AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cancer Yearly Horoscope 2025: ಕರ್ಕಾಟಕ ರಾಶಿಯ ಫಲಾಫಲ, ವಿವಾಹಿತರಿಗೆ ಇದು ಶುಭ ಕಾಲ

ಕರ್ಕಾಟಕ ರಾಶಿ ವರ್ಷ ಭವಿಷ್ಯ 2025: ಕಳೆದ ದಿನಗಳು ಬಹಳ ಸುಂದರ. ಎಲ್ಲವೂ ಅಂದುಕೊಂಡಂತೆ ನಡೆದು ಸಮಾಧಾನ ನಿಮ್ಮಲ್ಲಿ ಇದೆ. ಕರ್ಕಾಟಕ ರಾಶಿಯವರಿಗೆ ಈ ವರ್ಷ ಇದರ ನಿರೀಕ್ಷೆಯನ್ನು ಮಾಡುವಂತಿಲ್ಲ. ಗುರುಬಲವು ನಿಮಗೆ ಈ ವರ್ಷ ಮಧ್ಯಾವಧಿಯಿಂದ ಇರಲಾರದು. ಅಷ್ಟಮಕ್ಕೆ ಹೋಗುವ ಕಾರಣ ಅಶುಭಲಕ್ಷಣವೇ ಅಧಿಕ. ಬಹಳ ಎಚ್ಚರಿಕೆಯಿಂದ ಕಾರ್ಯವನ್ನು ಮಾಡಯವುದು, ಮಾತಿನಲ್ಲಿ ಮೃದುತ್ವ, ಆರೋಗ್ಯದ ಕಾಳಜಿ ಎಲ್ಲವೂ ಬೇಕು.

Cancer Yearly Horoscope 2025: ಕರ್ಕಾಟಕ ರಾಶಿಯ ಫಲಾಫಲ, ವಿವಾಹಿತರಿಗೆ ಇದು ಶುಭ ಕಾಲ
ಕರ್ಕಾಟಕ ರಾಶಿ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Dec 29, 2024 | 7:34 AM

Share

ಕಳೆದ ದಿನಗಳು ಬಹಳ ಸುಂದರ. ಎಲ್ಲವೂ ಅಂದುಕೊಂಡಂತೆ ನಡೆದು ಸಮಾಧಾನ ನಿಮ್ಮಲ್ಲಿ ಇದೆ. ಈ ವರ್ಷ ಇದರ ನಿರೀಕ್ಷೆಯನ್ನು ಮಾಡುವಂತಿಲ್ಲ. ಗುರುಬಲವು ನಿಮಗೆ ಈ ವರ್ಷ ಮಧ್ಯಾವಧಿಯಿಂದ ಇರಲಾರದು. ಅಷ್ಟಮಕ್ಕೆ ಹೋಗುವ ಕಾರಣ ಅಶುಭಲಕ್ಷಣವೇ ಅಧಿಕ. ಇನ್ನು ಎರಡಕ್ಕೂ ಹೆಚ್ಚು ವರ್ಷಗಳಿಂದ ಅಷ್ಟಮದಲ್ಲಿ ಇದ್ದ ಶನಿಯು ನವಮಕ್ಕೆ ಬರಲಿದ್ದಾನೆ. ನವಮದ ರಾಹು ಅಷ್ಟಮಕ್ಕೂ ತೃತೀಯದ ಕೇತುವು ದ್ವಿತೀಯಕ್ಕೂ ಬರಲಿದ್ದಾನೆ. ಒಟ್ಟಾರೆಯಾಗಿ ಈ ವರ್ಷ ಅಶುಭ ಕಾಲ. ಬಹಳ ಎಚ್ಚರಿಕೆಯಿಂದ ಕಾರ್ಯವನ್ನು ಮಾಡಯವುದು, ಮಾತಿನಲ್ಲಿ ಮೃದುತ್ವ, ಆರೋಗ್ಯದ ಕಾಳಜಿ ಎಲ್ಲವೂ ಬೇಕು.

ಆರೋಗ್ಯ: ಈ ವರ್ಷ ನಿಮ್ಮ ಆರೋಗ್ಯದ ಸ್ಥಿತಿ ಕ್ಲಿಷ್ಟಕರವಾಗಿದೆ. ನಾನಾ ಪೀಡೆಗಳಿಂದ ಬಳಲಬೇಕು. ಶಸ್ತ್ರ ಚಿಕಿತ್ಸೆ ಪಡೆಯುವ ಹಂತಕ್ಕೂ ಆರೋಗ್ಯ ಹದತಪ್ಪುವುದು. ವರ್ಷಾರಂಭದಿಂದಲೇ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡರೆ ಉತ್ತಮ.

ಪ್ರೇಮ ಮತ್ತು ವಿವಾಹ: ವಿವಾಹಕ್ಕೆ ಯೋಗ್ಯ ಕಾಲ ವರ್ಷದ ಆರಂಭದಲ್ಲಿ ಇರುವುದು. ವಿವಾಹಿತರಿಗೂ ಇದು ಶುಭ ಕಾಲ. ಅನಂತರ ವಿವಾಹಕ್ಕೆ ನಿಮಗೆ ಯೋಗ್ಯ ಕಾಲವಲ್ಲ. ಇನ್ನು ಪ್ರೇಮಕ್ಕೆ ಸಂಬಂಧಿಸಿದಂತೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದು. ಸಮಯಕ್ಕಾಗಿ ಕಾಯಬೇಕು. ಯಾವುದೇ ವಿಚಾರಗಳನ್ನು ಆತುರದಿಂದ ಮಾಡುವುದು ಬೇಡ.

ಉದ್ಯೋಗ ಮತ್ತು ಆರ್ಥಿಕತೆ: ವರ್ಷಾರಂಭದಲ್ಲಿ ಉದ್ಯೋಗ ಅಥವಾ ಉದ್ಯಮದಲ್ಲಿ ಊರ್ಜಿತ ಕಾಣಲು ಸಾಧ್ಯವಿಲ್ಲ. ನಿಮ್ಮ ಪ್ರಯತ್ನ ಉದ್ಯಮಕ್ಕೆ ಸಂಬಂಧಿಸಿದಂತೆ ಇದ್ದರೂ ಅದು ಪ್ರತಿಕೂಲವನ್ನೇ ನಿಮಗೆ ಕೊಡುವುದು. ಹಾಗಾಗಿ ಹೊಸ ಯೋಜನೆಗಳ ಬಗ್ಗೆ ಗಂಭೀರವಾಗಿ ಯೋಚಿಸುವುದು ಬೇಡ. ಇರುವ ವ್ಯವಸ್ಥೆಯನ್ನು ಕೆಲವು ಕಾಲ ಸರಿಯಾಗಿ ಮುನ್ನಡೆಸಿ.

ಕುಟುಂಬ ವ್ಯವಸ್ಥೆ: ಬಂಧುವರ್ಗದ ಜೊತೆ ಸಾಮರಸ್ಯ ಚೆನ್ನಾಗಿರುವುದು. ತಾಯಿಯ ಪ್ರೀತಿ ನಿಮಗೆ ಸಿಗಲಿದೆ. ತಾಯಿಯಿಂದ ಕೆಲವು ಆದಾಯವನ್ನೂ ನೀವು ವರ್ಷದ ಮಧ್ಯದಲ್ಲಿ ಪಡೆಯಲು ಸಾಧ್ಯ.

ಶತ್ರುಬಾಧೆ: ಯಾವುದಾದರೂ ಶತ್ರುತ್ವ ಇಟ್ಟುಕೊಳ್ಳದ ನಿಮಗೆ ಈ ವರ್ಷ ಶತ್ರುಗಳು ಆಗುವರು. ಹಿರಿಯರ ಒಳ್ಳೆಯವರ ದ್ವೇಷವನ್ನು ಮಾಡಿಕೊಳ್ಳುವಿರಿ. ಆದಷ್ಟು ಅಂತಹ ಪರಿಸ್ಥಿತಿ ಸೃಷ್ಟಿಯಾಗದಂತೆ ನೋಡಿಕೊಳ್ಳಿ. ಇದರಿಂದ ನಿಮಗೇ ತೊಂದರೆ. ನೀವು ಯಾರನ್ನೂ ದ್ವೇಷಿಸದೇ ಹಾಗೂ ನಿಮ್ಮನ್ನು ಯಾರೂ ವೈರಿಗಳಂತೆ ಕಾಣದೇ ಇರುವಂತೆ ಮಾಡಿಕೊಂಡೆ ಒಳ್ಳೆಯದು.

ಅದೃಷ್ಟ: ಈ ವರ್ಷ ನಿಮ್ಮ ಅದೃಷ್ಟ ದೇವತೆ ಪೂರ್ಣ ದ್ವಾರವನ್ನು ಹಾಕದೇ ಇದ್ದರೂ ಅಲ್ಪಮಟ್ಟಿಗೆ ತೆರೆದಿದೆ. ಹಾಗಾಗಿ ಆಗಾಗ ಅದೃಷ್ಟದ ಒಂದೊಂದೇ ಕಿರಣಗಳು ನಿಮ್ಮ ಪಾಲಿಗೆ ಸಿಕ್ಕಿ ಕಿಂಚಿತ್ ಸಂತೋಷಕ್ಕೆ ಅವಕಾಶ ಮಾಡಿಕೊಡಲಿವೆ.

ಈ ವರ್ಷ ನಿಮಗೆ ಸುಖಪ್ರದವಲ್ಲ ಎಂಬುದನ್ನು ತಲೆಯಲ್ಲಿ ಧರಿಸಿ ವರ್ಷದ ಆರಂಭದಿಂದಲೇ ಬೇಕಾದ ದೈವಾನುಗ್ರಹವನ್ನು ಬೇಡಿದರೆ ಕುತ್ತಿಗೆಯನ್ನು ತೆಗೆಯುವ ಬದಲಿಗೆ ಕೂದಲನ್ನು ಮಾತ್ರ ಕೊಟ್ಟರೆ ಸಾಕು. ಗುರುಸನ್ನಿಧಿ ನಿಮ್ನ ಎಲ್ಲ ಕಷ್ಟಗಳಿಗೆ ಪರಿಹಾರ. ಪ್ರತಿ ಗುರುವಾರ ಗುರುಚರಿತ್ರೆಯನ್ನು ಕ್ರಮಬದ್ಧವಾಗಿ ಪಠಿಸಿ.

ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:28 am, Sun, 29 December 24

Follow Us
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು