ಕೇಂದ್ರ ಮತ್ತು ರೈತರ ನಡುವೆ ಸಂಧಾನ ಏರ್ಪಡಿಸಲು ಸಿದ್ಧ: ದುಷ್ಯಂತ್ ಚೌಟಾಲಾ
ರೈತರ ಚಳವಳಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಪಂಜಾಬ್ ರೈತರ ನಡುವೆ ಸಂಧಾನ ಏರ್ಪಡಿಸಲು ಸಿದ್ಧವಿರುವುದಾಗಿ ಹರಿಯಾಣದ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಹೇಳಿದ್ದಾರೆ.
ದೆಹಲಿ: ರೈತರ ಚಳುವಳಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಪಂಜಾಬ್ ರೈತರ ನಡುವೆ ಸಂಧಾನ ಏರ್ಪಡಿಸಲು ಸಿದ್ಧವಿರುವುದಾಗಿ ಹರಿಯಾಣದ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಹೇಳಿದ್ದಾರೆ.
ಹರಿಯಾಣದಲ್ಲೂ ರೈತರ ಪ್ರತಿಭಟನೆಯ ಕಾವು ಏರುತ್ತಿದ್ದು, ನಿನ್ನೆ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ತಮ್ಮ ವಿಧಾನ ಸಭಾ ಕ್ಷೇತ್ರ ಉಚಾನಾಕ್ಕೆ ಭೇಟಿ ಕೊಡುವ ಸುದ್ದಿ ತಿಳಿದ ಸ್ಥಳೀಯ ಚಳುವಳಿ ನಿರತ ರೈತರು ಅವರು ಆಗಮಿಸಲಿದ್ದ ತಾತ್ಕಾಲಿಕ ಹೆಲಿಪ್ಯಾಡ್ನಲ್ಲಿ ಹೊಂಡ ತೆಗೆದು ಹೆಲಿಕಾಪ್ಟರ್ ಇಳಿಯದಂತೆ ಮಾಡಿದರು.
ಆದರೆ, ಕೆಲ ಹೊತ್ತಿನ ನಂತರ ಜನನಾಯಕ್ ಜನತಾ ಪಾರ್ಟಿ ದುಷ್ಯಂತ್ ಚೌಟಾಲಾರನ್ನು ಭೇಟಿಯಾಗಲು ನಿರಾಕರಿಸಿತು. ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ, ಕೇಂದ್ರ ನೂತನ ಕೃಷಿ ಕಾಯ್ದೆಗಳಲ್ಲಿ ತಿದ್ದುಪಡಿ ಮಾಡಬೇಕು. ಸರ್ಕಾರ ಮತ್ತು ರೈತ ಚಳುವಳಿಗಾರರ ನಡುವೆ ಸಂಧಾನಕ್ಕೆ ಸಿದ್ಧನಿದ್ದೇನೆ ಎಂದು ತಿಳಿಸಿದರು.
ಹೆಲಿಪಾಡ್ನಲ್ಲಿ ಗುಂಡಿ ತೆಗೆದ ಪ್ರಕರಣದಲ್ಲಿ 13 ರೈತರ ಮೇಲೆ ಗಲಭೆ ಮತ್ತು ಕೊಲೆ ಯತ್ನದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಇತ್ತೀಚಿಗಷ್ಟೇ, ದುಷ್ಯಂತ್ ಚೌಟಾಲಾ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲಾಗದಿದ್ದರೆ ರಾಜೀನಾಮೆ ನೀಡುವೆ ಎಂದಿದ್ದರು.
Delhi Chalo | 42 ರೈತ ಸಂಘಟನೆಗಳು ಈಗ ಸುಪ್ರೀಂಕೋರ್ಟ್ನಲ್ಲಿ ಪ್ರತಿವಾದಿಗಳು: ಇಲ್ಲಿದೆ ಪಟ್ಟಿ..