಇಲಾಖೆ (IMD) ನವೆಂಬರ್ 13, 2022 ಕ್ಕೆ ತಮಿಳುನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ದಕ್ಷಿಣ ಆಂಧ್ರಪ್ರದೇಶ-ಉತ್ತರ ತಮಿಳುನಾಡು-ಪುದುಚೇರಿ ಕರಾವಳಿ ಮತ್ತು ನೈಋತ್ಯ ಮತ್ತು ಪಕ್ಕದ ನೈರುತ್ಯ ಮತ್ತು ಪಕ್ಕದ ಕರಾವಳಿಯಲ್ಲಿ ಮೀನುಗಾರರಿಗೆ ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
13 ರಂದು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿ ಮತ್ತು ನವೆಂಬರ್ 13 ರಿಂದ ನವೆಂಬರ್ 15 ರವರೆಗೆ ಕೇರಳ ಕರಾವಳಿ ಮತ್ತು ನವೆಂಬರ್ 13 ರಿಂದ ನವೆಂಬರ್ 15ರವರೆಗೆ ಲಕ್ಷದ್ವೀಪ ಮತ್ತು ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ನವೆಂಬರ್ 13 – ನವೆಂಬರ್ 14, 2022 ರಂದು ಭಾರಿ ಮಳೆಯಾಗಲಿದೆ ಎಂದು ಹೇಳಲಾಗಿದೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ