ದೆಹಲಿ: ರೋಹಿಣಿಯಲ್ಲಿ ಡಿಟಿಸಿ ಎಲೆಕ್ಟ್ರಿಕ್ ಬಸ್​ ಪಲ್ಟಿ, ಮೂವರಿಗೆ ಗಾಯ

|

Updated on: Nov 19, 2023 | 11:57 AM

ದೆಹಲಿಯ ಕೆಎನ್ ಕಾಟ್ಜು ಮಾರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ರೋಹಿಣಿ ಸೆಕ್ಟರ್ 15 ರಲ್ಲಿ ದೆಹಲಿ ಸಾರಿಗೆ ನಿಗಮದ ಎಲೆಕ್ಟ್ರಿಕ್ ಬಸ್ ಪಲ್ಟಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ: ರೋಹಿಣಿಯಲ್ಲಿ ಡಿಟಿಸಿ ಎಲೆಕ್ಟ್ರಿಕ್ ಬಸ್​ ಪಲ್ಟಿ, ಮೂವರಿಗೆ ಗಾಯ
ಎಲೆಕ್ಟ್ರಿಕ್ ಬಸ್
Follow us on

ದೆಹಲಿಯ ಕೆಎನ್ ಕಾಟ್ಜು ಮಾರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ರೋಹಿಣಿ ಸೆಕ್ಟರ್ 15 ರಲ್ಲಿ ದೆಹಲಿ ಸಾರಿಗೆ ನಿಗಮದ ಎಲೆಕ್ಟ್ರಿಕ್ ಬಸ್ ಪಲ್ಟಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಕೆಎನ್​ ಕಾಟ್ಜು ಮಾರ್ಗ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಎಲೆಕ್ಟ್ರಿಕ್​ ಬಸ್​ನ ಮುಂಭಾಗದ ಗಾಜು ಪುಡಿಪುಡಿಯಾಗಿದೆ. ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಬಸ್​ ಚಾಲಕನನ್ನು ವಿಚಾರಣೆ ನಡೆಸಲಾಗುತ್ತಿದೆ.
ನವೆಂಬರ್ 4 ರಂದು ದೆಹಲಿಯ ರೋಹಿಣಿ ಪ್ರದೇಶದಲ್ಲಿ ಡಿಟಿಸಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಇನ್ನೊಬ್ಬರು ಗಾಯಗೊಂಡಿದ್ದರು.

ಮತ್ತಷ್ಟು ಓದಿ: ರಾಜಸ್ಥಾನ: ಟ್ರಕ್​ಗೆ ಕಾರು ಡಿಕ್ಕಿ, ಐವರು ಪೊಲೀಸ್​ ಅಧಿಕಾರಿಗಳ ದುರ್ಮರಣ

ರೋಹಿಣಿಯ ಮದರ್ ಡಿವೈನ್ ಸ್ಕೂಲ್ ಬಳಿ ಅಪಘಾತ ಸಂಭವಿಸಿತ್ತು, ವರದಿಯ ಪ್ರಕಾರ, ಬಸ್​ ನಿಯಂತ್ರಣ ತಪ್ಪಿ ಕಾರಿ ಮತ್ತು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿತ್ತು, ನಂತರ ಬಸ್​ ಅನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ