
ನವದೆಹಲಿ, ಆಗಸ್ಟ್ 20: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾರ ಅಧಿಕೃತ ನಿವಾಸದಲ್ಲಿ ನಡೆಯುತ್ತಿರುವ ‘ಜನ್ ಸುನ್ವಾಯಿ ’ ಕಾರ್ಯಕ್ರಮದ ವೇಳೆ ಸಿಎಂ ರೇಖಾ ಮೇಲೆ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತೀಯ ಜನತಾ ಪಕ್ಷದ ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಗುಪ್ತಾ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ದೂರುದಾರನಂತೆ ಬಂದಿದ್ದ ವ್ಯಕ್ತಿಯೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಸಿವಿಲ್ ಲೈನ್ಸ್‌ನ ಸಿಎಂ ನಿವಾಸದಲ್ಲಿ ಜಾನ್ ಸುನ್ವಾಯಿ ಸಮಯದಲ್ಲಿ ಒಂದು ದುರ್ಘಟನೆ ಸಂಭವಿಸಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಲ್ಲೆಯನ್ನು 35 ವರ್ಷದ ವ್ಯಕ್ತಿಯೊಬ್ಬ ನಡೆಸಿದ್ದು, ಮುಖ್ಯಮಂತ್ರಿಯ ಮೇಲೆ ಹಲ್ಲೆ ನಡೆಸುವ ಮೊದಲು ಕೆಲವು ಕಾಗದಪತ್ರಗಳನ್ನು ನೀಡಿದ್ದಾನೆ. ಆಕೆಯ ಕೂದಲನ್ನು ಎಳೆದು ಕಪಾಳಮೋಕ್ಷ ಮಾಡಿದ್ದಾನೆ. ಗುಪ್ತಾಗೆ ಯಾವುದೇ ಗಾಯಗಳಾಗಿಲ್ಲದಿದ್ದರೂ, ಈ ಘಟನೆ ಅವರನ್ನು ಆಘಾತಕ್ಕೀಡು ಮಾಡಿದೆ. ದಾಳಿಕೋರನನ್ನು ಈಗ ದೆಹಲಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ರೇಖಾ ನಿವಾಸದಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ?
VIDEO | Delhi Chief Minister Rekha Gupta was allegedly attacked at a ‘Jan Sunwai’ programme at her official residence in Civil Lines. Visuals from outside her residence.
(Full video available on PTI Videos – https://t.co/n147TvqRQz) pic.twitter.com/Fv2Dfb0Gxc
— Press Trust of India (@PTI_News) August 20, 2025
ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದರ್ ಯಾದವ್ ಈ ದಾಳಿಯನ್ನು ಖಂಡಿಸಿದ್ದು, ಘಟನೆಯನ್ನು ದುರದೃಷ್ಟಕರ ಎಂದು ಕರೆದಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಅವರು, ದೆಹಲಿಯ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು, ಮುಖ್ಯಮಂತ್ರಿ ಸುರಕ್ಷಿತವಾಗಿಲ್ಲದಿದ್ದರೆ, ರಾಷ್ಟ್ರ ರಾಜಧಾನಿಯಲ್ಲಿ ಸಾಮಾನ್ಯ ವ್ಯಕ್ತಿ ಹೇಗೆ ಸುರಕ್ಷಿತವಾಗಿರಲು ಸಾಧ್ಯ ಎಂದು ಕೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:22 am, Wed, 20 August 25