Liquor Policy Case: 8 ಗಂಟೆಗಳ ವಿಚಾರಣೆ ಬಳಿಕ ಮನೀಶ್ ಸಿಸೋಡಿಯಾರನ್ನು ಬಂಧಿಸಿದ್ದು ಏಕೆ, ಸಿಬಿಐ ಹೇಳಿದ್ದಿಷ್ಟು

|

Updated on: Feb 27, 2023 | 11:18 AM

ದೆಹಲಿಯ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಸುಮಾರು 8 ಗಂಟೆಗಳ ಕಾಲ ವಿಚಾರಣೆ ಮಾಡಿದ ಬಳಿಕ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಸಿಬಿಐ ಬಂಧಿಸಿದೆ. ಮನೀಶ್ ಸಿಸೋಡಿಯಾ ಅವರು ಭಾನುವಾರ ಅಬಕಾರಿ ನೀತಿ ಹಗರಣದ ಸಿಬಿಐ ತನಿಖೆ ಎದುರಿಸಿದ್ದರು.

Liquor Policy Case: 8 ಗಂಟೆಗಳ ವಿಚಾರಣೆ ಬಳಿಕ ಮನೀಶ್ ಸಿಸೋಡಿಯಾರನ್ನು ಬಂಧಿಸಿದ್ದು ಏಕೆ, ಸಿಬಿಐ ಹೇಳಿದ್ದಿಷ್ಟು
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ
Follow us on

ದೆಹಲಿಯ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಸುಮಾರು 8 ಗಂಟೆಗಳ ಕಾಲ ವಿಚಾರಣೆ ಮಾಡಿದ ಬಳಿಕ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಸಿಬಿಐ ಬಂಧಿಸಿದೆ.  ಮನೀಶ್ ಸಿಸೋಡಿಯಾ ಅವರು ಭಾನುವಾರ ಅಬಕಾರಿ ನೀತಿ ಹಗರಣದ ಸಿಬಿಐ ತನಿಖೆ ಎದುರಿಸಿದ್ದರು. ಬೆಳಗ್ಗೆ 11.10ಕ್ಕೆ ಸಿಬಿಐ ಕೇಂದ್ರ ಕಚೇರಿ ತಲುಪಿದರು. ತನಿಖೆ ಶುರುವಾಗುವ ಮೊದಲು, ಅವರು ಇತರ ಪಕ್ಷದ ನಾಯಕರಾದ ಸಂಜಯ್ ಸಿಂಗ್ ಮತ್ತು ಸೌರಭ್ ಭಾರದ್ವಾಜ್ ಅವರೊಂದಿಗೆ ಪೂಜೆ ಸಲ್ಲಿಸಲು ರಾಜ್‌ಘಾಟ್‌ಗೆ ತೆರಳಿದರು.

ಇಂದು ಮತ್ತೊಮ್ಮೆ ಸಿಬಿಐ ಕೇಂದ್ರ ಕಚೇರಿಗೆ ಹೋಗುತ್ತಿದ್ದೇನೆ, ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದರು. ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ದಿನೇಶ್ ಅರೋರಾ ಮತ್ತು ಇತರ ಆರೋಪಿಗಳೊಂದಿಗೆ ಆಪಾದಿತರ ಸಂಪರ್ಕ, ಮತ್ತು ಬೇರೆ ಬೇರೆ ಫೋನ್‌ಗಳಿಂದ ಸಂದೇಶ ವಿನಿಮಯದ ವಿವರಗಳು ಸೇರಿದಂತೆ ಅಬಕಾರಿ ನೀತಿಯ ವಿವಿಧ ಅಂಶಗಳ ಆಧಾರದಲ್ಲಿ ಮನೀಶ್ ಸಿಸೋಡಿಯಾ ಅವರನ್ನು ತನಿಖೆಗೆ ಒಳಪಡಿಸಿದ್ದರು.

ಮತ್ತಷ್ಟು ಓದಿ: Manish Sisodia: ದೆಹಲಿ ಮದ್ಯ ನೀತಿ ಪ್ರಕರಣ: ಮನೀಶ್ ಸಿಸೋಡಿಯಾರನ್ನು ಬಂಧಿಸಿದ ಸಿಬಿಐ

ಸಿಸೋಡಿಯಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲು ಕಸ್ಟಡಿ ವಿಚಾರಣೆ ಅಗತ್ಯ ಎಂದು ಭಾವಿಸಲಾಗಿದೆ ಹೀಗಾಗಿ ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. 2021 ರ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಆಪಾದಿತರ ಅಕ್ರಮಗಳ ಬಗ್ಗೆ ತನಿಖೆಗಾಗಿ ಉಪಮುಖ್ಯಮಂತ್ರಿ ಮತ್ತು ಉಸ್ತುವಾರಿ ಅಬಕಾರಿ ಸಚಿವ, ದೆಹಲಿಯ ಜಿಎನ್‌ಸಿಟಿಡಿ ಮತ್ತು ಇತರ 14 ಜನರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.

ದೆಹಲಿ ಸಚಿವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸಿಬಿಐ ತಿಳಿಸಿದೆ. ತನ್ನ ವಿರುದ್ಧದ ಪ್ರಕರಣವನ್ನು ಸುಳ್ಳು ಎಂದು ಕರೆದಿರುವಸಿಸೋಡಿಯಾ, ಏಳೆಂಟು ತಿಂಗಳ ಜೈಲು ಶಿಕ್ಷೆಗೆ ಸಿದ್ಧ ಎಂದು ಈ ಹಿಂದೆ ಹೇಳಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ