2022 ರ ಜನವರಿಯಿಂದ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 1.62 ಕೋಟಿ, ಕಳೆದ 75 ವರ್ಷಗಳಲ್ಲಿ ಇದೇ ಹೆಚ್ಚು
ಮೂರು ಕುಟುಂಬಗಳ ಆಡಳಿತದಲ್ಲಿ ಜಮ್ಮು-ಕಾಶ್ಮೀರಕ್ಕೆ 70 ವರ್ಷಗಳಲ್ಲಿ ₹15,000 ಕೋಟಿ ಮಾತ್ರ ಹೂಡಿಕೆ ಬಂದಿತ್ತು, ಆದರೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇವಲ ಮೂರು ವರ್ಷಗಳಲ್ಲಿ 56,000 ಕೋಟಿ ರೂಪಾಯಿ ಹೂಡಿಕೆ...
ಶ್ರೀನಗರ: 2022 ರ ಜನವರಿಯಿಂದ ಸುಮಾರು 1.62 ಕೋಟಿ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ಭೇಟಿ ನೀಡಿದ್ದಾರೆ ಎಂದು ಕೇಂದ್ರಾಡಳಿತ ಪ್ರದೇಶ ಸರ್ಕಾರ ಗುರುವಾರ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ (DIPR) ಈ ವರ್ಷ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರವಾಸಿಗರ ಭೇಟಿ ಭಾರತದ ಸ್ವಾತಂತ್ರ್ಯದ ನಂತರ ಇದೇ ಹೆಚ್ಚು ಎಂದು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಹಿಂದೆ ಭಯೋತ್ಪಾದಕರ ತಾಣವಾಗಿದ್ದ ಪ್ರದೇಶವು ಮೋದಿ ಸರ್ಕಾರದ ನೀತಿಗಳಿಂದಾಗಿ ಈಗ ಪ್ರವಾಸಿ ತಾಣವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ ಒಂದು ದಿನದ ನಂತರ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ಮೂರು ಕುಟುಂಬಗಳ ಆಡಳಿತದಲ್ಲಿ ಜಮ್ಮು-ಕಾಶ್ಮೀರಕ್ಕೆ 70 ವರ್ಷಗಳಲ್ಲಿ ₹15,000 ಕೋಟಿ ಮಾತ್ರ ಹೂಡಿಕೆ ಬಂದಿತ್ತು, ಆದರೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇವಲ ಮೂರು ವರ್ಷಗಳಲ್ಲಿ 56,000 ಕೋಟಿ ರೂಪಾಯಿ ಹೂಡಿಕೆ ಬಂದಿದೆ ಎಂದು ಶಾ ಹೇಳಿದ್ದಾರೆ.
ಮೊದಲು ಈ ಪ್ರದೇಶವು ಭಯೋತ್ಪಾದಕರ ತಾಣವಾಗಿತ್ತು ಆದರೆ ಈಗ ಅದು ಪ್ರವಾಸಿ ತಾಣವಾಗಿದೆ. ಮೊದಲು, ಕಾಶ್ಮೀರ ಕಣಿವೆಗೆ ಪ್ರತಿ ವರ್ಷ ಗರಿಷ್ಠ ಆರು ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದರು, ಆದರೆ ಈ ವರ್ಷ ಮಾತ್ರ ಇಲ್ಲಿಯವರೆಗೆ 22 ಲಕ್ಷ ಪ್ರವಾಸಿಗರು ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಸಾವಿರಾರು ಯುವಕರಿಗೆ ಉದ್ಯೋಗ ಇದರಿಂದಾಗಿ ಸೃಷ್ಟಿಯಾಗಿದೆ ಎಂದು ಅವರು ಹೇಳಿದ್ದಾರೆ.
ಅಮಿತ್ ಶಾ ಅವರ ಜಮ್ಮು ಮತ್ತು ಕಾಶ್ಮೀರಕ್ಕೆ ಮೂರು ದಿನ ಭೇಟಿ ಬುಧವಾರ ಮುಕ್ತಾಯಗೊಂಡಿದೆ , ಅವರು ಶ್ರೀನಗರದಲ್ಲಿ ಸುಮಾರು ₹2,000 ಕೋಟಿ ವೆಚ್ಚದ 240 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಬಾರಾಮುಲ್ಲಾದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೊದಲು, ಗೃಹ ಸಚಿವರು ತಮ್ಮ ಬುಲೆಟ್ ಪ್ರೂಫ್ ಗ್ಲಾಸ್ ಅನ್ನು ಸಹ ತೆಗೆದುಹಾಕಿದ್ದಾರೆ. ಈ ಹಿಂದೆ ಅಕ್ಟೋಬರ್ 2021 ರಲ್ಲಿ ಶ್ರೀನಗರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದಾಗಲೂ ಅವರು ಹೀಗೆ ಮಾಡಿದ್ದರು.
ನಿನ್ನೆ ಬರಾಮುಲ್ಲಾದಲ್ಲಿ ನಡೆದ ರ್ಯಾಲಿಯಲ್ಲಿ ಹಿಂದಿನ ಸರ್ಕಾರಗಳ ಮೇಲೆ ಟೀಕಾ ಪ್ರಹಾರ ನಡೆಸಿದ ಶಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಅವ್ಯವಸ್ಥೆ ಸೃಷ್ಟಿಸಿದ್ದಕ್ಕಾಗಿ ಅಬ್ದುಲ್ಲಾ, ಮುಫ್ತಿ ಮತ್ತು ಗಾಂಧಿ ಕುಟುಂಬವನ್ನು ದೂಷಿಸಬೇಕು ಎಂದು ಹೇಳಿದ್ದಾರೆ.
ಕಳೆದ 70 ವರ್ಷಗಳಲ್ಲಿ ಮುಫ್ತಿ ಮತ್ತು ಅವರ ಸಂಗಡಿಗರು, ಅಬ್ದುಲ್ಲಾ ಮತ್ತು ಅವರ ಮಗ ಇಲ್ಲಿ ಅಧಿಕಾರದಲ್ಲಿದ್ದರು. ಆದರೆ 1 ಲಕ್ಷ ವಸತಿರಹಿತ ಜನರಿಗೆ ಮನೆ ನೀಡಲು ಸಾಧ್ಯವಾಗಿಲ್ಲ, 2014- 2022ರ ಅವಧಿಯಲ್ಲಿ ಮೋದಿಜಿ ಈ 1 ಲಕ್ಷ ಜನರಿಗೆ ವಸತಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಮೋದಿಜೀ ಅವರ ಆಡಳಿತದ ಮಾಡೆಲ್ ಅ ಭಿವೃದ್ಧಿ ಮತ್ತು ಉದ್ಯೋಗವನ್ನು ಸೃಷ್ಟಿಸುತ್ತದೆ . ಅದೇ ವೇಳೆ ಗುಪ್ಕಾರ್ ಮಾಡೆಲ್ ಯುವ ಜನಾಂಗದ ಕೈಯಲ್ಲಿ ಕಲ್ಲು ಮತ್ತು ಗನ್ ನೀಡುತ್ತದೆ. ಮೋದಿಯವರ ಮಾಡೆಲ್ಗೂ ಗುಪ್ಕಾರ್ ಮಾಡೆಲ್ಗೂ ತುಂಬಾನೇ ವ್ಯತ್ಯಾಸ ಇದೆ ಎಂದು ಶಾ ಹೇಳಿದ್ದಾರೆ.
ಮೋದಿಜೀ ಅವರ ಆಡಳಿತದ ಮಾಡೆಲ್ಅಭಿವೃದ್ಧಿ ಮತ್ತು ಉದ್ಯೋಗವನ್ನು ಸೃಷ್ಟಿಸುತ್ತದೆ . ಅದೇ ವೇಳೆ ಗುಪ್ಕಾರ್ ಮಾಡೆಲ್ ಯುವ ಜನಾಂಗದ ಕೈಯಲ್ಲಿ ಕಲ್ಲು ಮತ್ತು ಗನ್ ನೀಡುತ್ತದೆ. ಮೋದಿಯವರ ಮಾಡೆಲ್ ಗೂ ಗುಪ್ಕಾರ್ ಮಾಡೆಲ್ ಗೂ ತುಂಬಾನೇ ವ್ಯತ್ಯಾಸ ಇದೆ ಎಂದು ಶಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಚುನಾವಣೆ ಬಗ್ಗೆ ಮಾತನಾಡಿದ ಗೃಹ ಸಚಿವರು, ಮತದಾರರ ಪಟ್ಟಿಯನ್ನು ಕಂಪೈಲ್ ಮಾಡುವುದನ್ನು ಪೂರ್ಣಗೊಳಿಸಿದ ತಕ್ಷಣ, ಜಮ್ಮು ಮತ್ತು ಕಾಶ್ಮೀರದಲ್ಲಿ “ಸಂಪೂರ್ಣ ಪಾರದರ್ಶಕತೆಯೊಂದಿಗೆ” ಚುನಾವಣೆಗಳನ್ನು ನಡೆಸಲಾಗುವುದು ಎಂದು ಹೇಳಿದರು.