ಕೊರೊನಾ ಕೆಟ್ಟ ಕಾಲದಲ್ಲಿ… ಪ್ರಧಾನಿ ನರೇಂದ್ರ ಮೋದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೊಟ್ಟ ನಾಲ್ಕು ಸಲಹೆಗಳು

|

Updated on: May 22, 2021 | 4:26 PM

Arvind Kejriwal suggestions: ದೆಹಲಿಯಲ್ಲಿ ಕೊರೊನಾ ಲಸಿಕೆ ಪರಿಸ್ಥಿತಿಯ ಬಗ್ಗೆಯೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಮನ ಸೆಳೆದಿದ್ದಾರೆ. ಲಸಿಕೆ ಕೊರತೆಯಿಂದ ರಾಷ್ಟ್ರ ರಾಜಧಾನಿಯಲ್ಲಿ ಲಸಿಕಾ ಕೇಂದ್ರಗಳು ಬಂದ್ ಆಗಿವೆ. ಪ್ರತಿ ತಿಂಗಳು 80 ಲಕ್ಷ ಡೋಸ್ ಲಸಿಕೆ ನೀಡಿದರೇ ಮೂರೇ ತಿಂಗಳಲ್ಲಿ ಇಡೀ ದೆಹಲಿ ಜನರಿಗೆ ಲಸಿಕೆ ನೀಡಿದಂತಾಗುತ್ತದೆ. ದೆಹಲಿಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಲಸಿಕೆ‌ ಇಲ್ಲವಾಗಿದೆ ಎಂದಿದ್ದಾರೆ.

ಕೊರೊನಾ ಕೆಟ್ಟ ಕಾಲದಲ್ಲಿ... ಪ್ರಧಾನಿ ನರೇಂದ್ರ ಮೋದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೊಟ್ಟ ನಾಲ್ಕು ಸಲಹೆಗಳು
ಅರವಿಂದ್ ಕೇಜ್ರಿವಾಲ್
Follow us on

ನವದೆಹಲಿ: ಕೊರೊನಾ ಕೆಟ್ಟ ಕಾಲದಲ್ಲಿ… ಪ್ರಧಾನಿ ನರೇಂದ್ರ ಮೋದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಾಲ್ಕು ಉಚಿತ ಸಲಹೆಗಳನ್ನು ಕೊಟ್ಟಿದ್ದಾರೆ. ಒಂದೊಂದಾಗಿ ಆ ನಾಲ್ಕೂ ಸಲಹೆಗಳು ಏನೆಂಬುದನ್ನು ನೋಡಿದಾಗ..

1. ದೇಶದ ಎಲ್ಲ ಲಸಿಕಾ ಕಂಪನಿಗಳಿಗೆ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ತಂತ್ರಜ್ಞಾನ ವರ್ಗಾವಣೆ ಮಾಡಿ.
2. ವಿಶ್ವದಲ್ಲಿ ಲಸಿಕೆ ಉತ್ಪಾದಿಸುವ ಕಂಪನಿಗಳಿಗೆ ಲಸಿಕೆ ಪೂರೈಕೆಗೆ ಅನುಮತಿ ಕೊಡಿ
3. ವಿದೇಶಿ ಕಂಪನಿಗಳಿಗೆ ಭಾರತದಲ್ಲಿ ಲಸಿಕೆ ಉತ್ಪಾದನೆಗೆ ಅನುಮತಿ ಕೊಡಿ. ಮತ್ತು
4. ಕೆಲ ದೇಶಗಳು ತಮ್ಮ‌ ಜನಸಂಖ್ಯೆಗಿಂತ ಹೆಚ್ಚಿನ ಲಸಿಕೆ ದಾಸ್ತಾನು ಇಟ್ಟುಕೊಂಡಿವೆ. ಆ ದೇಶಗಳಿಗೆ ಮನವಿ ಮಾಡಿ ಲಸಿಕೆಯನ್ನ ಭಾರತಕ್ಕೆ ಪಡೆಯಿರಿ.

ಇದೇ ವೇಳೆ ದೆಹಲಿಯಲ್ಲಿ ಕೊರೊನಾ ಲಸಿಕೆ ಪರಿಸ್ಥಿತಿಯ ಬಗ್ಗೆಯೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಮನ ಸೆಳೆದಿದ್ದಾರೆ. ಲಸಿಕೆ ಕೊರತೆಯಿಂದ ರಾಷ್ಟ್ರ ರಾಜಧಾನಿಯಲ್ಲಿ ಲಸಿಕಾ ಕೇಂದ್ರಗಳು ಬಂದ್ ಆಗಿವೆ. ಪ್ರತಿ ತಿಂಗಳು 80 ಲಕ್ಷ ಡೋಸ್ ಲಸಿಕೆ ನೀಡಿದರೇ ಮೂರೇ ತಿಂಗಳಲ್ಲಿ ಇಡೀ ದೆಹಲಿ ಜನರಿಗೆ ಲಸಿಕೆ ನೀಡಿದಂತಾಗುತ್ತದೆ. ದೆಹಲಿಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಲಸಿಕೆ‌ ಇಲ್ಲವಾಗಿದೆ ಎಂದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಇಂತಹ ದುರ್ಭರ ಪರಿಸ್ಥಿತಿಯನ್ನು ನಿಭಾಯಿಸಲು ಮೇಲಿನ ನಾಲ್ಕು ಸಲಹೆಗಳನ್ನು ಸ್ವೀಕರಿಸಿ, ಅವುಗಳನ್ನು ಪೂರೈಸಿಕೊಡಿ ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.

(delhi cm arvind kejriwal gives four suggestions to pm narendra modi regarding corona vaccination)

ಲಸಿಕೆ ಕೊರತೆ ಸೃಷ್ಟಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ