AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಭಾರತದಲ್ಲಿ ಅತೀ ಹೆಚ್ಚು ಡಿವೋರ್ಸ್‌ ಪ್ರಮಾಣ ಹೊಂದಿರುವ ರಾಜ್ಯಗಳಿವು

ದಂಪತಿಗಳು ಮದುವೆಯಾದ ನಂತರ ಡಿವೋರ್ಸ್‌ ಪಡೆದುಕೊಳ್ಳುವ ಪ್ರಕರಣಗಳು ಇತ್ತೀಚಿಗೆ ತೀರಾ ಹೆಚ್ಚಾಗುತ್ತಿದೆ. ಕೆಲವರು ಮದುವೆಯಾಗಿ ಒಂದು ತಿಂಗಳು ತುಂಬುವುದರೊಳಗೆಯೇ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದುಂಟು. ಹಿಂದೆ ವಿದೇಶಗಳಲ್ಲಿ ಕಾಮನ್‌ ಎನ್ನುವಂತಿದ್ಧ ಡಿವೋರ್ಸ್‌ ಈಗ ಭಾರತದಲ್ಲೂ ಸಾಮಾನ್ಯವಾಗುತ್ತಿದೆ. ಅದರಲ್ಲೂ ನಮ್ಮ ದೇಶದ ಈ ಎಂಟು ರಾಜ್ಯಗಳಲ್ಲಿ ಡಿವೋರ್ಸ್‌ ಪ್ರಮಾಣ ತೀರಾ ಹೆಚ್ಚಿದೆಯಂತೆ. ಆ ರಾಜ್ಯಗಳು ಯಾವುದು ಎಂಬುದನ್ನು ನೋಡೋಣ.

Viral: ಭಾರತದಲ್ಲಿ ಅತೀ ಹೆಚ್ಚು ಡಿವೋರ್ಸ್‌ ಪ್ರಮಾಣ ಹೊಂದಿರುವ  ರಾಜ್ಯಗಳಿವು
Indian states with the highest divorce rates
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on: Dec 29, 2024 | 5:31 PM

Share

ಹಿಂದೆಲ್ಲಾ ದಂಪತಿಗಳ ನಡುವೆ ಎಷ್ಟೇ ಮನಸ್ತಾಪಗಳು ಏರ್ಪಟ್ಟರು ಮಾತುಕತೆಯ ಮೂಲಕ, ಹಿರಿಯರ ಸಮ್ಮುಖದಲ್ಲಿ ಅವುಗಳನ್ನು ಸರಿಪಡಿಸುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಕಾರಣಗಳಿಗೂ ದಂಪತಿಗಳು ಡಿವೋರ್ಸ್‌ ಪಡೆದುಕೊಳ್ಳುತ್ತಿದ್ದಾರೆ. ದಾಂಪತ್ಯದಲ್ಲಿ ಒಂದು ಸಣ್ಣ ಸಮಸ್ಯೆ ಬಂದ್ರೂ ಡಿವೋರ್ಸ್‌ ಒಂದೇ ಪರಿಹಾರವೆಂದು ಜನ ಕೋರ್ಟ್‌ ಮೆಟ್ಟಿಲೇರುತ್ತಿದ್ದಾರೆ. ಹಿಂದೆಲ್ಲಾ ವಿದೇಶಗಳಲ್ಲಿ ಕಾಮನ್‌ ಎನ್ನುವಂತಿದ್ಧ ಡಿವೋರ್ಸ್‌ ಈಗಂತೂ ಭಾರತದಲ್ಲಿಯೂ ಸಾಮಾನ್ಯವಾಗುತ್ತಿದೆ. ಅದರಲ್ಲೂ ನಮ್ಮ ದೇಶದ ಈ ಎಂಟು ರಾಜ್ಯಗಳಲ್ಲಿ ಡಿವೋರ್ಸ್‌ ಪ್ರಮಾಣ ತೀರಾ ಹೆಚ್ಚಿದೆಯಂತೆ. ಆ ರಾಜ್ಯಗಳು ಯಾವುದು ಎಂಬುದನ್ನು ನೋಡೋಣ.

ವಿಚ್ಛೇದನ ಪ್ರಮಾಣ ಹೆಚ್ಚಿರುವ ಭಾರತದ 8 ರಾಜ್ಯಗಳಿವು:

ಕೇರಳ:

ತನ್ನ ಹಸಿರು ಮತ್ತು ಶ್ರೀಮಂತ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ದೇವರ ನಾಡು ಕೇರಳದಲ್ಲಿ ವಿಚ್ಛೇದನ ಪ್ರಕರಣಗಳು ತೀರಾ ಹೆಚ್ಚಿದೆಯಂತೆ. ಇಲ್ಲಿನ ವಿದ್ಯಾವಂತ ದಂಪತಿಗಳು ಹೆಚ್ಚು ಡಿವೋರ್ಸ್‌ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿ ವಿಚ್ಛೇದನ ಪ್ರಮಾಣ ಸುಮಾರು 6.3% ರಷ್ಟು ಇದೆಯಂತೆ.

ಗೋವಾ:

ಪಾರ್ಟಿ, ಬೀಚ್‌ಗಳಿಗೆ ಹೆಸರುವಾಸಿಯಾಗಿರುವ ಪ್ರವಾಸಿಗರ ನೆಚ್ಚಿನ ತಾಣವಾದ ಗೋವಾ ರಾಜ್ಯದಲ್ಲಿಯೂ ದಂಪತಿಗಳು ಹೆಚ್ಚಾಗಿ ಡಿವೋರ್ಸ್‌ ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಇಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ವಿಚ್ಛೇದನ ಪ್ರಕರಣಗಳು ವರದಿಯಾಗುತ್ತಿವೆ.

ಮಹಾರಾಷ್ಟ್ರ:

ಮಹಾರಾಷ್ಟ್ರದಲ್ಲೂ ಡಿವೋರ್ಸ್‌ ಪ್ರಕರಣಗಳು ಹೆಚ್ಚಿವೆಯಂತೆ. ಅದರಲ್ಲೂ ಭಾರತದ ವಾಣಿಜ್ಯ ರಾಜಧಾನಿ ಅಂತಾನೇ ಹೆಸರುವಾಸಿಯಾಗಿರುವ ಮುಂಬೈ ನಗರದಲ್ಲಿ ಹೆಚ್ಚು ವಿಚ್ಛೇದನ ಪ್ರಕರಣಗಳು ಕೇಳಿ ಬರುತ್ತಿವೆ. ವೃತ್ತಿ ಆಧಾರಿತ ಆದ್ಯತೆಗಳು, ಜೀವನಶೈಲಿ ಈ ಎಲ್ಲಾ ಕಾರಣಗಳಿಗೆ ಇಲ್ಲಿ ಡಿವೋರ್ಸ್‌ ಪ್ರಮಾಣ ಹೆಚ್ಚಾಗಿದೆ. ಇಲ್ಲಿನ ವಿಚ್ಛೇದನ ಪ್ರಮಾಣ ಸುಮಾರು 18.7% ರಷ್ಟಿದೆ.

ಕರ್ನಾಟಕ:

ನಮ್ಮ ಕರ್ನಾಟಕದಲ್ಲಿಯೂ ಡಿವೋರ್ಸ್‌ ಪ್ರಕರಣಗಳು ಹೆಚ್ಚಿವೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ವಾಸಿಸುವ ದಂಪತಿಗಳು ಹೆಚ್ಚಾಗಿ ಡಿವೋರ್ಸ್‌ ಪಡೆದುಕೊಳ್ಳುತ್ತಿದ್ದಾರೆ. ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ವಿಚ್ಛೇದನ ಪ್ರಮಾಣ ಸುಮಾರು 11.7% ರಷ್ಟಿದೆ.

ದೆಹಲಿ:

ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ವಿಚ್ಛೇದನ ಪ್ರಕರಣಗಳು ಹೆಚ್ಚಿವೆ. ಮುಂಬೈ ನಗರದಂತೆ ಇಲ್ಲಿನ ಜನ ಆಧುನಿಕ ಮೌಲ್ಯ, ವೃತ್ತಿ ಜೀವನ ಈ ಕೆಲವು ಕಾರಣಗಳಿಂದ ಡಿವೋರ್ಸ್‌ ಮೊರೆ ಹೋಗುತ್ತಿದ್ದಾರೆ. ಇಲ್ಲಿ ವಿಚ್ಛೇದನ ಪ್ರಮಾಣ ಸುಮಾರು 7.7% ರಷ್ಟಿದೆ.

ಇದನ್ನೂ ಓದಿ: ನೀವು ಬ್ಯಾಗ್‌ ಧರಿಸುವ ರೀತಿಯಿಂದ ನಿಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನು ತಿಳಿದುಕೊಳ್ಳಿ

ತಮಿಳುನಾಡು:

ಇತ್ತೀಚಿನ ವರ್ಷಗಳಲ್ಲಿ ತಮಿಳುನಾಡು ರಾಜ್ಯದಲ್ಲೂ ವಿಚ್ಛೇದನ ಪ್ರಕರಣಗಳು ದಿಢೀರ್‌ ಹೆಚ್ಚಾಗುತ್ತಿರುವ ಬಗ್ಗೆ ವರದಿಯಾಗಿವೆ. ಅದರಲ್ಲೂ ವಿಶೇಷವಾಗಿ ಚೆನ್ನೈ ನಗರದಲ್ಲಿ ಹೆಚ್ಚು ಡಿವೋರ್ಸ್‌ ಪ್ರಕರಣಗಳು ನಡೆಯುತ್ತಿದೆಯಂತೆ. ಈ ರಾಜ್ಯದಲ್ಲಿ ಡಿವೋರ್ಸ್‌ ಪ್ರಮಾಣ ಸುಮಾರು 7.1% ರಷ್ಟಿದೆ.

ತೆಲಂಗಾಣ:

ತಮಿಳುನಾಡಿನಂತೆ ತೆಲಂಗಾಣದಲ್ಲೂ ಡಿವೋರ್ಸ್‌ ಪ್ರಮಾಣ ಹೆಚ್ಚುತ್ತಿದೆ. ಹೈದರಬಾದ್‌ ನಗರದಲ್ಲಿ ಡಿವೋರ್ಸ್‌ ದರ ಹೆಚ್ಚಿದ್ದು, ವೃತ್ತಿ ಕಾರಣಗಳಿಗೆ ಇಲ್ಲಿ ಜನ ಡಿವೋರ್ಸ್‌ ಮೊರೆ ಹೋಗ್ತಿದ್ದಾರೆ. ಒಟ್ಟಾರೆ ಈ ರಾಜ್ಯದಲ್ಲಿ ವಿಚ್ಛೇದನ ಪ್ರಮಾನ 6.7% ರಷ್ಟಿದೆ.

ಉತ್ತರ ಪ್ರದೇಶ:

ಉತ್ತರ ಪ್ರದೇಶದಲ್ಲೂ ಡಿವೋರ್ಸ್‌ ಪ್ರಮಾಣ ಹೆಚ್ಚಿದೆ. ವಿಶೇಷವಾಗಿ ಇಲ್ಲಿನ ಲಕ್ನೋ ನಗರದಲ್ಲಿ ಡಿವೋರ್ಸ್‌ ಪ್ರಕರಣಗಳು ತೀರಾ ಹೆಚ್ಚಿವೆಯಂತೆ. ಅಂದಾಜಿನ ಪ್ರಕಾರ ಈ ರಾಜ್ಯದಲ್ಲಿ ಡಿವೋರ್ಸ್‌ ರೇಟ್‌ 8.8% ರಷ್ಟಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ