Personality Test: ನಿಮ್ಮ ಕಾಲಿನ ಆಕಾರವು ಹೇಳುತ್ತದೆ ವ್ಯಕ್ತಿತ್ವ ರಹಸ್ಯ

ಪ್ರತಿಯೊಬ್ಬರು ಒಂದೊಂದು ರೀತಿಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ವ್ಯಕ್ತಿಯೊಬ್ಬನ ಗುಣಸ್ವಭಾವ ತಿಳಿಯಲು ಆತನೊಂದಿಗೆ ಸ್ವಲ್ಪಸಮಯ ಕಳೆದರೆ ಆ ವ್ಯಕ್ತಿಯೂ ಹೇಗೆ ಎನ್ನುವುದು ತಿಳಿಯುತ್ತದೆ. ಆದರೆ ದೇಹದಲ್ಲಿನ ಅಂಗಾಂಗಗಳನ್ನು ನೋಡಿಕೊಂಡೇ ವ್ಯಕ್ತಿಯ ಹೇಗೆಂದು ನಿರ್ಣಯಿಸಬಹುದು. ಅಂದಹಾಗೆ, ಅದಲ್ಲದೆ ವ್ಯಕ್ತಿಯ ಕಾಲಿನ ಆಕಾರವನ್ನು ನೋಡಿಕೊಂಡು ವ್ಯಕ್ತಿಯೂ ಹೇಗೆ ಎಂದು ನಿರ್ಧರಿಸಬಹುದು. ಹಾಗಾದ್ರೆ ನಿಮ್ಮ ಕಾಲಿನ ಆಕಾರವನ್ನು ನೋಡಿ ನೀವು ಯಾವ ರೀತಿ ವ್ಯಕ್ತಿಯೆಂದು ತಿಳಿಯಿರಿ.

Personality Test: ನಿಮ್ಮ ಕಾಲಿನ ಆಕಾರವು ಹೇಳುತ್ತದೆ ವ್ಯಕ್ತಿತ್ವ ರಹಸ್ಯ
ಕಾಲಿನ ಆಕಾರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 30, 2024 | 3:37 PM

ಒಬ್ಬ ವ್ಯಕ್ತಿಯ ಜೊತೆಗೆ ಬೆರೆತರೆ ಮಾತ್ರವಲ್ಲ ಆ ವ್ಯಕ್ತಿಯ ದೇಹದ ಅಂಗಾಂಗಳ ಆಕಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಬಹುದು. ಕಣ್ಣು, ಮೂಗು, ಹುಬ್ಬು, ಕಿವಿ ಹೀಗೆ ಪ್ರತಿಯೊಂದು ಅಂಗಗಳು ಕೂಡ ನಮ್ಮ ವ್ಯಕ್ತಿತ್ವ, ಗುಣವನ್ನು ಪರಿಚಯ ಮಾಡುತ್ತವೆ. ಹೌದು, ನಮಗೆ ಗೊತ್ತಿಲ್ಲದೇ ನಮ್ಮಲ್ಲಿರುವ ರಹಸ್ಯಮಯ ವ್ಯಕ್ತಿತ್ವವನ್ನು ಹೊರ ಹಾಕುತ್ತವೆ ಎನ್ನುವುದು ಅಚ್ಚರಿ ಎನಿಸಿದರೂ ಸತ್ಯ. ನಿಮ್ಮ ಕಾಲಿನ ಆಕಾರದ ಮೇಲೆ ನಿಮ್ಮ ಗುಣಸ್ವಭಾವ ಹಾಗೂ ವ್ಯಕ್ತಿತ್ವ ಹೇಗೆ ಎಂದು ಸುಲಭವಾಗಿ ತಿಳಿದುಕೊಳ್ಳಿ.

  1. ಚಿತ್ರ ಎ ಯಲ್ಲಿರುವಂತೆ ಕಾಲಿನ ಆಕಾರವನ್ನು ಹೊಂದಿದ್ದರೆ, ಈ ವ್ಯಕ್ತಿಗಳು ಪ್ರೀತಿಪಾತ್ರರೊಂದಿಗೆ ಆಳವಾಗಿ ಸಂಪರ್ಕ ಹೊಂದಿರುತ್ತಾರೆ. ನಿಷ್ಠೆ ಹಾಗೂ ಪ್ರಾಮಾಣಿಕತೆ ಮತ್ತೊಂದು ಹೆಸರೇ ಈ ವ್ಯಕ್ತಿಗಳು ಎನ್ನಬಹುದು. ಈ ವ್ಯಕ್ತಿಗಳು ಭಾವನಾತ್ಮಕ ಜೀವಿಗಳಾಗಿದ್ದು, ಹಿಂದೆ ಮುಂದೆ ಯೋಚನೆ ಮಾಡದೇ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ. ತಮ್ಮ ಸರಳವಾದ ಗುಣಸ್ವಭಾವದಿಂದಲೇ ಸ್ನೇಹಿತರು ಮತ್ತು ಕುಟುಂಬದಲ್ಲಿ ನಂಬಿಕೆ ಹಾಗೂ ವಿಶ್ವಾಸಕ್ಕೆ ಪಾತ್ರರಾಗುತ್ತಾರೆ.
  2. ಚಿತ್ರ ಬಿ ಯಲ್ಲಿರುವಂತೆ ಕಾಲಿನ ಆಕಾರವನ್ನು ಹೊಂದಿರುವ ವ್ಯಕ್ತಿಗಳು ಹೃದಯವಂತ ವ್ಯಕ್ತಿಗಳಾಗಿರುತ್ತಾರೆ. ಸಾಹಸಮಯ ಪ್ರವೃತ್ತಿಯನ್ನು ಹೊಂದಿದ್ದು, ಹೊಸದನ್ನು ಮಾಡಲು ಹಾಗೂ ಕಲಿಯಲು ಇಷ್ಟ ಪಡುತ್ತಾರೆ. ಇವರ ಶಕ್ತಿಯುತ ವ್ಯಕ್ತಿತ್ವವು ಸುತ್ತಮುತ್ತಲಿನ ವ್ಯಕ್ತಿಗಳನ್ನು ಇವರತ್ತ ಆಕರ್ಷಿಸುತ್ತದೆ.
  3. ಚಿತ್ರ ಸಿಯಲ್ಲಿರುವಂತೆ ಕಾಲಿನ ಆಕಾರವನ್ನು ಹೊಂದಿರುವ ವ್ಯಕ್ತಿಗಳು ಪ್ರೀತಿ ವಿಶ್ವಾಸದಿಂದ ಕೂಡಿರುತ್ತಾರೆ. ಈ ವ್ಯಕ್ತಿಗಳು ತಮ್ಮ ಆತ್ಮೀಯ ವ್ಯಕ್ತಿಗಳ ಯೋಗಕ್ಷೇಮಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ತಮ್ಮ ಸಂತೋಷಕ್ಕಿಂತ ಇತರರ ಸಂತೋಷದಲ್ಲೇ ಹೆಚ್ಚು ಖುಷಿ ಕಾಣುತ್ತಾರೆ. ಕೊಟ್ಟು ತೆಗೆದುಕೊಳ್ಳುವ ಮನೋಭಾವವು ಸುತ್ತಲಿನ ವ್ಯಕ್ತಿಗಳ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ.
  4. ಕಾಲಿನ ಆಕಾರವ್ಯಕ್ತಿ ಚಿತ್ರ ಡಿಯಲ್ಲಿರುವಂತಿದ್ದರೆ ಆ ವ್ಯಕ್ತಿಗಳು ಇತರರಿಗೆ ಪ್ರೋತ್ಸಾಹ ನೀಡುವ ವ್ಯಕ್ತಿಗಳಾಗಿರುತ್ತಾರೆ. ಇವರ ಮಾತುಗಳು ಆಪ್ತ ಜನರಿಗೆ ಬೆಂಬಲ ಹಾಗೂ ಸಾಂತ್ವನವಾಗಿರುತ್ತದೆ. ತಮ್ಮ ಯೋಚಿಸುವ ರೀತಿ, ವಿಭಿನ್ನವಾದ ದೃಷ್ಟಿಕೋನದಿಂದ ಇತರರನ್ನು ಸೆಳೆಯುವ ವ್ಯಕ್ತಿತ್ವ ಇವರದ್ದಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ