2500 ಕೋಟಿ ರೂ.ಮೌಲ್ಯದ ಹೆರಾಯಿನ್​ ವಶಪಡಿಸಿಕೊಂಡ ದೆಹಲಿ ಪೊಲೀಸರು; ಅಫ್ಘಾನಿಸ್ತಾನದಿಂದ ಪೂರೈಕೆ, ಪಾಕಿಸ್ತಾನದಿಂದ ಧನ ಸಹಾಯ !

| Updated By: Lakshmi Hegde

Updated on: Jul 10, 2021 | 5:00 PM

2500 ಕೋಟಿ ರೂ. ಬೆಲೆಯ ಈ ಡ್ರಗ್ಸ್​ ರವಾನೆ ಪ್ರಕರಣವನ್ನು ಭೇದಿಸಿದ ನಂತರ ಮಾತನಾಡಿದ ದೆಹಲಿ ವಿಶೇಷ ಸೆಲ್​​ನ ನೀರಜ್​ ಠಾಕೂರ್​, ಮಾದಕ ದ್ರವ್ಯದ ವಿರುದ್ಧ ಕಾರ್ಯಾಚರಣೆ ಕಳೆದ ಕೆಲವು ತಿಂಗಳುಗಳಿಂದಲೂ ನಡೆಯುತ್ತಿದೆ ಎಂದಿದ್ದಾರೆ.

2500 ಕೋಟಿ ರೂ.ಮೌಲ್ಯದ ಹೆರಾಯಿನ್​ ವಶಪಡಿಸಿಕೊಂಡ ದೆಹಲಿ ಪೊಲೀಸರು; ಅಫ್ಘಾನಿಸ್ತಾನದಿಂದ ಪೂರೈಕೆ, ಪಾಕಿಸ್ತಾನದಿಂದ ಧನ ಸಹಾಯ !
ಪ್ರಾತಿನಿಧಿಕ ಚಿತ್ರ
Follow us on

ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಡ್ರಗ್ಸ್​ ಜಾಲವನ್ನು ದೆಹಲಿ ಪೊಲೀಸರು ಬೇಧಿಸಿದ್ದಾರೆ. ಸುಮಾರು 354 ಕೆಜಿಗಳಷ್ಟು ಒಳ್ಳೆಯ ಗುಣಮಟ್ಟದ ಹೆರೋಯಿನ್​​ನ್ನು ವಶಪಡಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ. ಈ 354 ಕೆಜಿ ಹೆರಾಯಿನ್​​ ಸುಮಾರು 2500 ಕೋಟಿ ರೂಪಾಯಿ ಬೆಲೆಬಾಳುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಲ್ಲಿ ಮೂವರು ಹರ್ಯಾಣದವರಾಗಿದ್ದು, ಒಬ್ಬ ದೆಹಲಿಯವನು ಎನ್ನಲಾಗಿದೆ. ದೆಹಲಿ ವಿಶೇಷ ಸೆಲ್​ನ ಪೊಲೀಸ್​ ಸಿಬ್ಬಂದಿ ಬೇಧಿಸಿದ ಮಾದಕದ್ರವ್ಯ ಪ್ರಕರಣಗಳಲ್ಲೇ ಇದು ಅತ್ಯಂತ ದೊಡ್ಡ ಕೇಸ್​​ ಎಂದು ಹೇಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಶಂಕಿತರ ವಿಚಾರಣೆಯನ್ನು ಅದಾಗಲೇ ಪೊಲೀಸರು ಪ್ರಾರಂಭಿಸಿದ್ದಾರೆ.

2500 ಕೋಟಿ ರೂ. ಬೆಲೆಯ ಈ ಡ್ರಗ್ಸ್​ ರವಾನೆ ಪ್ರಕರಣವನ್ನು ಭೇದಿಸಿದ ನಂತರ ಮಾತನಾಡಿದ ದೆಹಲಿ ವಿಶೇಷ ಸೆಲ್​​ನ ನೀರಜ್​ ಠಾಕೂರ್​, ಮಾದಕ ದ್ರವ್ಯದ ವಿರುದ್ಧ ಕಾರ್ಯಾಚರಣೆ ಕಳೆದ ಕೆಲವು ತಿಂಗಳುಗಳಿಂದಲೂ ನಡೆಯುತ್ತಿದೆ. ಅಫ್ಘಾನಿಸ್ತಾನದಿಂದ ಡ್ರಗ್ಸ್​ ನಮ್ಮಲ್ಲಿಗೆ ಬರುತ್ತಿದೆ. ನಂತರ ಮುಂಬೈನಿಂದ ದೆಹಲಿಗೆ ಸಮುದ್ರ ಮಾರ್ಗದ ಮೂಲಕ, ಕಂಟೈನರ್​ಗಳಲ್ಲಿ ತರಲಾಗುತ್ತದೆ. ಆದರೆ ಈ ಕಂಟೈನರ್​​ಗಳನ್ನು ತುಂಬ ಗುಪ್ತವಾಗಿ ಸಾಗಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಅಫ್ಘಾನಿಸ್ತಾನದಿಂದ ತರಲಾದ ಡ್ರಗ್ಸ್​​ನ್ನು ಮಧ್ಯಪ್ರದೇಶದ ಶಿವಪುರಿ ಸಮೀಪ ಇರುವ ಕಾರ್ಖಾನೆಯಲ್ಲಿ ಇನ್ನಷ್ಟು ಸಂಸ್ಕರಿಸಲಾಗುತ್ತದೆ. ಅದನ್ನು ಅಡಗಿಸಿಡಲು ಫರಿದಾಬಾದ್​ನಲ್ಲಿ ಬಾಡಿಗೆ ಮನೆಯನ್ನೂ ಪಡೆಯಲಾಗಿದೆ. ಆದರೆ ಇದರ ಲಿಂಕ್​ ಆಪರೇಟರ್​​ ಅಫ್ಘಾನಿಸ್ತಾನದಲ್ಲೇ ಕುಳಿತಿರುತ್ತಾರೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಪಂಜಾಬ್​ಗೂ ಈ ಹೆರಾಯಿನ್ ಪೂರೈಕೆಯಾಗುತ್ತದೆ. ಇನ್ನು ಇದಕ್ಕೆ ಹಣಕಾಸು ಸಹಕಾರ ಪಾಕಿಸ್ತಾನದಿಂದ ಸಿಗುತ್ತಿದೆ ಎಂಬ ಮಾಹಿತಿಯೂ ಸಿಕ್ಕಿದೆ ಎಂದು ಹೇಳಿದ್ದಾರೆ.

ಕಳೆದ ತಿಂಗಳು ದೆಹಲಿಯ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್​ ಸಾಗಣೆ ಜಾಲವನ್ನು ಭೇದಿಸಿತ್ತು. 8 ಮಂದಿ ಬಂಧಿಸಲ್ಪಟ್ಟಿದ್ದರು. 22 ಲಕ್ಷ ಸೈಕೋಟ್ರೋಪಿಕ್ ಮಾತ್ರೆಗಳು ಮತ್ತು 245 ಕೆಜಿ ಹೆರಾಯಿನ್​​ಗಳನ್ನು ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ: Noise Pollution: ಪಟಾಕಿ ಸಿಡಿಸುವ ಮುನ್ನ ಎಚ್ಚರ; ಈ ಸಿಟಿಯಲ್ಲಿ ಶಬ್ದ ಮಾಲಿನ್ಯ ಮಾಡಿದವರಿಗೆ 1 ಲಕ್ಷ ರೂ. ದಂಡ!

Delhi Police seizes 350 kg of heroin and 4 arrested