ರಾಷ್ಟ್ರೀಯ ವಿಸ್ತರಣೆಯತ್ತ ಬಿಆರ್‌ಎಸ್ ಪಕ್ಷ ಮತ್ತೊಂದು ಹೆಜ್ಜೆ, ಮಹತ್ವದ ನಿರ್ಧಾರ ತೆಗೆದುಗೊಂಡ ಮುಖ್ಯಮಂತ್ರಿ ಕೆಸಿಆರ್
ದೇಶದ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಬಿಆರ್‌ಎಸ್ ಪಕ್ಷ ಸ್ಥಾಪಿಸಲಾಗಿದೆ ಎಂದಿರುವ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್, ಇದೀಗ ಪಕ್ಷದ ವಿಸ್ತರಣೆಗೆ ಒತ್ತು ನೀಡಿದ್ದಾರೆ.
ಬಿಆರ್‌ಎಸ್ ಮಹಾರಾಷ್ಟ್ರ ಕಿಸಾನ್ ಘಟಕದ ಅಧ್ಯಕ್ಷರಾಗಿ ಮಾಣಿಕ್ ಕದಮ್ ಅವರನ್ನು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (CM K Chandrashekar Rao) ನೇಮಕ ಮಾಡಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಬಿಆರ್‌ಎಸ್ ಪಕ್ಷ (Bhartiya Rashtra Samiti) ಸ್ಥಾಪಿಸಲಾಗಿದೆ ಎಂದಿರುವ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್, ಇದೀಗ ಪಕ್ಷದ ವಿಸ್ತರಣೆಗೆ ಒತ್ತು ನೀಡಿದ್ದಾರೆ. ಇದರ ಅಂಗವಾಗಿ ಇದೇ ತಿಂಗಳ 6ರಂದು ಮಹಾರಾಷ್ಟ್ರದ ನಾಂದೇಡ್ ನಲ್ಲಿ ಬೃಹತ್ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಬಿಆರ್‌ಎಸ್ ಕಿಸಾನ್ ಸೆಲ್ ಅಧ್ಯಕ್ಷರಾಗಿ ಮಾಣಿಕ್ ಕದಮ್ ಅವರನ್ನು ನೇಮಕ ಮಾಡಲಾಗಿದೆ. ಈ ಸಂಬಂಧ ನಿನ್ನೆ ಭಾನುವಾರ ಹೇಳಿಕೆ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ರೈತ ಸಂಘದ ಮುಖಂಡ ಗುರ್ನಾಮ್ ಸಿಂಗ್ ಚದುನಿ ಅವರು ಈಗಾಗಲೇ ರಾಷ್ಟ್ರಮಟ್ಟದಲ್ಲಿ ಕಿಸಾನ್ ಸೆಲ್ ಅಧ್ಯಕ್ಷರಾಗಿ ನೇಮಕಗೊಂಡಿರುವುದು ಗೊತ್ತೇ ಇದೆ. ಈ ನಡುವೆ ಕಲ್ವಕುಂಟ್ಲ ಕವಿತಾ ಅವರು ಶನಿವಾರ ಮಹಾರಾಷ್ಟ್ರದ (Maharashtra) ಮುಂಬೈಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬಿಆರ್ ಎಸ್ ಪಕ್ಷವು ಮಹಾರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾಲುದಾರನಾಗಲಿದೆ ಎಂದರು. ಮಹಾರಾಷ್ಟ್ರ ಜನರಿಗಾಗಿ ದುಡಿಯುವುದಾಗಿ ಘೋಷಿಸಿದರು.
ಟಿಆರ್‌ಎಸ್ ಬಿಆರ್‌ಎಸ್ ಆಗಿ ಪರಿವರ್ತನೆಯಾದಾಗಿನಿಂದ ಕೆಸಿಆರ್ ಸಂಪೂರ್ಣವಾಗಿ ರಾಷ್ಟ್ರ ರಾಜಕಾರಣದತ್ತ ಗಮನ ಹರಿಸಿದೆ. ಅಬ್ ಕಿ ಬಾರ್ ಕಿಸಾನ್ ಸರ್ಕಾರ್ ಎಂಬ ಘೋಷಣೆಯೊಂದಿಗೆ ರಾಷ್ಟ್ರದ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ಮಹಾರಾಷ್ಟ್ರ ಕಿಸಾನ್ ಸೆಲ್ ಅಧ್ಯಕ್ಷರ ನೇಮಕ ಕೆಸಿಆರ್ ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ. ಗುಲಾಬಿ ಬಾಸ್ ಆರಂಭದಲ್ಲಿ ತೆಲಂಗಾಣದ ಸುತ್ತಮುತ್ತಲ ರಾಜ್ಯಗಳತ್ತ ಗಮನ ಹರಿಸಿದ್ದಾರೆ ಎನ್ನಲಾಗಿದೆ.
ಕೆಸಿಆರ್ ನೇತೃತ್ವದ ಬಿಆರ್‌ಎಸ್ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ಯೋಜಿಸುತ್ತಿದೆ. ಇದರ ಭಾಗವಾಗಿ, ಪಕ್ಷದ ಚಟುವಟಿಕೆಗಳಿಗೆ ಕಚೇರಿಗಳನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು ಅನೇಕ ಜನರಿಗೆ ರಾಜ್ಯಗಳ ಜವಾಬ್ದಾರಿಗಳನ್ನು ಹಸ್ತಾಂತರಿಸಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ