ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ಗೆ ಕೊರೊನಾ ಸೋಂಕು; ಸಂಪರ್ಕದಲ್ಲಿದ್ದವರು ಕೊವಿಡ್​ 19 ಟೆಸ್ಟ್ ಮಾಡಿಸಿಕೊಳ್ಳಿ ಎಂದ ಸಿಎಂ

| Updated By: Lakshmi Hegde

Updated on: Jan 04, 2022 | 8:49 AM

2020ರ ಜೂನ್​ನಲ್ಲಿ ಅರವಿಂದ್​ ಕೇಜ್ರಿವಾಲ್​ಗೆ ತೀವ್ರವಾದ ಜ್ವರ, ಗಂಟಲುನೋವು ಕಾಣಿಸಿತ್ತು. ಆಗ ಕೊರೊನಾ ಟೆಸ್ಟ್ ಮಾಡಿಸಿದಾಗ ಕೊವಿಡ್ 19 ನೆಗೆಟಿವ್​​​ ವರದಿ ಬಂದಿತ್ತು. ಹಾಗಿದ್ದಾಗ್ಯೂ ಆಗ ತಮಗೆ ಶೀತ, ಜ್ವರ ಬಂದಾಗಿನಿಂದಲೂ ಎಲ್ಲ ಸಭೆಗಳನ್ನೂ ರದ್ದು ಮಾಡಿ ಅವರು ಕ್ವಾರಂಟೈನ್​ ಆಗಿದ್ದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ಗೆ ಕೊರೊನಾ ಸೋಂಕು; ಸಂಪರ್ಕದಲ್ಲಿದ್ದವರು ಕೊವಿಡ್​ 19 ಟೆಸ್ಟ್ ಮಾಡಿಸಿಕೊಳ್ಳಿ ಎಂದ ಸಿಎಂ
ಅರವಿಂದ ಕೇಜ್ರಿವಾಲ್
Follow us on

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ಗೆ (Arvind Kejriwal) ಕೊರೊನಾ ಸೋಂಕು (Corona Virus) ತಗುಲಿದೆ. ಈ ಬಗ್ಗೆ ಅರವಿಂದ್ ಕೇಜ್ರಿವಾಲ್​ ಟ್ವೀಟ್ ಮಾಡಿ ತಿಳಿಸಿದ್ದು, ನನಗೆ ಕೊರೊನಾದ ಸೌಮ್ಯ ಲಕ್ಷಣಗಳು ಇವೆ. ಕಳೆದ ಕೆಲವು ದಿನಗಳಿಂದಲೂ ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಕೊವಿಡ್​ 19 ತಪಾಸಣೆ ಮಾಡಿಸಿಕೊಳ್ಳಿ. ಐಸೋಲೇಟ್​ ಆಗಿ ಎಂದು ಮನವಿ ಮಾಡಿದ್ದಾರೆ. ನನಗೆ ಕೊವಿಡ್​ 19 ಸೋಂಕು ತಗುಲಿದೆ ಎಂದಷ್ಟೇ ಅರವಿಂದ್ ಕೇಜ್ರಿವಾಲ್​ ಹೇಳಿದ್ದಾರೆ. ಹಾಗಾಗಿ, ಒಮಿಕ್ರಾನ್​ ಸೋಂಕಿಗೆ ಒಳಗಾಗಿದ್ದಾರೋ, ಅಥವಾ ಕೊರೊನಾ ಸೋಂಕೋ ಎಂಬುದಿನ್ನೂ ದೃಢಪಟ್ಟಿಲ್ಲ. ಸದ್ಯ ಅರವಿಂದ್ ಕೇಜ್ರಿವಾಲ್​ ಐಸೋಲೇಟ್ ಆಗಿದ್ದಾರೆ.

2020ರ ಜೂನ್​ನಲ್ಲಿ ಅರವಿಂದ್​ ಕೇಜ್ರಿವಾಲ್​ಗೆ ತೀವ್ರವಾದ ಜ್ವರ, ಗಂಟಲುನೋವು ಕಾಣಿಸಿತ್ತು. ಆಗ ಕೊರೊನಾ ಟೆಸ್ಟ್ ಮಾಡಿಸಿದಾಗ ಕೊವಿಡ್ 19 ನೆಗೆಟಿವ್​​​ ವರದಿ ಬಂದಿತ್ತು. ಹಾಗಿದ್ದಾಗ್ಯೂ ಆಗ ತಮಗೆ ಶೀತ, ಜ್ವರ ಬಂದಾಗಿನಿಂದಲೂ ಎಲ್ಲ ಸಭೆಗಳನ್ನೂ ರದ್ದು ಮಾಡಿ ಅವರು ಕ್ವಾರಂಟೈನ್​ ಆಗಿದ್ದರು. ನಂತರ ಏಪ್ರಿಲ್​ ತಿಂಗಳಲ್ಲಿ ಅರವಿಂದ್ ಕೇಜ್ರಿವಾಲ್​ ಪತ್ನಿ ಸುನೀತಾ ಕೇಜ್ರಿವಾಲ್​ಗೆ ಕೊರೊನಾ ಸೋಂಕು ತಗುಲಿತ್ತು. ಆಗಲೂ ಸಹ ಮುನ್ನೆಚ್ಚರಿಕಾ ಕ್ರಮವಾಗಿ ಅವರು ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದರು.

ಇನ್ನು ಈಗ ಅರವಿಂದ್ ಕೇಜ್ರಿವಾಲ್​ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಬ್ಯೂಸಿಯಲ್ಲಿದ್ದಾರೆ. 2021ರ ನವೆಂಬರ್​ನಿಂದಲೂ ಪಂಜಾಬ್​, ಉತ್ತರಾಖಂಡ್​ ಮತ್ತು ಗೋವಾ (ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳು) ಚುನಾವಣಾ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಪ್ರತಿರಾಜ್ಯಗಳಿಗೂ ತೆರಳಿ ದೊಡ್ಡಮಟ್ಟದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಜನಸಂಪರ್ಕಕ್ಕೆ ಹೋಗುತ್ತಿದ್ದಾರೆ. ಇನ್ನು ದೆಹಲಿಯಲ್ಲಿ ಕಳೆದ ವಾರದಿಂದ ಕೊವಿಡ್​ 19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಒಮಿಕ್ರಾನ್​ ಕೂಡ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ ದೆಹಲಿಯಲ್ಲಿ 4099 ಕೊರೊನಾ ಕೇಸ್​ಗಳು ದಾಖಲಾಗಿದ್ದು, ಪಾಸಿಟಿವಿಟಿ ದರ ಶೇ.6.46ರಷ್ಟಿದೆ. ಅಲ್ಲಿ ಹಲವು ರೀತಿಯ ನಿರ್ಬಂಧಗಳನ್ನು ವಹಿಸಲಾಗಿದೆ. ಸದ್ಯ ಹಳದಿ ಅಲರ್ಟ್​ ಘೋಷಣೆಯಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಸಂಪೂರ್ಣ ಲಾಕ್​ಡೌನ್ ಆಗಬಹುದಾದ ಸಾಧ್ಯತೆ ಇದೆ.

ಇದನ್ನೂ ಓದಿ: 9 ಬ್ಯಾಂಕ್​ಗಳಿಗೆ ವಂಚನೆ; ಗುಜರಾತ್​ ಮೂಲದ ಸಂಸ್ಥೆಯ 26.25 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇ.ಡಿ.

Published On - 8:46 am, Tue, 4 January 22