ನವದೆಹಲಿ: ಕೊರೊನಾ ಮಹಾಮಾರಿಯನ್ನ ಹತ್ತಿಕ್ಕಲು ಆರಂಭದಲ್ಲಿ ವೈಫಲ್ಯ ಕಂಡ್ರೂ ನಂತರದ ದಿನಗಳಲ್ಲಿ ಕ್ರಮೇಣ ಹಿಡಿತ ಸಾಧಿಸಿರುವ ದೆಹಲಿ ಸರ್ಕಾರ ಈಗ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ.
ಈ ಸಂಬಂಧ ಅದು ಈಗ ಸಾರ್ವಜನಿಕ ಸ್ಥಳಗಳಲ್ಲಿ ಹುಕ್ಕಾ ಸೇದುವುದನ್ನು ನಿಷೇಧಿಸಿದೆ. ಹುಕ್ಕಾ ನಿಷೇಧಕ್ಕೆ ಕಾರಣ ನೀಡಿರುವ ದೇಹಲಿ ಸರ್ಕಾರ, ಹುಕ್ಕಾವನ್ನು ಗುಂಪುಗಳಲ್ಲಿ ಸೇದುತ್ತಾರೆ. ಹುಕ್ಕಾ ಸೇದುವ ತುದಿಯನ್ನು ಬಾಯಲ್ಲಿಟ್ಟುಕೊಂಡು ಸೇದುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಇರುವುದರಿಂದ ನಿಷೇಧ ಹೇರಲಾಗಿದೆ.
ಹಾಗೇನೇ ಅದನ್ನು ಬಾರ್‌ಗಳಲ್ಲಿ ಸೇದುವುದರಿಂದ ಬಾಯಿಂದ ಬಿಡುವ ಹೊಗೆಯಿಂದ ಕೊರೊನಾ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇದೆ. ಹೀಗಾಗಿ ಹುಕ್ಕಾ ಸೇವನೆಯನ್ನು ನಿಷೇಧಿಸಲಾಗಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ.