ದೆಹಲಿ: ರಸ್ತೆಯಲ್ಲಿ ಯುವಕನ ಮೇಲೆ 7 ಬಾಲಕರಿಂದ ಮಾರಣಾಂತಿಕ ಹಲ್ಲೆ

|

Updated on: Sep 01, 2024 | 12:52 PM

ರಸ್ತೆಯಲ್ಲಿ ಏಳು ಮಂದಿ ಅಪ್ರಾಪ್ತ ಬಾಲಕರು ಸೇರಿ ಯುವಕನ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಬಾಲಕರು 8 ಕಡೆ ಚಾಕುವಿನಿಂದ ದಾಳಿ ನಡೆಸಿದ್ದಾರೆ.

ದೆಹಲಿ: ರಸ್ತೆಯಲ್ಲಿ ಯುವಕನ ಮೇಲೆ 7 ಬಾಲಕರಿಂದ ಮಾರಣಾಂತಿಕ ಹಲ್ಲೆ
ಕ್ರೈಂ
Follow us on

ರಸ್ತೆಯಲ್ಲಿ ಏಳು ಮಂದಿ ಅಪ್ರಾಪ್ತ ಬಾಲಕರು ಸೇರಿ ಯುವಕನ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಬಾಲಕರು 8 ಕಡೆ ಚಾಕುವಿನಿಂದ ದಾಳಿ ನಡೆಸಿದ್ದಾರೆ.

ಗಾಯಗೊಂಡಿರುವ ಯುವಕನನ್ನು ಯಶ್ ಎಂದು ಗುರುತಿಸಲಾಗಿದೆ. ಅಪ್ರಾಪ್ತ ಬಾಲಕರ ಗುಂಪು ಶುಕ್ರವಾರ ರಾಜು ಪಾರ್ಕ್​​ ನಿವಾಸಿ ಯಶ್ ಅವರ ಮೇಲೆ ಹಲ್ಲೆ ನಡೆಸಿತ್ತು. ಎಲ್ಲಾ ಏಳು ಬಾಲಕರನ್ನು ಬಂಧಿಸಲಾಗಿದೆ. ಘಟನೆಗೆ ಬಳಸಿದ್ದ ನಾಲ್ಕು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಯಶ್ ಹಾಗೂ ಅವರ ಕೆಲವು ಸ್ನೇಹಿತರು ದೇವ್ಲಿ ರಸ್ತೆಯಲ್ಲಿ ನಿಂತಿದ್ದರು, ಇಬ್ಬರು ಹುಡುಗರು ಬೈಕ್​ನಲ್ಲಿ ಬಂದು ಅವರ ಎದುರಿಗೆ ನಿಲ್ಲಿಸಿದರು. ಅಂದು ಯಶ್ ಹಾಗೂ ಅವರ ಸ್ನೇಹಿತರು ಇಬ್ಬರುಹುಡುಗರಿಗೆ ಥಳಿಸಿದ್ದರು.

ಮತ್ತಷ್ಟು ಓದಿ: Shocking News: ಪತಿಯನ್ನು ಕೊಂದು ಬಾತ್ ರೂಂನಲ್ಲಿ ಶವ ಹೂತಿಟ್ಟ ಹೆಂಡತಿ; ಕೊಲೆಯ ರಹಸ್ಯ ಬಯಲಾಗಿದ್ದು ಹೇಗೆ?

ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಇಬ್ಬರು ಹುಡುಗರು ತನ್ನ ಐವರು ಸ್ನೇಹಿತರೊಂದಿಗೆ ಸೇರಿ ಯಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲವು ಬಾರಿ ಚಾಕುವಿನಿಂದ ಇರಿದಿದ್ದಾರೆ.

ಕೆಲವು ದಿನಗಳ ಹಿಂದೆ ದೆಹಲಿಯ ಗೋಕುಲ್ಪುರಿ ಪ್ರದೇಶದಲ್ಲಿ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ