ದೆಹಲಿ: ಕೊರೊನಾ ಎರಡನೆಯ ಅಲೆ ದೇಶದಲ್ಲಿ ಜೋರಾಗಿಯೇ ಬೀಸಿತ್ತು. ಆದರೆ ವಾಣಿಜ್ಯ ರಾಜಧಾನಿ ಮುಂಬೈ ಮತ್ತು ರಾಷ್ಟ್ರ ರಾಜಧಾನಿ ದೆಹಲಿಗಳಲ್ಲಿ ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಅಲ್ಲೀಗ ಕೊರೊನಾ ಮಾರಿ ಈಗ ನಿಯಂತ್ರಣಕ್ಕೆ ಬರುತ್ತಿದೆ. ಇದಕ್ಕೆ ಮುಖ್ಯವಾಗಿ ಕಾರಣವಾಗಿದ್ದು ಲಾಕ್‌ಡೌನ್ ಎಂಬ ಮಹಾದಂಡದ ಪ್ರಯೋಗ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವುದರಿಂದ ಅಲ್ಲಿನ್ನು ಮೂರೇ ಮೂರು ದಿನದಲ್ಲಿ ಲಾಕ್‌ಡೌನ್ ನಿಯಂತ್ರಣವನ್ನು ತೆಗೆದುಹಾಕಲಾಗುವುದು.
ಮೇ 31ರ ಬಳಿಕ ದೆಹಲಿಯಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡುವುದಾಗಿ ಹೇಳಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿಯಲ್ಲಿ 1,100 ಕೊರೊನಾ ಕೇಸ್ ಮಾತ್ರ ಪತ್ತೆಯಲ್ಲಿದೆ. ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ. 1.5 ರಷ್ಟು ಮಾತ್ರ ಇದೆ. ಹಾಗಾಗಿ ಇದು ಆನ್ ಲಾಕ್ ಮಾಡುವ ಸಮಯ. ಅದಕ್ಕೆ ಜೂನ್ 1ರಿಂದ ಹಂತಹಂತವಾಗಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
ದೇಶದ ಇತರೆ ಭಾಗಗಳಲ್ಲಿ ಅನ್ಲಾಕ್ ಯಾವಾಗ?:
ಈ ಹಿಂದೆ, ದೆಹಲಿಯಲ್ಲಿ ಲಾಕ್‌ಡೌನ್ ಇನ್ನೊಂದು ವಾರ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದರಾದರೂ ಇಂದು ಲೆಫ್ಟಿನೆಟ್ ಗವರ್ನರ್ ಜೊತೆ ನಡೆದ ಸಭೆಯ ಬಳಿಕ ಲಾಕ್‌ಡೌನ್ ಅನ್ನು ಹಂತಹಂತವಾಗಿ ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸಿದ್ದಾರೆ. ದೆಹಲಿಯಲ್ಲಿ ಇಂತಹ ಬದಲಾವಣೆ ಚೇತೋಹಾರಿಯಾಗಿದ್ದು, ದೇಶದ ಇತರೆ ಭಾಗಗಳಲ್ಲಿಯೂ ಕೊರೊನಾ ನಿಯಂತ್ರಣಕ್ಕೆ ಬಂದರೆ ಲಾಕ್ಡೌ್ನ್ ಎಂಬ ಅಸ್ತ್ರ ಶೀಘ್ರವೇ ಸಡಿಲಿಕೆಯಾಗುವ ನಿರೀಕ್ಷೆಯಿದೆ.
ತಾತ್ಕಾಲಿಕವಾಗಿ ದೆಹಲಿಯಲ್ಲಿ ಕೆಲ ಚಟುವಟಿಕೆ ಪುನರ್ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ದೆಹಲಿಯಲ್ಲಿ ಮೇ 31 ರ ಬಳಿಕ ಕಾರ್ಖಾನೆಗಳು ಪುನರ್ ಆರಂಭವಾಗಲಿವೆ. ನಿರ್ಮಾಣ ಚಟುವಟಿಕೆ ಕೂಡ ಪುನರ್ ಆರಂಭಕ್ಕೆ ಸರ್ಕಾರದ ಸೂಚನೆ ನೀಡಲಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
(Delhi to be Unlocked from june 1st says delhi chief minister arvind Kejriwal)
Published On - 1:42 pm, Fri, 28 May 21