ದಕ್ಷಿಣ ದೆಹಲಿಯ ಪಂಚಶೀಲ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಮೂರು ದಿನಗಳ ಹಿಂದೆ ಅಪಘಾತವೊಂದು ಸಂಭವಿಸಿತ್ತು. ಚಲನಚಿತ್ರ ನಿರ್ಮಾಪಕ ಪಿಯೂಷ್ ಪಾಲ್ ರಾತ್ರಿ 9.45ರ ಸುಮಾರಿಗೆ ಕೆಲಸ ಮುಗಿಸಿ ಬೈಕ್ನಲ್ಲಿ ಮರಳುತ್ತಿದ್ದರು. ಪಾಲ್ ಅವರ ಬೈಕ್ಗೆ ಇನ್ನೊಂದು ಬೈಕ್ ಹೊಡೆದಿದ್ದರಿಂದ ತಲೆಗೆ ಗಂಭೀರ ಗಾಯಗಳಾಗಿತ್ತು.
ಅಪಘಾತದಲ್ಲಿ ಮತ್ತೋರ್ವ ಬೈಕ್ ಸವಾರ ಬಾದರ್‌ಪುರ ನಿವಾಸಿ ಬಂಟಿ ಕುಮಾರ್‌ಗೂ ಗಂಭೀರ ಗಾಯಗಳಾಗಿವೆ.
ಅಪಘಾತದ ಬಳಿಕ ಪಾಲ್ ರಕ್ತಸಿಕ್ತವಾಗಿ ಕೆಳಗೆ ಬಿದ್ದಿದ್ದರು, ಆದರೆ ಆ್ಯಂಬುಲೆನ್ಸ್ಗಾಗಲಿ ಅಥವಾ ಪೊಲೀಸರಿಗಾಗಲಿ ಕರೆ ಮಾಡುವ ಬದಲು ಜನರು ವಿಡಿಯೋ ಮಾಡುತ್ತಾ ನಿಂತಿದ್ದರು.
ಅಷ್ಟೇ ಅಲ್ಲ ಅಲ್ಲಿದ್ದ ಜನ ಲ್ಯಾಪ್ಟಾಪ್, ಕ್ಯಾಮೆರಾವನ್ನು ಕೂಡ ಕದ್ದಿದ್ದಾರೆ. ರಾತ್ರಿ 10.11ರ ಸುಮಾರಿಗೆ ಅಪಘಾತದ ಬಗ್ಗೆ ಪಿಸಿಆರ್ಗೆ ಕರೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಸ್ಥಳದಲ್ಲಿ ಹಾದು ಹೋಗುತ್ತಿದ್ದ ಪಂಕಜ್ ಮಿಸ್ತ್ರಿ ಎಂಬುವವರು ಪೊಲೀಸರಿಗೆ ಕರೆ ಮಾಡಿದ್ದರು.
ರಸ್ತೆಯಲ್ಲಿ ಓರ್ವ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿದ್ದರು, ತಲೆಯಿಂದ ತುಂಬಾ ರಕ್ತಸ್ರಾವವಾಗುತ್ತಿತ್ತು. ಬೈಕ್ ಕೆಲವೇ ಮೀಟರ್ ದೂರದಲ್ಲಿ ಬಿದ್ದಿತ್ತು. ನಂತರ ಬೈಕ್ ಸವಾರ ಟ್ಯಾಕ್ಸಿಯೊಂದನ್ನು ಕರೆದು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರು.
ನಾವು ಹತ್ತಿರದ ಆಸ್ಪತ್ರೆಗೆ ಹೋದೆವು ಆದರೆ ಅದು ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿಲ್ಲದ ಕಾರಣ, ಪಾಲ್ ಅವರನ್ನು PSRI ಆಸ್ಪತ್ರೆಗೆ ಕರೆದೊಯ್ದಿದ್ದರು. ಅದು ಇನ್ನೊಂದು ಗಂಟೆ ತೆಗೆದುಕೊಂಡಿತು. ಮೂರು ದಿನಗಳ ಬಳಿಕ ಪಾಲ್ ಮೃತಪಟ್ಟಿದ್ದಾರೆ.
ಬಂಟಿ ಹೇಳಿಕೆ ಮತ್ತು ಸಿಸಿಟಿವಿ ದೃಶ್ಯಗಳ ಸಾಕ್ಷ್ಯದ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬುಧವಾರ ಶವವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ