AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಪಕ್ಷಗಳಿಗೆ ಕುಟುಂಬವೇ ಮೊದಲು, ದೇಶ ಏನೂ ಅಲ್ಲ: ಪ್ರಧಾನಿ ಮೋದಿ ವಾಗ್ದಾಳಿ

ಅವರಿಗೆ (ವಿರೋಧ ಪಕ್ಷಗಳು) ದೇಶದ ಬಡವರ ಮಕ್ಕಳ ಅಭಿವೃದ್ಧಿಯ ಬಗ್ಗೆ ಕಾಳಜಿಯಿಲ್ಲ. ಅವರ ಸಾಮಾನ್ಯ ಕಾರ್ಯಕ್ರಮವೆಂದರೆ ಅವರ ಕುಟುಂಬಕ್ಕಾಗಿ ಭ್ರಷ್ಟಾಚಾರವನ್ನು ಹೆಚ್ಚಿಸುವುದು. ಪ್ರಜಾಪ್ರಭುತ್ವ ಎಂದರೆ 'ಜನರದ್ದು, ಜನರಿಂದ, ಜನರಿಗಾಗಿ'. ಆದರೆ ಇವು ಕುಟುಂಬ ರಾಜಕಾರಣದ ಪಕ್ಷಗಳು 'ಕುಟುಂಬದ್ದು, ಕುಟುಂಬದಿಂದ, ಕುಟುಂಬಕ್ಕಾಗಿ' ಎಂಬ ಮಂತ್ರವನ್ನು ಹೊಂದಿವೆ.

ಪ್ರತಿಪಕ್ಷಗಳಿಗೆ ಕುಟುಂಬವೇ ಮೊದಲು, ದೇಶ ಏನೂ ಅಲ್ಲ: ಪ್ರಧಾನಿ ಮೋದಿ ವಾಗ್ದಾಳಿ
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ
|

Updated on:Jul 18, 2023 | 1:11 PM

Share

ದೆಹಲಿ ಜುಲೈ 18: ಅವರಿಗೆ ಕುಟುಂಬ ಮೊದಲು, ದೇಶ ಏನೂ ಅಲ್ಲ. ಭ್ರಷ್ಟಾಚಾರವೇ ಅವರ ಪ್ರೇರಣೆ. ದೊಡ್ಡ ಹಗರಣ, ಹೆಚ್ಚು ಭ್ರಷ್ಟ ವ್ಯಕ್ತಿಯಾಗಿದ್ದರೆ ಅವರಿಗೆ ಪ್ರಮುಖ ಸ್ಥಾನ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್​​ನ (Andaman and Nicobar) ಪೋರ್ಟ್ ಬ್ಲೇರ್​​ನಲ್ಲಿ ವೀರ್ ಸಾವರ್ಕರ್ ವಿಮಾನ ನಿಲ್ದಾಣದಲ್ಲಿ (Veer Savarkar airport) ಹೊಸ ಟರ್ಮಿನಲ್ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರವರು. ಪ್ರಜಾಪ್ರಭುತ್ವ ಎಂದರೆ ‘ಜನರದ್ದು, ಜನರಿಂದ, ಜನರಿಗಾಗಿ’. ಆದರೆ ಕುಟುಂಬದ್ದು, ಕುಟುಂಬದವರಿಂದ , ಕುಟುಂಬಕ್ಕಾಗಿ ಎಂಬುದೇ ಪ್ರತಿಪಕ್ಷಗಳ ಮಂತ್ರ ಎಂದು ಪ್ರಧಾನಿ ಹೇಳಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ರಣತಂತ್ರ ರೂಪಿಸಲು ಬೆಂಗಳೂರಿನಲ್ಲಿ 26 ವಿರೋಧ ಪಕ್ಷಗಳು ಜಮಾಯಿಸಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಈಗ ನಡೆಯುತ್ತಿರುವ ಪ್ರತಿಪಕ್ಷಗಳ ಸಮಾವೇಶವನ್ನು “ಮಹಾ ಭ್ರಷ್ಟರ” ಸಭೆ ಎಂದಿದ್ದಾರೆ. “ಈ ಸಭೆ ಭ್ರಷ್ಟಾಚಾರವನ್ನು ಉತ್ತೇಜಿಸಲು ಎಂದು ಜನರು ಹೇಳುತ್ತಿದ್ದಾರೆ. ತಮಿಳುನಾಡಿನಲ್ಲಿ ಭ್ರಷ್ಟಾಚಾರ ಪ್ರಕರಣಗಳ ಹೊರತಾಗಿಯೂ ವಿರೋಧ ಪಕ್ಷಗಳು ಡಿಎಂಕೆಗೆ ಕ್ಲೀನ್ ಚಿಟ್ ನೀಡಿವೆ. ಎಡಪಕ್ಷಗಳು ಮತ್ತು ಕಾಂಗ್ರೆಸ್ ತಮ್ಮ ಕಾರ್ಯಕರ್ತರ ಮೇಲೆ ದಾಳಿಯ ಹೊರತಾಗಿಯೂ ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆ ಹಿಂಸಾಚಾರದ ಬಗ್ಗೆ ಮೌನವಾಗಿವೆ.

“ಅವರಿಗೆ (ವಿರೋಧ ಪಕ್ಷಗಳು) ದೇಶದ ಬಡವರ ಮಕ್ಕಳ ಅಭಿವೃದ್ಧಿಯ ಬಗ್ಗೆ ಕಾಳಜಿಯಿಲ್ಲ. ಅವರ ಸಾಮಾನ್ಯ ಕಾರ್ಯಕ್ರಮವೆಂದರೆ ಅವರ ಕುಟುಂಬಕ್ಕಾಗಿ ಭ್ರಷ್ಟಾಚಾರವನ್ನು ಹೆಚ್ಚಿಸುವುದು. ಪ್ರಜಾಪ್ರಭುತ್ವ ಎಂದರೆ ‘ಜನರದ್ದು, ಜನರಿಂದ, ಜನರಿಗಾಗಿ’. ಆದರೆ ಇವು ಕುಟುಂಬ ರಾಜಕಾರಣದ ಪಕ್ಷಗಳು ‘ಕುಟುಂಬದ್ದು, ಕುಟುಂಬದಿಂದ, ಕುಟುಂಬಕ್ಕಾಗಿ’ ಎಂಬ ಮಂತ್ರವನ್ನು ಹೊಂದಿವೆ. ಅವರಿಗೆ ಅವರ ಕುಟುಂಬವೇ ಮೊದಲನೆಯದು ದೇಶ ಏನೂ ಅಲ್ಲ ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: Andaman-Nicobar Islands: ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದ ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡ ಉದ್ಘಾಟಿಸಿದ ಪ್ರಧಾನಿ ಮೋದಿ

ಪೋರ್ಟ್ ಬ್ಲೇರ್‌ನಲ್ಲಿ ಪ್ರಧಾನಿ ಉದ್ಘಾಟಿಸಿದ ಸುಮಾರು ₹ 710 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಕಟ್ಟಡವು ದ್ವೀಪದ ಸಂಪರ್ಕವನ್ನು ಹೆಚ್ಚಿಸುತ್ತದೆ. ಸುಮಾರು 40,800 ಚದರ ಮೀಟರ್‌ನ ಒಟ್ಟು ನಿರ್ಮಿತ ಪ್ರದೇಶದೊಂದಿಗೆ, ಹೊಸ ಟರ್ಮಿನಲ್ ಕಟ್ಟಡವು ವಾರ್ಷಿಕವಾಗಿ ಸುಮಾರು 50 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಕಟ್ಟಡವು ಚಿಪ್ಪಿನ ಆಕಾರದಲ್ಲಿದೆ, ದ್ವೀಪಗಳ ನೈಸರ್ಗಿಕ ಪರಿಸರವನ್ನು ಚಿತ್ರಿಸುತ್ತದೆ. ಇಡೀ ಟರ್ಮಿನಲ್ ದಿನಕ್ಕೆ 12 ಗಂಟೆಗಳ ಕಾಲ 100 ಪ್ರತಿಶತ ನೈಸರ್ಗಿಕ ಬೆಳಕನ್ನು ಹೊಂದಿರುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:09 pm, Tue, 18 July 23