Breaking News ಅಬಕಾರಿ ನೀತಿ ಅವ್ಯವಹಾರ ಆರೋಪ : ದೆಹಲಿ ಮತ್ತು ಪಂಜಾಬ್​​ನ 35 ಸ್ಥಳಗಳಲ್ಲಿ ಇಡಿ ದಾಳಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 07, 2022 | 9:52 AM

ದೆಹಲಿ ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಅವ್ಯವಹಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದೆಹಲಿ, ಪಂಜಾಬ್​​ನ 30 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

Breaking News ಅಬಕಾರಿ ನೀತಿ ಅವ್ಯವಹಾರ ಆರೋಪ : ದೆಹಲಿ ಮತ್ತು ಪಂಜಾಬ್​​ನ 35 ಸ್ಥಳಗಳಲ್ಲಿ ಇಡಿ ದಾಳಿ
Follow us on

ದೆಹಲಿ:  ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ (Delhi Excise Policy) ಸಂಬಂಧಿಸಿದಂತೆ ದೆಹಲಿ, ಪಂಜಾಬ್ ಮತ್ತು ಹೈದರಾಬಾದ್‌ನ ಸುಮಾರು 35 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (Enforcement Directorate)  ಇಂದು (ಶುಕ್ರವಾರ) ದಾಳಿ ನಡೆಸಿದೆ. ಈ ರಾಜ್ಯಗಳಲ್ಲಿ ಮದ್ಯ ಉದ್ಯಮಿಗಳು, ವಿತರಕರು ಮತ್ತು ಸರಬರಾಜು ಸರಪಳಿ ಜಾಲಗಳಿಗೆ ಸಂಬಂಧಿಸಿದ ಆವರಣದಲ್ಲಿ ಶೋಧ ನಡೆಸಲಾಗುತ್ತಿದೆ. ಅಬಕಾರಿ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಬಗ್ಗೆ ಸಿಬಿಐ ಎಫ್‌ಐಆರ್‌ನಿಂದ ದಾಖಲಿಸಿದ ನಂತರ ಇಡಿ ಈ ಪ್ರಕರಣ ಕೈಗೆತ್ತಿಕೊಂಡಿತ್ತು. ಇದರಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ದೆಹಲಿ ಸರ್ಕಾರದ ಕೆಲವು ಅಧಿಕಾರಿಗಳನ್ನು ಆರೋಪಿಗಳಾಗಿ ಹೆಸರಿಸಲಾಗಿದೆ.


ದೆಹಲಿ ಅಬಕಾರಿ ನೀತಿ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಸಿಬಿಐ ತನಿಖೆಗೆ ಶಿಫಾರಸು ಮಾಡಿದ ನಂತರ ಕಳೆದ ವರ್ಷ ನವೆಂಬರ್ 17 ರಿಂದ ಜಾರಿಗೆ ಬಂದ ದೆಹಲಿ ಅಬಕಾರಿ ನೀತಿಯನ್ನು ಈ ವರ್ಷದ ಜುಲೈನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ರದ್ದುಗೊಳಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗವರ್ನರ್ ಅವರು ಹನ್ನೊಂದು ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರು.

ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ  ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್  ಕೇಂದ್ರ ಸರ್ಕಾರ  ವಿರುದ್ಧ  ಕಿಡಿ ಕಾರಿದ್ದು ಇದು  ಕೊಳಕು ರಾಜಕೀಯ ಎಂದಿದ್ದಾರೆ .


ಮನೀಶ್ ಸಿಸೋಡಿಯಾ ವಿರುದ್ಧ ಪುರಾವೆಗಳನ್ನು ಹುಡುಕಲು 500 ಕ್ಕೂ ಹೆಚ್ಚು ದಾಳಿಗಳು, 3 ತಿಂಗಳಿನಿಂದ 300 ಕ್ಕೂ ಹೆಚ್ಚು ಸಿಬಿಐ / ಇಡಿ ಅಧಿಕಾರಿಗಳು 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ . ಏನನ್ನೂ ಕಂಡುಹಿಡಿಯಲಾಗಲಿಲ್ಲ. ಏಕೆಂದರೆ ಏನೂ ಮಾಡಲಾಗಿಲ್ಲ. ಅವರ ಕೊಳಕು ರಾಜಕೀಯಕ್ಕಾಗಿ ಎಷ್ಟೋ ಅಧಿಕಾರಿಗಳ ಸಮಯ ವ್ಯರ್ಥವಾಗುತ್ತಿದೆ, ಇಂತಹ ದೇಶ ಹೇಗೆ ಪ್ರಗತಿ ಹೊಂದುತ್ತದೆ? ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಹಲವು ಸುತ್ತಿನ ದಾಳಿ ನಡೆಸಿದ ತನಿಖಾ ಸಂಸ್ಥೆ ಕಳೆದ ವಾರ ಮದ್ಯದ ಉದ್ಯಮಿ ಸಮೀರ್ ಮಹೇಂದ್ರು ಅವರನ್ನು ಬಂಧಿಸಿತ್ತು.

Published On - 9:20 am, Fri, 7 October 22