ಲಾಕ್​ಡೌನ್​ನಿಂದಾಗಿ ಆದಾಯ ಇರಲಿಲ್ಲ, ಕರೆಂಟ್ ಬಿಲ್ ಕಟ್ಟಾಲಾಗದೆ ಬೆಂಕಿ ಹಚ್ಕೊಂಡು ಸತ್ತ

|

Updated on: Aug 11, 2020 | 5:36 PM

ಮೂರು ತಿಂಗಳ ಲಾಕ್ ಡೌನ್ ಅವಧಿಯವರೆಗೆ ವಿದ್ಯುತ್ ಮಂಡಳಿಯಿಂದ ವಿಧಿಸಲಾಗಿದ್ದ 40,000 ರೂ.ಗಳ ಬಿಲ್ ಪಾವತಿಸಲು ಸಾಧ್ಯವಾಗದೆ 57 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಲೀಲಾಧರ್ ಲಕ್ಷ್ಮಣ್ ಗೋಧಾನಿ ಮೃತ ದುರ್ದೈವಿ. ದೇಶದಲ್ಲಿ ಲಾಕ್ ಡೌನ್ ವಿಧಿಸಿರುವುದರಿಂದ ಲೀಲಾಧರ್ ಲಕ್ಷ್ಮಣ್ ಗೋಧಾನಿಗೆ ಯಾವುದೇ ಉದ್ಯೋಗ ಇರಲಿಲ್ಲ. ಹೀಗಾಗಿ 3 ತಿಂಗಳ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ. ಈ ವಿಚಾರವನ್ನು ವಿದ್ಯುತ್ ಮಂಡಳಿಯ ಅಧಿಕಾರಿಗಳಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅವರ ಮನವಿಗೆ ಯಾವುದೇ […]

ಲಾಕ್​ಡೌನ್​ನಿಂದಾಗಿ ಆದಾಯ ಇರಲಿಲ್ಲ, ಕರೆಂಟ್ ಬಿಲ್ ಕಟ್ಟಾಲಾಗದೆ ಬೆಂಕಿ ಹಚ್ಕೊಂಡು ಸತ್ತ
ಪ್ರಾತಿನಿಧಿಕ ಚಿತ್ರ
Follow us on

ಮೂರು ತಿಂಗಳ ಲಾಕ್ ಡೌನ್ ಅವಧಿಯವರೆಗೆ ವಿದ್ಯುತ್ ಮಂಡಳಿಯಿಂದ ವಿಧಿಸಲಾಗಿದ್ದ 40,000 ರೂ.ಗಳ ಬಿಲ್ ಪಾವತಿಸಲು ಸಾಧ್ಯವಾಗದೆ 57 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಲೀಲಾಧರ್ ಲಕ್ಷ್ಮಣ್ ಗೋಧಾನಿ ಮೃತ ದುರ್ದೈವಿ. ದೇಶದಲ್ಲಿ ಲಾಕ್ ಡೌನ್ ವಿಧಿಸಿರುವುದರಿಂದ ಲೀಲಾಧರ್ ಲಕ್ಷ್ಮಣ್ ಗೋಧಾನಿಗೆ ಯಾವುದೇ ಉದ್ಯೋಗ ಇರಲಿಲ್ಲ. ಹೀಗಾಗಿ 3 ತಿಂಗಳ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ.

ಈ ವಿಚಾರವನ್ನು ವಿದ್ಯುತ್ ಮಂಡಳಿಯ ಅಧಿಕಾರಿಗಳಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅವರ ಮನವಿಗೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಕುಡಿತದ ಅಮಲಿನಲಿದ್ದಾಗ ಸ್ವತಃ ತಾವೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ನಾಗ್ಪುರದಲ್ಲಿ ಮತ್ತೊಂದು ಆತ್ಮಹತ್ಯಾ ಪ್ರಯತ್ನ..
ನಾಗ್ಪುರದ ಎಕಶ್ವಾನಿ ಚೌಕದಲ್ಲಿರುವ ಮನೋಜ್ ಎಂಬ 42 ವರ್ಷದ ವ್ಯಕ್ತಿ ಮೊಬೈಲ್ ಟವರ್ ಏರಿ ಅದರ ಮೇಲಿನಿಂದ ಜಿಗಿಯುವುದಾಗಿ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಯ ಮುಖ್ಯ ಅಧಿಕಾರಿ ರಾಜೇಂದ್ರ ಉಚಕೆ ಮತ್ತು ಪೊಲೀಸ್ ಆಯುಕ್ತ ಬಿ.ಕೆ.ಉಪಾಧ್ಯಾಯೋಟೊ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಟವರ್ ಏರಿದ್ದ ವ್ಯಕ್ತಿಯೊಂದಿಗೆ ಐದು ಗಂಟೆಗಳ ಮಾತುಕತೆ ನಡೆಸಿ, ಆತನ ಮನವೊಲಿಸಿ ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದರು ಎನ್ನಲಾಗಿದೆ.

ಸಾಲವನ್ನು ಮರುಪಾವತಿಸಲು ವಿಫಲವಾದ ಹಿನ್ನೆಲೆಯಿಂದಾಗಿ ಹಾಗೂ ಕೌಟುಂಬಿಕ ಕಲಹದಿಂದಾಗಿ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.