ನವದೆಹಲಿ: 2020ರ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ಗೆ(Umar Khalid )ಜಾಮೀನು ಸಿಕ್ಕಿದೆ. ಖಾಲಿದ್ ಸಹೋದರಿ ಮದುವೆ ಹಿನ್ನೆಲೆ 1 ವಾರದ ಅವಧಿಗೆ ದೆಹಲಿ ಕೋರ್ಟ್ (Delhi court) ಮಧ್ಯಂತರ ಜಾಮೀನು(interim bail) ನೀಡಿದೆ.
ಡಿಸೆಂಬರ್ 23ರಿಂದ ಡಿ. 30ರವರೆಗೆ ಮಾತ್ರ ಜಾಮೀನು ನೀಡಿ ದೆಹಲಿ ಕೋರ್ಟ್ ಆದೇಶ ಹೊರಡಿಸಿದ್ದು, ಡಿ.30ರಂದು ಕೋರ್ಟ್ಗೆ ಹಾಜರಾಗುವಂತೆ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಉಮರ್ ಖಾಲಿದ್ಗೆ ಸೂಚನೆ ನೀಡಿದ್ದಾರೆ.
Delhi court grants interim bail to Umar Khalid for attending his sister’s marriage. He has been granted bail for the period of one week from 23rd to 30th December. He has to surrender on December 30. He is an accused in the larger conspiracy of Delhi riots of 2020.
(File photo) pic.twitter.com/jFB3q5cjBW
— ANI (@ANI) December 12, 2022
ಪ್ರಕರಣ ಹಿನ್ನೆಲೆ
2020, ಫೆಬ್ರವರಿ 24 ರಂದು ಮೈನ್ ಕರವಾಲ್ ನಗರ ರಸ್ತೆಯಲ್ಲಿ ಗಲಭೆಯ ಗುಂಪೊಂದು ಕಲ್ಲು ತೂರಾಟ ನಡೆಸಿದೆ ಎಂದು ಕಾನ್‌ಸ್ಟೆಬಲ್ ಸಂಗ್ರಾಮ್ ಸಿಂಗ್ ಅವರು ನೀಡಿದ್ದ ಹೇಳಿಕೆಯ ಆಧಾರದ ಮೇಲೆ ಮರ್ ಖಾಲಿದ್, ಖಾಲಿದ್ ಸೈಫಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಉಮರ್ ಖಾಲಿದ್ ಅವರು ಹಲವಾರು ಇತರ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ ಮತ್ತು ಗಲಭೆಗಳ ಹಿಂದಿನ ದೊಡ್ಡ ಪಿತೂರಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಅಡಿಯಲ್ಲಿ ಕೇಸ್ ದಾಖಲಾಗಿವೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:35 pm, Mon, 12 December 22