AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರಾಜಾಧಾನಿ ಬೆಂಗಳೂರಿನಲ್ಲಿ ರಾತ್ರಿ ಕತ್ತಲಲ್ಲಿ ಜನನಿಬಿಡ ಪ್ರದೇಶದಲ್ಲಿ ರಿವೆಂಜಿಗೆ ಬಿದ್ದಂತೆ ವ್ಯಕ್ತಿಯ ಮೇಲೆ ಸ್ಕಾರ್ಪಿಯೊ ಹತ್ತಿಸಿ, ಹತ್ಯೆ: ಏನಿದು ಪೈಶಾಚಿಕ ಕೃತ್ಯ?

Pulikeshi Nagar: ಆರೋಪಿಯೊಬ್ಬ ಸ್ಕಾರ್ಪಿಯೊ ಎಸ್‌ಯುವಿ ಚಲಾಯಿಸುತ್ತಾ ವ್ಯಕ್ತಿಯನ್ನು ಹಿಂಬಾಲಿಸಿ ಹೊಡೆದು ಉರುಳಿಸಿದ್ದಾನೆ. ಇದೆಲ್ಲಾ ವೀಡಿಯೊದಲ್ಲಿ ದಾಖಲಾಗಿದ್ದು, ಅದರಲ್ಲಿ ಬಲಿಯಾದ ವ್ಯಕ್ತಿಯನ್ನು ಅಸ್ಗರ್ ಎಂದು ಗುರುತಿಸಲಾಗಿದೆ. ಆತ ರಸ್ತೆಯ ಉದ್ದಗಲಕ್ಕೂ ತನ್ನ ಪ್ರಾಣಕ್ಕಾಗಿ ಹತಾಶವಾಗಿ ಓಡುವುದನ್ನು ಕಾಣಬಹುದು.

Video: ರಾಜಾಧಾನಿ ಬೆಂಗಳೂರಿನಲ್ಲಿ ರಾತ್ರಿ ಕತ್ತಲಲ್ಲಿ ಜನನಿಬಿಡ ಪ್ರದೇಶದಲ್ಲಿ ರಿವೆಂಜಿಗೆ ಬಿದ್ದಂತೆ ವ್ಯಕ್ತಿಯ ಮೇಲೆ ಸ್ಕಾರ್ಪಿಯೊ ಹತ್ತಿಸಿ, ಹತ್ಯೆ: ಏನಿದು ಪೈಶಾಚಿಕ ಕೃತ್ಯ?
ಬೆಂಗಳೂರಿನಲ್ಲಿ ರಾತ್ರಿ ಕತ್ತಲಲ್ಲಿ ಜನನಿಬಿಡ ಪ್ರದೇಶದಲ್ಲಿ ರಿವೆಂಜಿಗೆ ಬಿದ್ದಂತೆ ವ್ಯಕ್ತಿಯ ಮೇಲೆ ಸ್ಕಾರ್ಪಿಯೊ ಹತ್ತಿಸಿ, ಹತ್ಯೆ
ಸಾಧು ಶ್ರೀನಾಥ್​
|

Updated on:Nov 02, 2023 | 11:08 AM

Share

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪೈಶಾಚಿಕ ಮತ್ತು ಆಘಾತಕಾರಿ ಘಟನೆಯೊಂದು ನಡೆದಿದೆ. ರಾತ್ರಿ ಕತ್ತಲಲ್ಲಿ ಉದ್ದೇಶಪೂರ್ವಕವಾಗಿ ಸ್ಪೋರ್ಟ್ಸ್​​​ ಕಾರನ್ನು (Scorpio SUV) ಮೋಟಾರು ಸೈಕಲ್ ಸವಾರನ ಮೇಲೆ ಹತ್ತಿಸಿ, ಆತನನ್ನು ನೆಲಕ್ಕೆ ಬೀಳಿಸಿ, ಮತ್ತೆ ಆತನ ಮೇಲೆ ಕಾರು ಹತ್ತಿಸಿ ಕೊಲೆ (Murder) ಮಾಡಲಾಗಿದೆ. ಈ ಹತ್ಯೆ ಆರೋಪದ ಮೇಲೆ ಬೆಂಗಳೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ದಾರುಣ ಘಟನೆ ಪುಲಿಕೇಶಿ ನಗರದಲ್ಲಿ (Pulikeshi Nagar in Bengaluru) ನಡೆದಿದ್ದು, ಅಕ್ಟೋಬರ್ 18 ರ ಮಧ್ಯರಾತ್ರಿ 12:30 ರ ಸುಮಾರಿಗೆ ಸಂಭವಿಸಿದೆ ಎಂದು oneindia.com ವರದಿ ಮಾಡಿದೆ. ದಾಖಲಾರ್ಹ ಸಂಗತಿಯೆಂದರೆ ಇಡೀ ವೃತ್ತಾಂತವನ್ನು ದಾರಿಹೋಕರು ಮೊಬೈಲ್​​ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಆರೋಪಿಯೊಬ್ಬ ಸ್ಕಾರ್ಪಿಯೊ ಎಸ್‌ಯುವಿ ಚಲಾಯಿಸುತ್ತಾ ವ್ಯಕ್ತಿಯನ್ನು ಹಿಂಬಾಲಿಸಿ ಹೊಡೆದು ಉರುಳಿಸಿದ್ದಾನೆ. ಇದೆಲ್ಲಾ ವೀಡಿಯೊದಲ್ಲಿ ದಾಖಲಾಗಿದ್ದು, ಅದರಲ್ಲಿ ಬಲಿಯಾದ ವ್ಯಕ್ತಿಯನ್ನು ಅಸ್ಗರ್ ಎಂದು ಗುರುತಿಸಲಾಗಿದೆ. ಆತ ರಸ್ತೆಯ ಉದ್ದಗಲಕ್ಕೂ ತನ್ನ ಪ್ರಾಣಕ್ಕಾಗಿ ಹತಾಶವಾಗಿ ಓಡುವುದನ್ನು ಕಾಣಬಹುದು. ವಿಷಾದನೀಯ ಸಂಗತಿಯೆಂದರೆ, ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ ಆಗಿದ್ದ ಅಸ್ಗರ್ ನನ್ನು ಪಟ್ಟುಬಿಡದೆ ಹಂತಕ ಪಡೆ ಆತನನ್ನು ನಡು ರಸ್ತೆಯಲ್ಲಿ ರಾತ್ರಿಗತ್ತಲಲ್ಲಿ ದಾರುಣವಾಗಿ ಸಾಯಿಸಿದೆ. ವರದಿಗಳ ಪ್ರಕಾರ, ಈ ಪ್ರಕರಣದ ಪ್ರಾಥಮಿಕ ಶಂಕಿತನನ್ನು ಅಮರೀನ್ ಎಂದು ಗುರುತಿಸಲಾಗಿದೆ.

Also read: ರಾಯಚೂರು -ಮಾರಕಾಸ್ತ್ರಗಳಿಂದ ಕೊಚ್ಚಿ, ಮುಂಗೈ ತುಂಡರಸಿ ದಲಿತ ಮುಖಂಡನ ಬರ್ಬರ ಹತ್ಯೆ

ಈ ಭೀಕರ ಘಟನೆಗೆ ಮೂಲ ಕಾರಣ ಆರೋಪಿಗಳಾದ ಅಮರೀನ್ ಮತ್ತು ಅಸ್ಗರ್ ನಡುವಿನ ಹಣಕಾಸಿನ ವಿವಾದ. ಅಮರೀನ್ ಅವರು ಅಸ್ಗರ್ ಅವರಿಂದ ವಾಹನವನ್ನು ಪಡೆದಿದ್ದರು. ಆದರೆ 4 ಲಕ್ಷ ರೂಪಾಯಿ ಸಾಲವನ್ನು ವಾಪಸ್​ ಕೊಡಲು ಸಾಧ್ಯವಾಗಿರಲಿಲ್ಲ ಎಂದು ವರದಿಯಾಗಿದೆ.

ಈ ಬಗೆಹರಿಯದ ಹಣಕಾಸಿನ ವಿಷಯವು ಅಂತಿಮವಾಗಿ ಹಿಂಸಾತ್ಮಕ ರೂಪಕ್ಕೆ ತಿರುಗಿ ಅಸ್ಗರ್‌ನ ಜೀವನವನ್ನು ಬಲಿ ತೆಗೆದುಕೊಂಡಿದೆ. ಇದರಿಂದಾಗಿ ಅಮ್ರೀನ್ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದ್ದು, ಇದೀಗ ಕೊಲೆ ಆರೋಪ ಎದುರಿಸುತ್ತಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:08 am, Thu, 2 November 23

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!