‘ಗೋಮೂತ್ರ ರಾಜ್ಯಗಳಲ್ಲಿ’ ಮಾತ್ರ ಬಿಜೆಪಿ ಚುನಾವಣೆ ಗೆಲ್ಲುತ್ತದೆ: ವಿವಾದಕ್ಕೀಡಾದ ಡಿಎಂಕೆ ಸಂಸದರ ಹೇಳಿಕೆ

|

Updated on: Dec 05, 2023 | 6:20 PM

ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಡಿಎಂಕೆ ಸಂಸದ ಬಿಜೆಪಿ ಶಕ್ತಿಯು ಮುಖ್ಯವಾಗಿ ಹಿಂದಿಯ ಹೃದಯಭಾಗದ ರಾಜ್ಯಗಳಲ್ಲಿ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಈ ದೇಶದ ಜನರು ಯೋಚಿಸಬೇಕು, ನಾವು ಸಾಮಾನ್ಯವಾಗಿ ಇವುಗಳನ್ನು 'ಗೋಮೂತ್ರ' ರಾಜ್ಯಗಳು ಎಂದು ಕರೆಯುತ್ತೇವೆ ಎಂದು ಹೇಳಿದ್ದು ವಿವಾದಕ್ಕೀಡಾಗಿದೆ.

‘ಗೋಮೂತ್ರ ರಾಜ್ಯಗಳಲ್ಲಿ’ ಮಾತ್ರ ಬಿಜೆಪಿ ಚುನಾವಣೆ ಗೆಲ್ಲುತ್ತದೆ: ವಿವಾದಕ್ಕೀಡಾದ ಡಿಎಂಕೆ ಸಂಸದರ ಹೇಳಿಕೆ
ಸೆಂಥಿಲ್ ಕುಮಾರ್
Follow us on

ದೆಹಲಿ ಡಿಸೆಂಬರ್ 05: ದ್ರಾವಿಡ ಮುನ್ನೇಟ್ರ ಕಳಗಂ (DMK) ಸಂಸದರೊಬ್ಬರು ಹಿಂದಿಯ ಹೃದಯಭಾಗದ ರಾಜ್ಯಗಳನ್ನು ‘ಗೋಮೂತ್ರ’ ರಾಜ್ಯಗಳು ಎಂದು ಕರೆದಿದ್ದು ವಿವಾದವಾಗಿದೆ. ಈ ಬಿಜೆಪಿಯ (BJP) ಶಕ್ತಿಯು ಮುಖ್ಯವಾಗಿ ಹಿಂದಿಯ ಹೃದಯಭಾಗದ ರಾಜ್ಯಗಳಲ್ಲಿ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಈ ದೇಶದ ಜನರು ಯೋಚಿಸಬೇಕು, ನಾವು ಸಾಮಾನ್ಯವಾಗಿ ಇವುಗಳನ್ನು ‘ಗೋಮೂತ್ರ’ ರಾಜ್ಯಗಳು ಎಂದು ಕರೆಯುತ್ತೇವೆ ಎಂದು ಡಿಎನ್‌ವಿ ಸೆಂಥಿಲ್‌ಕುಮಾರ್ ಎಸ್ ಲೋಕಸಭೆಯಲ್ಲಿ ಹೇಳಿದ್ದಾರೆ.

ತಮಿಳುನಾಡಿನ ಧರ್ಮಪುರಿಯ ಲೋಕಸಭಾ ಸಂಸದರು ಈಗಷ್ಟೇ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಮೂರು ಹಿಂದಿ ಹೃದಯ ಪ್ರದೇಶಗಳಾದ ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಬಿಜೆಪಿ ವಿಜಯವನ್ನು ಉಲ್ಲೇಖಿಸಿದ್ದಾರೆ.


ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, “”ಇದು ಸನಾತನಿ ಸಂಪ್ರದಾಯದ ಅಗೌರವ ಎಂದು ನಾನು ಭಾವಿಸುತ್ತೇನೆ. ಡಿಎಂಕೆ ಶೀಘ್ರದಲ್ಲೇ ‘ಗೋಮೂತ್ರ’ದ ಪ್ರಯೋಜನಗಳನ್ನು ತಿಳಿಯಲಿದೆ. ಇದನ್ನು ದೇಶದ ಜನರು ಸಹಿಸುವುದಿಲ್ಲ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ.

ಭಾನುವಾರ ಮುಕ್ತಾಯವಾದ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಅಧಿಕಾರದಿಂದ ಕಾಂಗ್ರೆಸ್ ಅನ್ನು ಕೆಳಗಿಳಿಸಿದರೆ, ಮಧ್ಯಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೇರಿತು.

ಇದನ್ನೂ ಓದಿ:ಪ್ರಮುಖ ನಾಯಕರಿಂದ ನೀರಸ ಪ್ರತಿಕ್ರಿಯೆ; ಡಿ.6ರಂದು ನಡೆಯಲಿದ್ದ ಇಂಡಿಯಾ ಒಕ್ಕೂಟ ಸಭೆ ಮುಂದೂಡಿಕೆ

ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದವರಲ್ಲಿ ಡಿಎಂಕೆ ನಾಯಕ ಸೆಂಥಿಲ್‌ಕುಮಾರ್ ಒಬ್ಬರೇ ಅಲ್ಲ . ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸೆಪ್ಟೆಂಬರ್‌ನಲ್ಲಿ ಸನಾತನ ಧರ್ಮದ ಕುರಿತು ಮಾಡಿದ ಹೇಳಿಕೆಗೆ ಭಾರಿ ವಿವಾದವನ್ನು ಹುಟ್ಟುಹಾಕಿದ್ದರು.

ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ರದ್ದುಗೊಳಿಸಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಇದನ್ನು ನಿರ್ಮೂಲನೆ ಮಾಡಬೇಕು, ಸನಾತನವನ್ನು ಹಾಗೆ ನಿರ್ಮೂಲನೆ ಮಾಡಬೇಕು. ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು” ಎಂದು ಉದಯನಿಧಿ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದು ವಿವಾದವಾಗಿತ್ತು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ