ಪತ್ನಿ ವಿಚ್ಛೇದನ ನೀಡಿದ್ದಕ್ಕೆ ಆಘಾತಕ್ಕೊಳಗಾಗಿದ್ದ ವಕೀಲ, ಗುಂಡು ಹಾರಿಸಿಕೊಂಡು ಆತ್ಮಹತ್ಯೆ

|

Updated on: Jan 09, 2025 | 8:21 AM

ವಿಚ್ಛೇದನದಿಂದ ಬೇಸರಗೊಂಡು ವಕೀಲರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಮುಖರ್ಜಿ ನಗರದಲ್ಲಿ ವಕೀಲ ಸಮೀರ್ ಮೆಹೆಂದಿರ್ತಾ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಮೀರ್​ ಪತ್ನಿಯೊಂದಿಗೆ ಮೊಬೈಲ್​ನಲ್ಲಿ ಚಾಟ್ ಮಾಡಿದ್ದರು. ಬಳಿಕ ಇಬ್ಬರೂ ಜಗಳವಾಡಿದ್ದರು ಎನ್ನಲಾಗಿದೆ. ಬಳಿಕ ಸಮೀರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಸಮೀರ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪತ್ನಿ ವಿಚ್ಛೇದನ ನೀಡಿದ್ದಕ್ಕೆ ಆಘಾತಕ್ಕೊಳಗಾಗಿದ್ದ ವಕೀಲ, ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ನ್ಯಾಯಾಲಯ
Image Credit source: ipleaders
Follow us on

ಪತ್ನಿ ವಿಚ್ಛೇದನ ನೀಡಿದ್ದಕ್ಕೆ ಆಘಾತಕ್ಕೊಳಗಾಗಿದ್ದ ವಕೀಲರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಮುಖರ್ಜಿ ನಗರದಲ್ಲಿ ವಕೀಲ ಸಮೀರ್ ಮೆಹೆಂದಿರ್ತಾ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಮೀರ್​ ಪತ್ನಿಯೊಂದಿಗೆ ಮೊಬೈಲ್​ನಲ್ಲಿ ಚಾಟ್ ಮಾಡಿದ್ದರು. ಬಳಿಕ ಇಬ್ಬರೂ ಜಗಳವಾಡಿದ್ದರು ಎನ್ನಲಾಗಿದೆ.

ಬಳಿಕ ಸಮೀರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಸಮೀರ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು.

ಇಬ್ಬರ ಮಧ್ಯೆ ನಿತ್ಯವೂ ಜಗಳ ನಡೆಯುತ್ತಿತ್ತು, ಅಂದು ಕೂಡ ಜಗಳದ ಬಳಿಕ ಮಾಡಿದ ಕೆಲವು ಮೆಸೇಜ್​ಗಳು ಆಕೆಗೆ ಭಯ ಹುಟ್ಟಿಸಿತ್ತು, ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು, ಪೊಲೀಸರು ಅವರ ಮನೆಗೆ ಹೋಗುವಷ್ಟರಲ್ಲಿ ಅವರು ಗುಂಡು ಹಾರಿಸಿಕೊಂಡಿದ್ದರು.

ಮತ್ತಷ್ಟು ಓದಿ: Viral: ಭಾರತದಲ್ಲಿ ಅತೀ ಹೆಚ್ಚು ಡಿವೋರ್ಸ್‌ ಪ್ರಮಾಣ ಹೊಂದಿರುವ ರಾಜ್ಯಗಳಿವು

ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ದೆಹಲಿಯ ಕೆಫೆ ಮಾಲೀಕ ಪುನೀತ್ ಖುರಾನಾ ಎಂಬುವವರು ಪತ್ನಿ ವಿಚ್ಛೇದನ ನೀಡಿ ಕೆಲವೇ ದಿನಗಳಲ್ಲಿ ಪ್ರಾಣ ಕಳೆದುಕೊಂಡಿದ್ದರು. ಕಲ್ಯಾಣ್​ ವಿಹಾರ್​ನಲ್ಲಿರುವ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 54 ನಿಮಿಷಗಳ ವಿಡಿಯೋವನ್ನು ಮಾಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ