ದೆಹಲಿ ಚಲೋ: ರಾಷ್ಟ್ರ ರಾಜಧಾನಿ ಪ್ರವೇಶಿಸಲು ರೈತರಿಗೆ ಕೊನೆಗೂ ಸಿಕ್ತು ಗ್ರೀನ್​ ಸಿಗ್ನಲ್​

|

Updated on: Nov 27, 2020 | 7:26 PM

ದೆಹಲಿ: ಪಂಜಾಬ್ ರೈತರಿಗೆ ತಮ್ಮ ಪ್ರತಿಭಟನೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಮುಂದುವರಿಸಲು ಕೊನೆಗೂ ಅನುಮತಿ ಸಿಕ್ಕಿದೆ. ರೈತರಿಗೆ ದೆಹಲಿಯ ನಿರಂಕಾರಿ ಸಮಾಗಮ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ದೆಹಲಿ ಸರ್ಕಾರ ಅವಕಾಶ ನೀಡಿದೆ.

ದೆಹಲಿ ಚಲೋ: ರಾಷ್ಟ್ರ ರಾಜಧಾನಿ ಪ್ರವೇಶಿಸಲು ರೈತರಿಗೆ ಕೊನೆಗೂ ಸಿಕ್ತು ಗ್ರೀನ್​ ಸಿಗ್ನಲ್​
ರೈತರ ಪ್ರತಿಭಟನೆ
Follow us on

ದೆಹಲಿ: ಪಂಜಾಬ್ ರೈತರಿಗೆ ತಮ್ಮ ಪ್ರತಿಭಟನೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಮುಂದುವರಿಸಲು ಕೊನೆಗೂ ಅನುಮತಿ ಸಿಕ್ಕಿದೆ. ರೈತರಿಗೆ ದೆಹಲಿಯ ನಿರಂಕಾರಿ ಸಮಾಗಮ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ದೆಹಲಿ ಸರ್ಕಾರ ಅವಕಾಶ ನೀಡಿದೆ. ಈ ನಿರ್ಧಾರವನ್ನು, ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಸ್ವಾಗತಿಸಿದ್ದಾರೆ.

ನಿರಂಕಾರಿ ಮೈದಾನದಲ್ಲಿ ಪ್ರತಿಭಟನಾಕಾರರಿಗೆ ನೀರಿನ ಟ್ಯಾಂಕ್​ರ​ಗಳ ವ್ಯವಸ್ಥೆ ಸಹ ಮಾಡಲಿದೆ. ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ಪ್ರತಿನಿಧಿಗಳು ರೈತರ ಯೋಗಕ್ಷೇಮ ನೋಡಿಕೊಳ್ಳಲು ಎಲ್ಲಾ ಸಿದ್ಧತೆ ನಡೆಸುತ್ತಿದೆ ಎಂದು ಆಪ್ ವಕ್ತಾರ ರಾಘವ್ ಛಡ್ಡಾ ತಿಳಿಸಿದರು.