9 ಬ್ಯಾಂಕ್​ಗಳಿಗೆ ವಂಚನೆ; ಗುಜರಾತ್​ ಮೂಲದ ಸಂಸ್ಥೆಯ 26.25 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇ.ಡಿ.

2018ರಲ್ಲಿ ಈ ಸಂಸ್ಥೆ ಮತ್ತು ಅದರ ಸಂಬಂಧಿತ ಶಾಖೆಗಳು, ಘಟಕಗಳಿಗೆ ಸೇರಿದ 1122.72 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿತ್ತು.  ಗುಜರಾತ್​​ ಮೂಲದ ಈ ಡೈಮಂಡ್ ಪವರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಸಿಬಿಐ ಕೂಡ ಈಗಾಗಲೇ ಹಣ ಅಕ್ರಮ ವರ್ಗಾವಣೆ ಆರೋಪದಡಿ ಕೇಸ್ ದಾಖಲು ಮಾಡಿದೆ.

9 ಬ್ಯಾಂಕ್​ಗಳಿಗೆ ವಂಚನೆ; ಗುಜರಾತ್​ ಮೂಲದ ಸಂಸ್ಥೆಯ 26.25 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇ.ಡಿ.
ಇ.ಡಿ.
Follow us
TV9 Web
| Updated By: Lakshmi Hegde

Updated on: Jan 04, 2022 | 8:31 AM

ಗುಜರಾತ್​ ಮೂಲದ ಕಂಪನಿ ಮತ್ತು ಅದರ ಕಾರ್ಯವಾಹಕ ಅಧಿಕಾರಿಗಳ ಸುಮಾರು 26.25 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ (ED-Enforcement Directorate) ಮುಟ್ಟುಗೋಲು ಹಾಕಿಕೊಂಡಿದೆ. ಬ್ಯಾಂಕ್​​ಗೆ ವಂಚನೆ ಮಾಡಿದ ಪ್ರಕರಣದಲ್ಲಿ ಇ.ಡಿ. ಆಸ್ತಿ ಜಪ್ತಿ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.  ಹೀಗೆ ಮುಟ್ಟುಗೋಲು ಹಾಕಲಾದ ಆಸ್ತಿಯಲ್ಲಿ, ಭೂಮಿ, ವಸತಿ ಮತ್ತು ವಾಣಿಜ್ಯ ಉಪಯೋಗಿ ಆಸ್ತಿಗಳಿವೆ. ಅಂದಹಾಗೇ, ಇದೀಗ ಬ್ಯಾಂಕ್​ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಕಂಪನಿ ಗುಜರಾತ್​​ನ ಡೈಮಂಡ್ ಪವರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ಅದರ ಪೂರ್ವದ ನಿರ್ದೇಶಕರು, ಪ್ರವರ್ತಕರು ಮತ್ತವರ ಕುಟುಂಬದ ಸದಸ್ಯರು. 

2018ರಲ್ಲಿ ಈ ಸಂಸ್ಥೆ ಮತ್ತು ಅದರ ಸಂಬಂಧಿತ ಶಾಖೆಗಳು, ಘಟಕಗಳಿಗೆ ಸೇರಿದ 1122.72 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿತ್ತು.  ಗುಜರಾತ್​​ ಮೂಲದ ಈ ಡೈಮಂಡ್ ಪವರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಸಿಬಿಐ ಕೂಡ ಈಗಾಗಲೇ ಹಣ ಅಕ್ರಮ ವರ್ಗಾವಣೆ ಆರೋಪದಡಿ ಕೇಸ್ ದಾಖಲು ಮಾಡಿದೆ. ವಂಚನೆ, ಕ್ರಮಿನಲ್​ ಪಿತೂರಿ, ಭ್ರಷ್ಟಾಚಾರ ತಡೆ ಕಾಯ್ದೆಯ ಉಲ್ಲಂಘನೆ ಪ್ರಕರಣಗಳನ್ನು ಕಂಪನಿ ಮತ್ತು ಅದರ ಆಯ್ದ ಸಿಬ್ಬಂದಿ ವಿರುದ್ಧ ದಾಖಲು ಮಾಡಲಾಗಿದೆ. ಈ ಡೈಮಂಡ್​ ಪವರ್​, ಒಟ್ಟಾರೆ 19 ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಅವಧಿ ಸಾಲಗಳು, ಬಾಹ್ಯ ವಾಣಿಜ್ಯ ಸಾಲಗಳು ಮತ್ತು ಪರಿವರ್ತಿಸಲು ಸಾಧ್ಯವಾಗದ ಸಾಲಗಳನ್ನು ಪಡೆದುಕೊಂಡಿದೆ. ಹಾಗೇ, ಒಟ್ಟು 19 ಬ್ಯಾಂಕ್​ಗಳಿಗೆ 2,654.40 ಕೋಟಿ ರೂಪಾಯಿ ವಂಚಿಸಿದೆ ಎಂದು ಹೇಳಿರುವ ಇ.ಡಿ., ಗುಜರಾತ್​ನ ಅಹ್ಮದಾಬಾದ್​ನಲ್ಲಿರುವ ಕೋರ್ಟ್​ವೊಂದರಲ್ಲಿ ಚಾರ್ಜ್​ಶೀಟ್ ಕೂಡ ಸಲ್ಲಿಸಿದೆ.

ಇದನ್ನೂ ಓದಿ: Radhe Shyam: ಓಟಿಟಿ ರಿಲೀಸ್ ಮಾಡುವಂತೆ ‘ರಾಧೆ ಶ್ಯಾಮ್’ಗೆ ಬರೋಬ್ಬರಿ 350 ಕೋಟಿ ಆಫರ್; ಚಿತ್ರತಂಡದ ಪ್ಲಾನ್ ಏನು?

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ