ವರ್ಚುವಲ್ ಆಗಿಯೇ ವಿವಾಹ ನೋಂದಣಿ ಮಾಡಬಹುದು: ದೆಹಲಿ ಹೈಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Sep 13, 2021 | 1:30 PM

Delhi High Court: ದಂಪತಿ ತಮ್ಮ ಕೌನ್ಸೆಲ್/ಪವರ್ ಆಫ್ ಅಟಾರ್ನಿ ಹೋಲ್ಡರ್ ಮೂಲಕ ವಿವಾಹ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಿದ ನಂತರ ನೋಂದಾಯಿಸುವ ಪ್ರಾಧಿಕಾರದ ಮುಂದೆ ತಮ್ಮ "ವೈಯಕ್ತಿಕ ಹಾಜರಿಯನ್ನ" ಗುರುತಿಸಲು ಅನುಮತಿ ನೀಡಿದರು.

ವರ್ಚುವಲ್ ಆಗಿಯೇ ವಿವಾಹ ನೋಂದಣಿ ಮಾಡಬಹುದು: ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್
Follow us on

ದೆಹಲಿ: ವಿವಾಹಗಳನ್ನು ವಧು-ವರರ ವರ್ಚುವಲ್ ಉಪಸ್ಥಿತಿಯಲ್ಲಿ (virtual presence) ನೋಂದಾಯಿಸಬಹುದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಪ್ರಸ್ತುತ ದಿನಗಳಲ್ಲಿ ವೈಯಕ್ತಿಕ ಉಪಸ್ಥಿತಿ ಇರಲೇಬೇಕು ಎಂಬ ಕಾನೂನಿನ ಕಠಿಣ ವ್ಯಾಖ್ಯಾನದಿಂದಾಗಿ ನಾಗರಿಕರು ತಮ್ಮ ಹಕ್ಕುಗಳನ್ನು ಚಲಾಯಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ತಮ್ಮ ವಿವಾಹವನ್ನು ಇಲ್ಲಿ ನೋಂದಾಯಿಸಲು ಕೋರಿ ಅಮೆರಿಕ ಮೂಲದ ಭಾರತೀಯ ದಂಪತಿಯ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ರೇಖಾ ಪಲ್ಲಿ ವೈಯಕ್ತಿಕ ಉಪಸ್ಥಿತಿಯನ್ನು ಕಡ್ಡಾಯವಾಗಿ ಪರಿಗಣಿಸದೇ ದಂಪತಿ ತಮ್ಮ ವಿವಾಹಗಳನ್ನು ಸುಲಭವಾಗಿ ನೋಂದಾಯಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

“ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಇರುವಿಕೆಯನ್ನು ಖಾತರಿ ಪಡಿಸಿ ನೋಂದಣಿ ಆದೇಶದ ಷರತ್ತು 4 ರಲ್ಲಿನ ‘ವೈಯಕ್ತಿಕ ಹಾಜರಾತಿ’ ಎಂಬ ತೀರ್ಮಾನಕ್ಕೆ ಬರಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಬೇರೆ ಯಾವುದೇ ಅರ್ಥವಿವರಣೆಯು, ಈ ಪ್ರಯೋಜನಕಾರಿ ಶಾಸನದ ಉದ್ದೇಶವನ್ನು ನಿರಾಶೆಗೊಳಿಸುವುದಲ್ಲದೆ, ವಿಡಿಯೊ ಕಾನ್ಫರೆನ್ಸಿಂಗ್‌ನ ಈ ಪ್ರಮುಖ ಮತ್ತು ಸುಲಭವಾಗಿ ಪ್ರವೇಶಿಸಬಹುದಾದ ಉಪಕರಣದ ಬಳಕೆಯನ್ನು ದುರ್ಬಲಗೊಳಿಸುತ್ತದೆ ಎಂದು ನ್ಯಾಯಾಧೀಶರು ಸೆಪ್ಟೆಂಬರ್ 9ರಂದು ನೀಡಿದ ತಮ್ಮ ಆದೇಶದಲ್ಲಿ ಹೇಳಿದರು. ಅವರು ದೆಹಲಿ (ವಿವಾಹದ ಕಡ್ಡಾಯ ನೋಂದಣಿ) ಆದೇಶವು 2014 ಕಲ್ಯಾಣ ಶಾಸನ ಎಂದು ಅವರು ಹೇಳಿದ್ದಾರೆ.

ತಮ್ಮ ವೈಯಕ್ತಿಕ ಹಾಜರಿಯನ್ನು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದಾಗಿದ್ದರೂ ದೈಹಿಕ ಹಾಜರಿಯ ಒತ್ತಾಯವು ಖಂಡಿತವಾಗಿಯೂ ಮದುವೆಗಳ ನೋಂದಣಿಗೆ ದಂಪತಿ ಮುಂದೆ ಬರುವುದನ್ನು ಹೆಚ್ಚು ತೊಡಕಾಗಿಸುತ್ತದೆ. ಇದು ನೋಂದಣಿ ಆದೇಶವನ್ನು ಜಾರಿಗೊಳಿಸುವ ಉದ್ದೇಶವನ್ನು ನಿರಾಕರಿಸುತ್ತದೆ ಮತ್ತು ಅದನ್ನು ಅನುಮತಿಸಲಾಗುವುದಿಲ್ಲ ಎಂದು ಆದೇಶದಲ್ಲಿ ಹೇಳಿದೆ.

ದಂಪತಿ ತಮ್ಮ ಕೌನ್ಸೆಲ್/ಪವರ್ ಆಫ್ ಅಟಾರ್ನಿ ಹೋಲ್ಡರ್ ಮೂಲಕ ವಿವಾಹ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಿದ ನಂತರ ನೋಂದಾಯಿಸುವ ಪ್ರಾಧಿಕಾರದ ಮುಂದೆ ತಮ್ಮ “ವೈಯಕ್ತಿಕ ಹಾಜರಿಯನ್ನ” ಗುರುತಿಸಲು ಅನುಮತಿ ನೀಡಿದರು. ಇದನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿನ ನೋಟರಿ ಪಬ್ಲಿಕ್ ಅಥವಾ ಇಲ್ಲಿ ನೋಟರಿ ಪಬ್ಲಿಕ್ ನಿಂದ ನೋಟರಿ ಮಾಡಿರಬೇಕು.

ನೋಂದಣಿ ಪ್ರಾಧಿಕಾರವು ಸೂಚಿಸಿದ ದಿನಾಂಕದಂದು ಇಬ್ಬರು ಸಾಕ್ಷಿಗಳು ತಮ್ಮ ಮೂಲ ಗುರುತಿನ ಪುರಾವೆಗಳೊಂದಿಗೆ ಭೌತಿಕವಾಗಿ ನೋಂದಣಿ ಪ್ರಾಧಿಕಾರದ ಮುಂದೆ ಹಾಜರಾಗಬೇಕೆಂದು ಅದು ನಿರ್ದೇಶಿಸಿತು.
ನಂತರ ಪ್ರಾಧಿಕಾರವು ಮದುವೆಯನ್ನು ತ್ವರಿತವಾಗಿ ನೋಂದಾಯಿಸುತ್ತದೆ ಮತ್ತು ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ ಎರಡು ವಾರಗಳ ಅವಧಿಯಲ್ಲಿ ವಿವಾಹ ನೋಂದಣಿ ಪ್ರಮಾಣಪತ್ರವನ್ನು ನೀಡುತ್ತದೆ ಎಂದು ನ್ಯಾಯಾಲಯವು ಹೇಳಿದೆ.

ಪ್ರಸ್ತುತ ಪ್ರಕರಣದಲ್ಲಿ ದಂಪತಿ ತಮ್ಮ ವಿವಾಹವನ್ನು ಹಿಂದೂ ಧಾರ್ಮಿಕ ವಿಧಿವಿಧಾನಗಳ ಪ್ರಕಾರ 2001 ರಲ್ಲಿ ನಡೆಸಲಾಯಿತು ಎಂದು ಹೇಳಿಕೊಂಡರು, ಆದರೆ ದೆಹಲಿ (ವಿವಾಹದ ಕಡ್ಡಾಯ ನೋಂದಣಿ) ಆದೇಶ, 2014 ರ ಜಾರಿಗೆ ಮುಂಚಿತವಾಗಿ ಅವರು ವಿದೇಶಕ್ಕೆ ತೆರಳಿದ್ದರಿಂದ ನೋಂದಾಯಿಸಿಕೊಳ್ಳಲಿಲ್ಲ.

ವಿವಾಹ ಪ್ರಮಾಣಪತ್ರದ ಬೇಡಿಕೆಯಿಗಾಗಿ ಅಮೆರಿಕದಲ್ಲಿ ತಮ್ಮ ಗ್ರೀನ್ ಕಾರ್ಡ್ ಗಾಗಿ ಅವರ ಅರ್ಜಿಯನ್ನು ಈಗ ಪ್ರಕ್ರಿಯೆಗೊಳಿಸಲಾಗುತ್ತಿಲ್ಲ ಎಂದು ಪರಿಗಣಿಸಿ, ದಂಪತಿ ಇಲ್ಲಿ ಸ್ಥಳೀಯ ಪ್ರಾಧಿಕಾರವನ್ನು ವಿವಾಹ ಪ್ರಮಾಣಪತ್ರವನ್ನು ನೀಡುವುದಕ್ಕಾಗಿ ಸಂಪರ್ಕಿಸಿದರು. ಅವರು ಪಕ್ಷಗಳ ದೈಹಿಕ ಉಪಸ್ಥಿತಿಯು ಕಡ್ಡಾಯವಾಗಿದೆ ಎಂದು ಹೇಳಿದ್ದರು.

ಹಿರಿಯ ವಕೀಲರಾದ ವಿಭಾ ದತ್ತ ಮಖಿಜಾ ದಂಪತಿಯನ್ನು ಪ್ರತಿನಿಧಿಕರಿಸಿದ್ದು ವರ್ಚುವಲ್ ಹಾಜರಿಗೆ ಪ್ರಾಧಿಕಾರಉತ್ತರಿಸದೇ ಇದ್ದಾಗ ಹೈಕೋರ್ಟ್‌ಗೆ ಮೆಟ್ಟಿಲು ಹತ್ತಿದ್ದರು.  ಈ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಸಹ ವಿಡಿಯೋ ಕಾನ್ಫರೆನ್ಸಿಂಗ್ ಒಪ್ಪಿಕೊಂಡಿರುವುದನ್ನು ಉಲ್ಲೇಖಿಸಿ ನ್ಯಾಯಾಲಯ, “ಈ ಅಂಶಗಳನ್ನು ನೋಂದಣಿ ಪ್ರಾಧಿಕಾರವು ಕಡೆಗಣಿಸಿದಂತೆ ತೋರುತ್ತದೆ, ಅವರು ದಂಪತಿ ತಮ್ಮ ಮುಂದೆ ದೈಹಿಕವಾಗಿ ಹಾಜರಿರಬೇಕು ಎಂದು ಒತ್ತಾಯಿಸುತ್ತಲೇ ಇದ್ದಾರೆ.

ಇಂತಹ ಸಮಯದಲ್ಲಿ ತಂತ್ರಜ್ಞಾನವು ತಡೆರಹಿತ ಸಂವಹನವನ್ನು ಖಾತ್ರಿಪಡಿಸುವ ಸೇತುವೆಯೆಂದು ಸಾಬೀತಾದಾಗ, ಸಾರ್ವಜನಿಕ ಹಿತಾಸಕ್ತಿಗಾಗಿ ಮಾಹಿತಿಯ ವ್ಯಾಪಕ ಪ್ರಸರಣ ಮತ್ತು ಸಮಾಜದ ಸುಗಮ ಕಾರ್ಯನಿರ್ವಹಣೆಯನ್ನು ನ್ಯಾಯಾಲಯವು ದೃಢೀಕರಿಸಲು ಅನುಮತಿಸುವುದಿಲ್ಲ. ನಾಗರಿಕರು ತಮ್ಮ ಹಕ್ಕುಗಳನ್ನು ಚಲಾಯಿಸುವುದನ್ನು ತಡೆಯಲು ಕಾನೂನಿನ ಕಠಿಣ ವ್ಯಾಖ್ಯಾನವನ್ನು ನ್ಯಾಯಾಲಯ ಅನುಮತಿಸುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ನೋಂದಣಿ ಪ್ರಾಧಿಕಾರಕ್ಕೆ ನಿಯೋಜಿಸಲಾದ ಕೆಲಸವೆಂದರೆ ಈಗಾಗಲೇ ನೋಂದಣಿ ಮಾಡಿಕೊಂಡಿರುವ ಮದುವೆಯನ್ನು ನೋಂದಾಯಿಸುವುದು ಎಂದು ನ್ಯಾಯಾಲಯವು ನೋಂದಣಿ ಪ್ರಾಧಿಕಾರದ ಮುಂದೆ ವಿವಾಹವನ್ನು ನಡೆಸಲಾಗುತ್ತಿದೆ ಎಂಬ ತಪ್ಪು ಕಲ್ಪನೆಯನ್ನು ನ್ಯಾಯಾಲಯ ಸ್ಪಷ್ಟಪಡಿಸಿತು.

ಇದನ್ನೂ ಓದಿ: UP Assembly Election 2022: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದ ನೇತೃತ್ವ ವಹಿಸಲಿದ್ದಾರೆ ಪ್ರಿಯಾಂಕಾ ಗಾಂಧಿ

(Delhi High Court has ruled Marriages can be registered in the virtual presence of parties in the present times)

Published On - 1:24 pm, Mon, 13 September 21