ಕೊರಿಯಾ ರಾಯಭಾರಿ ಕಚೇರಿ ಸಿಬ್ಬಂದಿಯ ನಾಟು ನಾಟು ನೃತ್ಯಕ್ಕೆ ಮನಸೋತ ಜನ; ಪ್ರಧಾನಿ ಮೋದಿ ಮೆಚ್ಚುಗೆ
ನಿಮಗೆ ನಾಟು ತಿಳಿದಿದೆಯೇ? ಕೊರಿಯನ್ ರಾಯಭಾರಿ ಕಚೇರಿಯ ನಾಟು ನಾಟು ನೃತ್ಯದ ಕವರ್ ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಕೊರಿಯಾದ ರಾಯಭಾರಿ ಚಾಂಗ್ ಜೇ-ಬೊಕ್ ಜೊತೆಗೆ ರಾಯಭಾರ ಕಚೇರಿಯ ಸಿಬ್ಬಂದಿಯ ನಾಟು ನಾಟು ನೋಡಿ!
ಎಸ್‌ಎಸ್ ರಾಜಮೌಳಿ (SS Rajamouli) ಅವರ ಆರ್‌ಆರ್‌ಆರ್ ಸಿನಿಮಾದ ‘ನಾಟು ನಾಟು’ (Naatu Naatu) ಹಾಡು ಮಾಡಿದ ಮೋಡಿ ಅಷ್ಟಿಷ್ಟಲ್ಲ. ಈ ಹಾಡು ಪ್ರಪಂಚದಾದ್ಯಂತ ಜನ ಮೆಚ್ಚುಗೆ ಗಳಿಸಿದ್ದು ನಾಟು ನಾಟು ಹಾಡಿನ ಹುಕ್ ಸ್ಟೆಪ್ ಗೆ ಹೆಜ್ಜೆ ಹಾಕಿದವರ ಸಂಖ್ಯೆ ಜಾಸ್ತಿಯೇ ಇದೆ. ಆಸ್ಕರ್ 2023 ರ ಅತ್ಯುತ್ತಮ ಸಂಗೀತ (ಮೂಲ ಹಾಡು) ವಿಭಾಗದಲ್ಲಿ ನಾಮನಿರ್ದೇಶನಗೊಂಡ ಹಾಡು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿತ್ತು. ರೀಲ್ಸ್, ಶಾರ್ಟ್ ವಿಡಿಯೊಗಳಲ್ಲಿ ನಾಟು ನಾಟು ಹಾಡಿಗೆ ಕುಣಿಯದವರೇ ಇಲ್ಲ ಎನ್ನುವಷ್ಟು ಇದಿ ಜನಪ್ರೀತಿ ಗಳಿಸಿದೆ. ಭಾರತದಲ್ಲಿನ ಕೊರಿಯನ್ ರಾಯಭಾರ ಕಚೇರಿ ಕೂಡಾ ಈ ಹಾಡಿನ ಕುಣಿತಕ್ಕೆ ಮರುಳಾಗಿದ್ದು ವಿಡಿಯೊವೊಂದನ್ನು ಹಂಚಿಕೊಂಡಿದೆ. ಕೊರಿಯಾದ ರಾಯಭಾರಿ ಚಾಂಗ್ ಜೇ-ಬೊಕ್ ಮತ್ತು ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ ಕೊರಿಯನ್ ಸಿಬ್ಬಂದಿ ಈ ಹಾಡಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೊ ಆಗಿದೆ ಅದು.
ವಿಡಿಯೊದ ಆರಂಭದಲ್ಲಿ, ಕುರ್ತಾ ಧರಿಸಿದ ಇಬ್ಬರು ಮಹಿಳಾ ಕೊರಿಯನ್ ಉದ್ಯೋಗಿಗಳು ಹುಕ್ ಸ್ಟೆಪ್ಸ್ ಹಾಕಿದ್ದಾರೆ. ನಂತರ ರಾಯಭಾರಿ ಕಚೇರಿಯ ಹುಲ್ಲುಹಾಸಿನಲ್ಲಿ ರಾಯಭಾರಿ ಕೂಡಾ ಇವರೊಂದಿಗೆ ಕುಣಿಯುವುದನ್ನು ಕಾಣಬಹುದು.ಇಬ್ಬರು ರಾಯಭಾರ ಕಚೇರಿಯ ಉದ್ಯೋಗಿಗಳು ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಸಿನಿಮಾದಲ್ಲಿ ಧರಿಸಿದ ವೇಷಭೂಷಣದೊಂದಿಗೆ ಕಾಣಿಸಿಕೊಂಡಿದ್ದಾರೆ. ವಿಡಿಯೊದಲ್ಲಿ ಕೊನೆಯಲ್ಲಿ ಸಂಪೂರ್ಣ ರಾಯಭಾರ ಕಚೇರಿಯ ಸಿಬ್ಬಂದಿ ಮತ್ತು ರಾಜತಾಂತ್ರಿಕರು ಫ್ಲ್ಯಾಷ್ ಮೋಬ್ ನಲ್ಲಿ ಕಾಣಿಸಿಕೊಂಡಿದ್ದಾರೆ.
????? ????? ??? ????? ????? – ?????? ??????? ?? ?????
Do you know Naatu?
We are happy to share with you the Korean Embassy’s Naatu Naatu dance cover. See the Korean Ambassador Chang Jae-bok along with the embassy staff Naatu Naatu!! pic.twitter.com/r2GQgN9fwC
— Korean Embassy India (@RokEmbIndia) February 25, 2023
“ನಿಮಗೆ ನಾಟು ತಿಳಿದಿದೆಯೇ? ಕೊರಿಯನ್ ರಾಯಭಾರಿ ಕಚೇರಿಯ ನಾಟು ನಾಟು ನೃತ್ಯದ ಕವರ್ ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಕೊರಿಯಾದ ರಾಯಭಾರಿ ಚಾಂಗ್ ಜೇ-ಬೊಕ್ ಜೊತೆಗೆ ರಾಯಭಾರ ಕಚೇರಿಯ ಸಿಬ್ಬಂದಿಯ ನಾಟು ನಾಟು ನೋಡಿ!!” ಎಂದು ಈ ವಿಡಿಯೊ ಶೇರ್ ಮಾಡಲಾಗಿದೆ. ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಅನೇಕ ಜನರು ಸಿಬ್ಬಂದಿ ಸದಸ್ಯರ ಪ್ರಯತ್ನವನ್ನು ಶ್ಲಾಘಿಸಿದ್ದು “ಅದ್ಭುತ ಪ್ರದರ್ಶನ” ಎಂದಿದ್ದಾರೆ.
ಇದನ್ನೂ ಓದಿ:Liquor Policy Case: 8 ಗಂಟೆಗಳ ವಿಚಾರಣೆ ಬಳಿಕ ಮನೀಶ್ ಸಿಸೋಡಿಯಾರನ್ನು ಬಂಧಿಸಿದ್ದು ಏಕೆ, ಸಿಬಿಐ ಹೇಳಿದ್ದಿಷ್ಟು
ಪ್ರಧಾನಿ ನರೇಂದ್ರ ಮೋದಿ ಕೂಡಾ ಈ ವಿಡಿಯೊಗೆ ಪ್ರತಿಕ್ರಿಯಿಸಿದ್ದು ಚೆಂದದ ತಂಡದ ನೃತ್ಯ ಎಂದಿದ್ದಾರೆ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು “ಸೋ ಲವ್ಲಿ… ಈ ಹೆಜ್ಜೆಗಳನ್ನು ನೋಡಿದರೆ ಯಾರಿಗಾದರೂ ಹೆಜ್ಜೆ ಹಾಕುವಂತೆ ಮಾಡುತ್ತಾರೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:47 pm, Mon, 27 February 23