Video: ಆಗ್ರಾದಲ್ಲಿ ವ್ಯಕ್ತಿಯೊಬ್ಬನಿಗೆ ಕಾರು ತಾಗಿದ್ದಕ್ಕೆ ದೆಹಲಿ ಪ್ರವಾಸಿಗರನ್ನು ಬೆನ್ನಟ್ಟಿ ಥಳಿಸಿದ ಯುವಕರ ಗುಂಪು

ಟ್ವಿಟರ್ ಬಳಕೆದಾರರ ಪ್ರಕಾರ, ಆಗ್ರಾದ ತಾಜ್‌ಗಂಜ್ ಪ್ರದೇಶದ ಬಸಾಯಿ ಚೌಕಿಯಲ್ಲಿ ಈ ಘಟನೆ ನಡೆದಿದೆ. ಸ್ವೀಟ್ ಅಂಗಡಿಯೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ. ಪ್ರವಾಸಿಗರು ಕ್ಷಮೆ ಕೇಳುತ್ತಲೇ ಇದ್ದರೂ ಆಕ್ರಮಣಕಾರರು ಬಿಡಲಿಲ್ಲ

Video: ಆಗ್ರಾದಲ್ಲಿ ವ್ಯಕ್ತಿಯೊಬ್ಬನಿಗೆ ಕಾರು ತಾಗಿದ್ದಕ್ಕೆ ದೆಹಲಿ ಪ್ರವಾಸಿಗರನ್ನು ಬೆನ್ನಟ್ಟಿ ಥಳಿಸಿದ ಯುವಕರ ಗುಂಪು
ಪ್ರವಾಸಿ ಮೇಲೆ ಹಲ್ಲೆ

Updated on: Jul 18, 2023 | 1:57 PM

ದೆಹಲಿ ಜುಲೈ 18: ಆಗ್ರಾದಲ್ಲಿ (Agra) ತಾಜ್‌ಮಹಲ್‌ಗೆ (Taj Mahal) ಭೇಟಿ ನೀಡಲು ನವದೆಹಲಿಯಿಂದ (New Delhi) ಬಂದ ಪ್ರವಾಸಿಗರ ಕಾರೊಂದು ಅಲ್ಲಿನ ಸ್ಥಳೀಯರೊಬ್ಬರಿಗೆ ತಾಗಿದ್ದು, ಯುವಕರ ಗುಂಪುದೊಂದು ಕಾರನ್ನು ಬೆನ್ನಟ್ಟಿ ಲಾಠಿ ಮತ್ತು ರಾಡ್‌ಗಳಿಂದ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಸೋಮವಾರ ಈ ಘಟನೆ ನಡೆದಿದ್ದು, ಟ್ವಿಟರ್​​ನಲ್ಲಿ  ವಿಡಿಯೊ ವೈರಲ್ ಆಗಿದೆ. ಹಲವಾರು ಟ್ವಿಟರ್ ಬಳಕೆದಾರರು ಉತ್ತರ ಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ತಾಜ್‌ಗಂಜ್ ಪೊಲೀಸ್ ಠಾಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದ್ದು ಈಗಾಗಲೇ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗ್ರಾದ ಪ್ರಸಿದ್ಧ ಪ್ರವಾಸಿ ತಾಣವಾಗಿದ ತಾಜ್ ಮಹಲ್ ಗೆ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಟ್ವಿಟರ್ ಬಳಕೆದಾರರ ಪ್ರಕಾರ, ಆಗ್ರಾದ ತಾಜ್‌ಗಂಜ್ ಪ್ರದೇಶದ ಬಸಾಯಿ ಚೌಕಿಯಲ್ಲಿ ಈ ಘಟನೆ ನಡೆದಿದೆ. ಸ್ವೀಟ್ ಅಂಗಡಿಯೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ. ಪ್ರವಾಸಿಗರು ಕ್ಷಮೆ ಕೇಳುತ್ತಲೇ ಇದ್ದರೂ ಆಕ್ರಮಣಕಾರರು ಬಿಡಲಿಲ್ಲ. ಆ ವ್ಯಕ್ತಿ ಜೀವ ಕಾಪಾಡಿಕೊಳ್ಳಲು ಸ್ವೀಟ್ ಅಂಗಡಿಯನ್ನು ಪ್ರವೇಶಿಸಿದ್ದಾರೆ. ಆದರೆ ದಾಳಿಕೋರರು ಅಂಗಡಿಯೊಳಗೆ ಹಿಂಬಾಲಿಸಿ ಬಂದು ಹಿಗ್ಗಾಮುಗ್ಗ ಥಳಿಸಿದ್ದಾರೆ.


ವಿಡಿಯೊಗೆ ಪ್ರತಿಕ್ರಿಯಿಸಿರುವ ಪೊಲೀಸರು, ಘಟನೆಯ ಬಗ್ಗೆ ತಿಳಿದುಕೊಂಡಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಐವರನ್ನು ಬಂಧಿಸಲಾಗಿದೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಐವರನ್ನು ಬಂಧಿಸಲಾಗಿದೆ ಮತ್ತು ಇತರ ದಾಳಿಕೋರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.


ಘಟನೆಯಿಂದ ನೆಟ್ಟಿಗರು ಶಾಕ್ ಆಗಿದ್ದು, ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪ್ರತಿಪಕ್ಷಗಳಿಗೆ ಕುಟುಂಬವೇ ಮೊದಲು, ದೇಶ ಏನೂ ಅಲ್ಲ: ಪ್ರಧಾನಿ ಮೋದಿ ವಾಗ್ದಾಳಿ

ಈ ಜನರು ಪ್ರವಾಸಿಗರನ್ನು ಅಮಾನುಷವಾಗಿ ಥಳಿಸಿದ್ದಾರೆ. ಅವರನ್ನೂ ಅದೇ ರೀತಿಯಲ್ಲಿ ಥಳಿಸಬೇಕು ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ಆಗ್ರಾ ಪೊಲೀಸ್ ಇಲಾಖೆಯಿಂದ ಉತ್ತಮ ಕೆಲಸ. ಅದಕ್ಕಾಗಿಯೇ ನಾವು ಯಾವಾಗಲೂ ನಮ್ಮ ವ್ಯವಸ್ಥೆಯನ್ನು ನಂಬುತ್ತೇವೆ. ಆಗ್ರಾ ಪೊಲೀಸರು ನಮ್ಮ ವ್ಯವಸ್ಥೆಯನ್ನು ನಂಬಲು ನಮಗೆ ಇನ್ನೊಂದು ಕಾರಣವನ್ನು ನೀಡುತ್ತಾರೆ ಎಂದು ಮತ್ತೊಬ್ಬ ಬಳಕೆದಾರ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ