ಪ್ರತಿ 15 ದಿನಗಳಿಗೊಮ್ಮೆ ಎಂಜಿನ್ ತಯಾರಕರಿಗೆ ತೈಲ ಮಾದರಿಗಳನ್ನು ಕಳುಹಿಸಲು ಸ್ಪೈಸ್‌ಜೆಟ್‌ಗೆ ನಿರ್ದೇಶಿಸಿದ ಡಿಜಿಸಿಎ

ವಿಮಾನಯಾನ ನಿಯಂತ್ರಕವು ಸ್ಪೈಸ್‌ಜೆಟ್‌ ಸಂಸ್ಥೆಯನ್ನು ಒಂದು ವಾರದೊಳಗೆ ಅಂತಹ ಎಲ್ಲಾ 28 ಎಂಜಿನ್‌ಗಳ ಒಂದು-ಬಾರಿ ಬೊರೊಸ್ಕೋಪಿಕ್ ತಪಾಸಣೆಯನ್ನು ನಡೆಸುವಂತೆ ಕೇಳಿದೆ.

ಪ್ರತಿ 15 ದಿನಗಳಿಗೊಮ್ಮೆ ಎಂಜಿನ್ ತಯಾರಕರಿಗೆ ತೈಲ ಮಾದರಿಗಳನ್ನು ಕಳುಹಿಸಲು ಸ್ಪೈಸ್‌ಜೆಟ್‌ಗೆ ನಿರ್ದೇಶಿಸಿದ ಡಿಜಿಸಿಎ
Edited By:

Updated on: Oct 17, 2022 | 5:13 PM

ಎಸಿಯಲ್ಲಿ ತೈಲ ಸೋರಿಕೆಯಿಂದ ಕ್ಯಾಬಿನ್‌ನಲ್ಲಿ ಹೊಗೆ ತುಂಬಿದ ಕಾರಣ ಈ ತಿಂಗಳ ಆರಂಭದಲ್ಲಿ ಹೈದರಾಬಾದ್‌ನಲ್ಲಿ ಸ್ಪೈಸ್‌ಜೆಟ್‌ (SpiceJet) ತುರ್ತು ಭೂಸ್ಪರ್ಶ ನಡೆಸಿತ್ತು. ಈ ಹಿನ್ನಲೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಎಂಜಿನ್ ತಯಾರಕರಾದ ಪ್ರಾಟ್ ಆಂಡ್ ವಿಟ್ನಿಗೆ ತೈಲ ಮಾದರಿಗಳನ್ನು ಕಳುಹಿಸುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಸ್ಪೈಸ್‌ಜೆಟ್‌ಗೆ ಕೇಳಿದೆ. ವಿಮಾನಯಾನ ನಿಯಂತ್ರಕವು ಸ್ಪೈಸ್‌ಜೆಟ್‌ ಸಂಸ್ಥೆಯನ್ನು ಒಂದು ವಾರದೊಳಗೆ ಅಂತಹ ಎಲ್ಲಾ 28 ಎಂಜಿನ್‌ಗಳ ಒಂದು-ಬಾರಿ ಬೊರೊಸ್ಕೋಪಿಕ್ ತಪಾಸಣೆಯನ್ನು ನಡೆಸುವಂತೆ ಕೇಳಿದೆ. ಸ್ಪೈಸ್‌ಜೆಟ್ ವಿಮಾನ ವಿಟಿ-ಎಸ್‌ಕ್ಯೂಬಿಯಲ್ಲಿ ಈ ಘಟನೆ ಸಂಭವಿಸಿದ್ದು, ಹೈದರಾಬಾದ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಕ್ಯಾಬಿನ್ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಯ ನೆರವಿನಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.


ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಮತ್ತು ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು. ವಾರದ ತಪಾಸಣೆಯ ಸಮಯದಲ್ಲಿ ತೈಲ ತೇವದ ಪುರಾವೆಗಾಗಿ ಬ್ಲೀಡ್-ಆಫ್ ವಾಲ್ವ್ ಪರದೆಯ ತಪಾಸಣೆ ನೀಡಲು ವಿಮಾನಯಾನ ಸಂಸ್ಥೆಯನ್ನು ಕೇಳಲಾಗಿದೆ.

Published On - 4:42 pm, Mon, 17 October 22