ದೆಹಲಿಯಲ್ಲಿ ಶಂಕಿತ ಐಸಿಸ್ ಉಗ್ರ ಶಹನ್ವಾಜ್ ಅಲಿಯಾಸ್ ಶಫಿಯನ್ನು ಬಂಧಿಸಲಾಗಿದೆ. ದೆಹಲಿಯ ವಿಶೇಷ ಪೊಲೀಸ್ ತಂಡವು ಶಫಿಯನ್ನು ಬಂಧಿಸಿದೆ, ಉಗ್ರರ ಬಗ್ಗೆ ಸುಳಿವು ಕೊಟ್ಟವರಿಗೆ ಎನ್ಐಎ 3 ಲಕ್ಷ ರೂ ಬಹುಮಾನವನ್ನು ಘೋಷಿಸಿತ್ತು. ಪೊಲೀಸರ ಪ್ರಕಾರ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಶಹನ್ವಾಜ್ ಮೂಲತಃ ದೆಹಲಿಯವರು. ಪುಣೆ ಪೊಲೀಸರ ವಶದಿಂದ ತಪ್ಪಿಸಿಕೊಂಡು ದೆಹಲಿಯಲ್ಲಿ ವಾಸವಾಗಿದ್ದರು. ಸದ್ಯ ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.
ISIS ಪುಣೆ ಮಾಡ್ಯೂಲ್ ಪ್ರಕರಣದಲ್ಲಿ NIA 7 ಜನರನ್ನು ಬಂಧಿಸಿತ್ತು. ಈ ವೇಳೆ ಮೂವರು ಉಗ್ರರು ತಪ್ಪಿಸಿಕೊಂಡು ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದರು. ಈ ಮೂವರು ಭಯೋತ್ಪಾದಕರಲ್ಲಿ ಒಬ್ಬ ಶಹನವಾಜ್ ಅಲಿಯಾಸ್ ಶಫಿ ಉಜ್ಜಾಮ. ಮೂವರು ಐಸಿಸ್ ಉಗ್ರರು ರಾಜಧಾನಿಯಲ್ಲಿ ಅಡಗಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದಾದ ಬಳಿಕ ಪೊಲೀಸರು ಅಲರ್ಟ್ ಮೋಡ್‌ಗೆ ಬಂದು ಮೂವರಿಗಾಗಿ ಹುಡುಕಾಟ ಆರಂಭಿಸಿದ್ದರು.
ಮತ್ತಷ್ಟು ಓದಿ: Khalistan Terrorist: ಲಾಹೋರ್ನಲ್ಲಿ ಖಲಿಸ್ತಾನಿ ಉಗ್ರ ಪರಮ್ಜಿತ್ ಸಿಂಗ್ನನ್ನು ಗುಂಡಿಕ್ಕಿ ಹತ್ಯೆ
ಪುಣೆ ಐಸಿಸ್ ಪ್ರಕರಣದಲ್ಲಿ ಬೇಕಾಗಿರುವ ಇಬ್ಬರು ಭಯೋತ್ಪಾದಕರಾದ ರಿಜ್ವಾನ್ ಅಬ್ದುಲ್ ಹಾಜಿ ಅಲಿ ಮತ್ತು ಅಬ್ದುಲ್ಲಾ ಫಯಾಜ್ ಶೇಖ್ ಇನ್ನೂ ತಲೆಮರೆಸಿಕೊಂಡಿದ್ದಾರೆ. ಅವರನ್ನೂ ಪೊಲೀಸರು ಹುಡುಕುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ