AlFalah University: ವೈದ್ಯರು, ಎಂಜಿನಿಯರ್ಗಳನ್ನು ಹುಟ್ಟುಹಾಕುವ ಅಲ್ ಫಲಾಹ್ ವಿಶ್ವವಿದ್ಯಾಲಯ, ಉಗ್ರರ ಕೇಂದ್ರವಾಗಿದ್ಹೇಗೆ?
ಮುಸ್ಲಿಂ ಬಹುಸಂಖ್ಯಾತ ಧೌಜ್ ಪ್ರದೇಶದಲ್ಲಿ 76 ಎಕರೆಗಳಲ್ಲಿ ಸ್ಥಾಪಿಸಲಾದ ಅಲ್-ಫಲಾಹ್ ವಿಶ್ವವಿದ್ಯಾಲಯವು ಇದ್ದಕ್ಕಿದ್ದಂತೆ ಸುದ್ದಿಯಾಗಿದೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ಮೂವರು ವೈದ್ಯರು ಭಾಗಿಯಾದ ಬಳಿಕ ಮಂಗಳವಾರ ಏಳು ವೈದ್ಯರು ಸೇರಿದಂತೆ 13 ಜನರನ್ನು ಬಂಧಿಸಿದ ನಂತರ, ವಿಶ್ವವಿದ್ಯಾಲಯವು ಭಯೋತ್ಪಾದಕರ ಕೇಂದ್ರವಾಗಿ ಹೊರಹೊಮ್ಮಿದೆ. ವಿಶ್ವವಿದ್ಯಾನಿಲಯದ ಹೆಸರು ದೇಶ ವಿರೋಧಿ ಚಟುವಟಿಕೆಗಳಲ್ಲಿ ಹಿಂದೆಂದೂ ಭಾಗಿಯಾಗಿಲ್ಲ ಎಂಬುದು ನಿಜ, ಆದರೆ ಒಂದು ವರ್ಷಕ್ಕೂ ಹೆಚ್ಚು ಕಾಲ, ವೈದ್ಯೆ ಸೇರಿದಂತೆ ಮೂವರು ವೈದ್ಯರು ಭಯೋತ್ಪಾದಕ ಸಂಚು ರೂಪಿಸುತ್ತಿದ್ದರು ಮತ್ತು ವಿಶ್ವವಿದ್ಯಾನಿಲಯ ಆಡಳಿತಕ್ಕೆ ತಿಳಿದಿರಲಿಲ್ಲವೇ ಎಂಬುದು ಪ್ರಶ್ನೆಯಾಗಿದೆ. ವಿಶ್ವವಿದ್ಯಾನಿಲಯದ ಆಡಳಿತಾಧಿಕಾರಿಗಳಿಗೆ ಇದರ ಬಗ್ಗೆ ತಿಳಿದಿದ್ದರೆ, ಕ್ರಮವನ್ನು ಏಕೆ ತೆಗೆದುಕೊಳ್ಳಲಿಲ್ಲ ಎನ್ನುವ ಪ್ರಶ್ನೆ ಮೂಡಿದೆ.

ನವದೆಹಲಿ, ನವೆಂಬರ್ 12: ದೆಹಲಿಯ ಕೆಂಪುಕೋಟೆ ಬಳಿ ನವೆಂಬರ್ 10ರಂದು ನಿಗೂಢ ಸ್ಫೋಟ(Blast) ಸಂಭವಿಸಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಅಲ್ ಫಲಾಹ್ ವಿಶ್ವವಿದ್ಯಾಲಯದ ಕಡೆ ಎಲ್ಲರ ಚಿತ್ತವಿದೆ. ಏಕೆಂದರೆ ಈ ವಿಶ್ವವಿದ್ಯಾಲಯದ ಮೂವರು ಎಂಬಿಬಿಎಸ್ ಪ್ರಾಧ್ಯಾಪಕರು ಮತ್ತು ಒಬ್ಬ ಸಹಾಯಕ ಪ್ರಾಧ್ಯಾಪಕರು ಜೈಶ್-ಎ-ಮೊಹಮ್ಮದ್‌ನಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆಂದು ಆರೋಪಿಸಲಾಗಿದೆ.
ದೆಹಲಿ ಮತ್ತು ಹರಿಯಾಣ ಪೊಲೀಸರು ಫರೀದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಮೇಲೆ ದಾಳಿ ನಡೆಸಿದ್ದಾರೆ. ದೆಹಲಿ ಕೆಂಪು ಕೋಟೆ ಸ್ಫೋಟದ ಸೂತ್ರಧಾರ ಉಮರ್ ಮೊಹಮ್ಮದ್ ಈ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು ಎಂದು ವರದಿಯಾಗಿದೆ. ಇಲ್ಲಿಯವರೆಗೆ, ದೆಹಲಿ ಕೆಂಪು ಕೋಟೆ ಬಳಿಯ ಸ್ಫೋಟಕ್ಕೆ ಸಂಬಂಧಿಸಿದಂತೆ ಈ ವಿಶ್ವವಿದ್ಯಾಲಯದಲ್ಲಿ 50 ಕ್ಕೂ ಹೆಚ್ಚು ಜನರನ್ನು ಪ್ರಶ್ನಿಸಲಾಗಿದೆ. ಈ ವಿಶ್ವವಿದ್ಯಾಲಯದಲ್ಲಿರುವ ಸುಮಾರು 40 ಪ್ರತಿಶತ ವೈದ್ಯರು ಕಾಶ್ಮೀರದವರಾಗಿದ್ದಾರೆ.
ಫರೀದಾಬಾದ್‌ನಲ್ಲಿ 2,900 ಕೆಜಿ ಐಇಡಿ ವಸ್ತು ಪತ್ತೆಯಾಗಿದೆ. ತರುವಾಯ, ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರ್ ಬಾಂಬ್ ಸ್ಫೋಟಗೊಂಡು ಒಂಬತ್ತು ಜನರು ಸಾವನ್ನಪ್ಪಿದ್ದರು. ಈ ಸ್ಫೋಟದ ಚಾಲಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಉಮರ್ ಮುಹಮ್ಮದ್ ಎಂದು ತಿಳಿದುಬಂದಿದೆ. ಎನ್‌ಐಎ ತನಿಖೆಯು ಈಗ ವಿಶ್ವವಿದ್ಯಾಲಯದ ಪ್ರಯೋಗಾಲಯಗಳು, ಆಸ್ಪತ್ರೆ ಮತ್ತು ವಿದೇಶಿ ನಿಧಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.
ಮತ್ತಷ್ಟು ಓದಿ: ಜನವರಿ 26ರಂದು ಕೆಂಪು ಕೋಟೆಯನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿತ್ತು ಉಗ್ರರ ಪ್ಲ್ಯಾನ್
ಅಲ್-ಫಲಾಹ್ ಪದದ ಅರ್ಥ ಅಲ್-ಫಲಾಹ್ ಎಂಬುದು ಅರೇಬಿಕ್ ಪದವಾಗಿದ್ದು, ಇದರ ಅರ್ಥ ಯಶಸ್ಸು, ವಿಮೋಚನೆ ಅಥವಾ ಮೋಕ್ಷ. ಇಸ್ಲಾಂನಲ್ಲಿ, ಅಲ್ಲಾಹನ ಮಾರ್ಗವನ್ನು ಅನುಸರಿಸುವ ಮೂಲಕ ಮೋಕ್ಷವನ್ನು ಪಡೆಯುವ ವ್ಯಕ್ತಿಯನ್ನು ವಿವರಿಸಲು ಈ ಪದವನ್ನು ಬಳಸಲಾಗುತ್ತದೆ.
ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದವರು ಯಾರು? ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ, ಈ ವಿಶ್ವವಿದ್ಯಾನಿಲಯವನ್ನು ಹರಿಯಾಣ ಖಾಸಗಿ ವಿಶ್ವವಿದ್ಯಾಲಯಗಳ ಕಾಯ್ದೆಯಡಿಯಲ್ಲಿ ಹರಿಯಾಣ ಶಾಸಕಾಂಗ ಸಭೆ ಸ್ಥಾಪಿಸಿದೆ. ಇದನ್ನು 2015 ರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸಹ ಅನುಮೋದಿಸಿದೆ.
ಮತ್ತಷ್ಟು ಓದಿ: ದೆಹಲಿ ಸ್ಫೋಟಕ್ಕೆ ಕಾರಣವಾಗಿದ್ದ ಕಾರು 12 ದಿನಗಳಿಂದ ಎಲ್ಲಿತ್ತು ಗೊತ್ತೇ?
1997 ರಲ್ಲಿ ಪ್ರಾರಂಭವಾಯಿತು, ಅಲ್-ಫಲಾಹ್ ವಿಶ್ವವಿದ್ಯಾಲಯವು 1997 ರಲ್ಲಿ ಸಣ್ಣ ಎಂಜಿನಿಯರಿಂಗ್ ಕಾಲೇಜಾಗಿ ಪ್ರಾರಂಭವಾಯಿತು. ಇದನ್ನು ದೆಹಲಿಯ ಓಖ್ಲಾದಲ್ಲಿರುವ ನೋಂದಾಯಿತ ಅಲ್-ಫಲಾಹ್ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿದೆ.ಈ ಟ್ರಸ್ಟ್ ಅನ್ನು ಜವಾಹರ್ ಅಹ್ಮದ್ ಸಿದ್ದಿಕಿ ಮತ್ತು ವಿಶ್ವವಿದ್ಯಾಲಯದ ಕುಲಪತಿ ನೇತೃತ್ವ ವಹಿಸಿದ್ದಾರೆ. 2014 ರಲ್ಲಿ, ಹರಿಯಾಣ ವಿಧಾನಸಭೆಯ ಕಾಯಿದೆಯ ಮೂಲಕ ಇದು ಪೂರ್ಣ ಪ್ರಮಾಣದ ವಿಶ್ವವಿದ್ಯಾಲಯವಾಯಿತು. ಇದು ಯುಜಿಸಿಯಿಂದ ಮಾನ್ಯತೆ ಪಡೆದಿದೆ ಮತ್ತು NAAC ನಿಂದ ಎ ಗ್ರೇಡ್‌ನೊಂದಿಗೆ ಮಾನ್ಯತೆ ಪಡೆದಿದೆ. ಪ್ರತಿ ವರ್ಷ ಅರಬ್ ದೇಶಗಳಿಂದ ನಿಧಿಸಂಗ್ರಹಣೆ ಮತ್ತು ದೇಣಿಗೆಗಳನ್ನು ಪಡೆಯಲಾಗುತ್ತದೆ.
ಓಖ್ಲಾದಲ್ಲಿರುವ ಪ್ರಧಾನ ಕಚೇರಿಯ ಮೂಲಕ ನೇಮಕಾತಿಯನ್ನು ಮಾಡಲಾಗುತ್ತದೆ.ಈ ಆಸ್ಪತ್ರೆ 1997 ರಲ್ಲಿ ಸಣ್ಣ ಔಷಧಾಲಯವಾಗಿ ಪ್ರಾರಂಭವಾಯಿತು. ಇಂದು, ಇದು 800 ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯಾಗಿ ಬೆಳೆದಿದೆ. ತುರ್ತು ಚಿಕಿತ್ಸೆ, ಮಕ್ಕಳ ಚಿಕಿತ್ಸೆ, ರೇಡಿಯಾಲಜಿ, ಮೂಳೆಚಿಕಿತ್ಸೆ, ದಂತ ಚಿಕಿತ್ಸೆ ನೀಡಲಾಗುತ್ತದೆ.ಜನವರಿ 2025 ರಲ್ಲಿ, ಮಾಜಿ ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಹೊಸ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿದ್ದರು.
ಕ್ಯಾಂಪಸ್‌ನಲ್ಲಿ ಮೂರು ಕಾಲೇಜುಗಳಿವೆ ಈ ಕ್ಯಾಂಪಸ್ ಮೂರು ಕಾಲೇಜುಗಳನ್ನು ಹೊಂದಿದೆ, ಅಲ್-ಫಲಾಹ್ ಸ್ಕೂಲ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಬ್ರೌನ್ ಹಿಲ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಮತ್ತು ಅಲ್-ಫಲಾಹ್ ಸ್ಕೂಲ್ ಆಫ್ ಎಜುಕೇಶನ್ ಅಂಡ್ ಟ್ರೈನಿಂಗ್. ವಿಶ್ವವಿದ್ಯಾನಿಲಯವು 650 ಹಾಸಿಗೆಗಳ ಸಣ್ಣ ಆಸ್ಪತ್ರೆಯನ್ನು ಸಹ ಹೊಂದಿದೆ, ಅಲ್ಲಿ ವೈದ್ಯರು ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಸೇವೆಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಒದಗಿಸುತ್ತಾರೆ.
ಯಾವ ಕೋರ್ಸ್‌ಗಳಿವೆ? ಅಲ್-ಫಲಾಹ್ ವಿಶ್ವವಿದ್ಯಾಲಯವು ಡಿಪ್ಲೊಮಾ ಕೋರ್ಸ್‌ಗಳು ಸೇರಿದಂತೆ ಪದವಿ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ನೀಡುತ್ತದೆ. ಡಿಪ್ಲೊಮಾ ಕೋರ್ಸ್ ಮೂರು ವರ್ಷ, ಮತ್ತು ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ , ಡಿಎಂಎಲ್‌ಟಿ, ಡಿಪ್ಲೊಮಾ ಇನ್ ಸಿವಿಲ್ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸೇರಿವೆ.
ಹೆಚ್ಚುವರಿಯಾಗಿ, ಪದವಿಪೂರ್ವ ಕೋರ್ಸ್‌ಗಳು ನಾಲ್ಕು ವರ್ಷಗಳ ಕಾಲ ನಡೆಯುತ್ತವೆ, ಇದರಲ್ಲಿ ಪ್ಯಾರಾಮೆಡಿಕಲ್, ಬಿ.ಟೆಕ್, ಬಿ.ಎಡ್, ಬಿ.ಎಸ್ಸಿ, ಬಿ.ಕಾಂ, ಮತ್ತು ಬಿ.ಸಿ.ಎ ಕೋರ್ಸ್‌ಗಳು ಸೇರಿವೆ. ಸ್ನಾತಕೋತ್ತರ ಕೋರ್ಸ್‌ಗಳು ಎರಡು ವರ್ಷಗಳ ಕಾಲ ನಡೆಯುತ್ತವೆ, ಎಂ.ಟೆಕ್ ಮತ್ತು ಎಂ.ಎಡ್. ಡಾಕ್ಟರಲ್ ಕೋರ್ಸ್‌ಗಳಂತಹ ಪ್ರಮುಖ ಕೋರ್ಸ್‌ಗಳು ಎರಡೂವರೆ ವರ್ಷಗಳದ್ದಾಗಿರುತ್ತದೆ.
ಈ ವೈದ್ಯರು ಸಿಕ್ಕಿಬಿದ್ದಿದ್ಹೇಗೆ? ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜೈಶ್-ಎ-ಮೊಹಮ್ಮದ್ ಪ್ರಚಾರ ಪೋಸ್ಟರ್‌ಗಳನ್ನು ಹಾಕಿದ್ದ ಆರೋಪದ ಮೇಲೆ ಪುಲ್ವಾಮಾ ನಿವಾಸಿ ಡಾ. ಮುಜಮ್ಮಿಲ್ ಶಕೀಲ್ ಅವರನ್ನು ಬಂಧಿಸಲಾಗಿತ್ತು. ಆತ ಫರೀದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.ಹರಿಯಾಣ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರ ಪ್ರದೇಶ ಪೊಲೀಸರು ಜಂಟಿಯಾಗಿ ನಡೆಸಿದ ದಾಳಿಯಲ್ಲಿ 2,900 ಕೆಜಿ ಐಇಡಿ ವಸ್ತು ಪತ್ತೆಯಾಗಿದೆ.
ಇದರಲ್ಲಿ 360 ಕೆಜಿ ಅಮೋನಿಯಂ ನೈಟ್ರೇಟ್, ಎಕೆ-56 ರೈಫಲ್‌ಗಳು, ಕ್ರಿಂಕೋವ್ ರೈಫಲ್‌ಗಳು, ಚೈನೀಸ್ ಸ್ಟಾರ್ ಪಿಸ್ತೂಲ್‌ಗಳು, ಬೆರೆಟ್ಟಾ ಪಿಸ್ತೂಲ್‌ಗಳು, 12 ಸೂಟ್‌ಕೇಸ್‌ಗಳಲ್ಲಿ ಪ್ಯಾಕ್ ಮಾಡಲಾದ ಸ್ಫೋಟಕಗಳು ಮತ್ತು ಒಂದು ಬಕೆಟ್, 20 ಟೈಮರ್‌ಗಳು, ಬ್ಯಾಟರಿಗಳು, ರಿಮೋಟ್ ಕಂಟ್ರೋಲ್‌ಗಳು, ವಾಕಿ-ಟಾಕಿಗಳು ಮತ್ತು 5 ಕೆಜಿ ಭಾರ ಲೋಹಗಳು ಸೇರಿವೆ.
ಡಾ. ಉಮರ್ 2015 ರಲ್ಲಿ ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪೂರ್ಣಗೊಳಿಸಿದ್ದರು.ಟಾಪರ್ ಕೂಡ ಆಗಿದ್ದ.2023 ರಲ್ಲಿ ತಮ್ಮ ಕುಟುಂಬದೊಂದಿಗೆ ಫರಿದಾಬಾದ್‌ಗೆ ತೆರಳಿದ್ದ.ಅಕ್ಟೋಬರ್ 29 ರಿಂದ ಕಾರನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ನಿಲ್ಲಿಸಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




