ಜ್ಯೋತಿಷಿ ಗಾಯತ್ರಿ ದೇವಿ ವಾಸುದೇವ್​ರಿಂದ ಲೋಕಸಭೆ ಚುನಾವಣೆ, ಪ್ರಧಾನಿ ಮೋದಿ ಬಗ್ಗೆ ಸೆನ್ಸೇಷನಲ್ ಭವಿಷ್ಯ

ಮಾಡರ್ನ್ ಅಸ್ಟ್ರಾಲಜಿ ನಿಯತಕಾಲಿಕೆ ಸಂಪಾದಕರಾದ ಗಾಯತ್ರಿ ದೇವಿ ವಾಸುದೇವ್ ಅವರು ಭಾರತ, ನರೇಂದ್ರ ಮೋದಿ, ಮುಂದಿನ ಲೋಕಸಭಾ ಚುನಾವಣೆ, ‘ಇಂಡಿಯಾ’ ಮೈತ್ರಿಕೂಟದ ಬಗೆಗಿನ ಮುಂದಿನ ವರ್ಷದ ಭವಿಷ್ಯದ ಪ್ರಮುಖಾಂಶಗಳನ್ನು ತಿಳಿಸಿದ್ದಾರೆ.

ಜ್ಯೋತಿಷಿ ಗಾಯತ್ರಿ ದೇವಿ ವಾಸುದೇವ್​ರಿಂದ ಲೋಕಸಭೆ ಚುನಾವಣೆ, ಪ್ರಧಾನಿ ಮೋದಿ ಬಗ್ಗೆ ಸೆನ್ಸೇಷನಲ್ ಭವಿಷ್ಯ
ನರೇಂದ್ರ ಮೋದಿ. ಜ್ಯೋತಿಷಿ ಗಾಯತ್ರಿ ದೇವಿ ವಾಸುದೇವ್
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 05, 2023 | 7:21 PM

ಪ್ರತಿ ವರ್ಷ ಡಿಸೆಂಬರ್ ಬಂತು ಅಂದರೆ ‘ಮಾಡರ್ನ್ ಅಸ್ಟ್ರಾಲಜಿ’ಯ ಜನವರಿ ವಿಶೇಷ ಸಂಚಿಕೆ ಯಾವಾಗ ಬಿಡುಗಡೆ ಆಗುತ್ತದೆ ಎಂಬ ಬಗ್ಗೆ ಜನಸಾಮಾನ್ಯರಲ್ಲಿ ಹಾಗೂ ಜ್ಯೋತಿಷ ಕ್ಷೇತ್ರದಲ್ಲೇ ಇರುವಂಥವರಿಗೆ ಒಂದು ಕುತೂಹಲ ಶುರುವಾಗುತ್ತದೆ. ಅದಕ್ಕೆ ಕಾರಣ ಗಾಯತ್ರಿ ದೇವಿ ವಾಸುದೇವ್(Gayatri Devi Vasudev). ಅವರು ಅಂತಾರಾಷ್ಟ್ರೀಯ ಖ್ಯಾತಿಯ ಜ್ಯೋತಿಷಿ ಆಗಿದ್ದಂತಹ ದಿವಂಗತ ಬಿ.ವಿ.ರಾಮನ್ ಅವರ ಮಗಳು. ಹಾಗೂ ಗಾಯತ್ರಿ ದೇವಿ ಅವರೇ ಸ್ವತಃ ಜ್ಯೋತಿಷಿ. ಸದ್ಯಕ್ಕೆ ಅವರ ಸಂಪಾದಕತ್ವದಲ್ಲಿ ‘ಮಾಡರ್ನ್ ಅಸ್ಟ್ರಾಲಜಿ’(Modern Astrology) ಇಂಗ್ಲಿಷ್ ಮಾಸಿಕ ಹೊರಬರುತ್ತಿದೆ. ಇದರಲ್ಲಿ ಗಾಯತ್ರಿ ದೇವಿಯವರೂ ಸೇರಿದಂತೆ ಜ್ಯೋತಿಷದಲ್ಲಿ ಅತಿರಥ ಮಹಾರಥ ಎನಿಸಿಕೊಂಡವರು ಲೇಖನಗಳನ್ನು ಬರೆಯುತ್ತಾರೆ. ಅದರಲ್ಲೂ ಜನವರಿ ತಿಂಗಳು ಬಂತೆಂದರೆ ಅಲ್ಲಿಂದ ಮುಂದಿನ ವರ್ಷ ರಾಷ್ಟ್ರ- ಅಂತಾರಾಷ್ಟ್ರೀಯ ಸಂಗತಿಗಳೂ ಸೇರಿದಂತೆ ನಾನಾ ವಿಚಾರಗಳ ಬಗ್ಗೆ ಭವಿಷ್ಯ ಇರುತ್ತದೆ. ಅಂದ ಹಾಗೆ ಹೊಸ ವರ್ಷದ ವಿಶೇಷ ಸಂಚಿಕೆಯಲ್ಲಿಯೇ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ದುರ್ಮರಣದ ವಿಚಾರವಾಗಿ ಹನ್ನೆರಡು ತಿಂಗಳ ಮೊದಲೇ ‘ಮಾಡರ್ನ್ ಅಸ್ಟ್ರಾಲಜಿ’ ಎಚ್ಚರಿಕೆ ನೀಡಿತ್ತು.

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು, ರಷ್ಯಾ- ಉಕ್ರೇನ್ ಯುದ್ಧ ಸೇರಿದಂತೆ ಹಲವು ಪ್ರಾಕೃತಿಕ ವಿಕೋಪಗಳು, ಯುದ್ಧ ಸನ್ನಿವೇಶಗಳು, ಆರ್ಥಿಕ ಬಿಕ್ಕಟ್ಟುಗಳ ಬಗ್ಗೆ ಜ್ಯೋತಿಷ ಶಾಸ್ತ್ರದ ಆಧಾರದಲ್ಲಿ ಭವಿಷ್ಯ ನುಡಿದು, ಅದರಂತೆಯೇ ಘಟನೆಗಳು ನಡೆದು, ಎಲ್ಲರ ಹುಬ್ಬೇರುವಂತೆ ಮಾಡಿದ ಈ ಪತ್ರಿಕೆಯ ಬಗ್ಗೆ, ಅದರ ಸಂಪಾದಕಿ ಆಗಿರುವ ಗಾಯತ್ರಿ ದೇವಿ ವಾಸುದೇವ್ ಅವರ ಬಗ್ಗೆ ಸಹಜವಾಗಿಯೇ ಕುತೂಹಲ ಇರುತ್ತದೆ. 2024ರ ಹೊಸ ವರ್ಷಕ್ಕೆ ಏನಿದೆ ಅಂಥ ವಿಶೇಷ ಎಂಬುದನ್ನು ಕೇಳುವ ಸಲುವಾಗಿಯೇ ಟಿವಿ9 ಕನ್ನಡ ವೆಬ್ ಸೈಟ್ ನಿಂದ ಗಾಯತ್ರಿ ದೇವಿ ಅವರನ್ನು ಮಾತನಾಡಿಸಲಾಯಿತು. ಲೋಕಸಭೆ ಚುನಾವಣೆ ಫಲಿತಾಂಶ ಮತ್ತು ಭಾರತ ದೇಶದ ಭವಿತವ್ಯ ಹೇಗಿರುತ್ತದೆ ಎಂಬುದು ನಮಗೆ ಇದ್ದ ದೊಡ್ಡ ಕುತೂಹಲವಾಗಿತ್ತು.

ಆದರೆ, ನಾವು ಕೇಳಿದ್ದಕ್ಕಿಂತ ಹೆಚ್ಚಿನ ವಿವರಗಳನ್ನು ಹೇಳಿದರು ಮಾಡರ್ನ್ ಅಸ್ಟ್ರಾಲಜಿ ನಿಯತಕಾಲಿಕೆ ಸಂಪಾದಕರಾದ ಗಾಯತ್ರಿ ದೇವಿ. ಅಂದ ಹಾಗೆ ಅವರು ಏನು ಹೇಳಿದರು ಎಂಬುದರ ಆಯ್ದ ಭಾಗವನ್ನು ಮಾತ್ರ ನಿಮ್ಮೆದುರು ಇಡಲಾಗುತ್ತಿದೆ. ಇನ್ನೇನು ಹೊಸ ವರ್ಷದ ಮಾಡರ್ನ್ ಅಸ್ಟ್ರಾಲಜಿ ಸಂಚಿಕೆ ಮಾರುಕಟ್ಟೆಗೆ ಬರುತ್ತದೆ. ಆಸಕ್ತರು ಬೇಕಿದ್ದಲ್ಲಿ ಅದನ್ನು ಕೊಂಡು ಓದಬಹುದು.

ಇದನ್ನೂ ಓದಿ:TV9 Kannada Digital Exclusive: ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ರ ಸಾವಿನ ಬಗ್ಗೆ ವರ್ಷಕ್ಕೂ ಮುಂಚೆ ಎಚ್ಚರಿಸಿತ್ತು ಈ ಜ್ಯೋತಿಷ ಪತ್ರಿಕೆ

ಭಾರತ, ನರೇಂದ್ರ ಮೋದಿ, ಮುಂದಿನ ಲೋಕಸಭಾ ಚುನಾವಣೆ, ‘ಇಂಡಿಯಾ’ ಮೈತ್ರಿಕೂಟದ ಬಗೆಗಿನ ಮುಂದಿನ ವರ್ಷದ ಭವಿಷ್ಯದ ಪ್ರಮುಖಾಂಶಗಳು ಹೀಗಿವೆ

* ಭಾರತ ಸ್ವತಂತ್ರಗೊಂಡ ಸಮಯದ ಅವಧಿಯ ಮೇಲೆ ಹೇಳುವುದಾದರೆ ಕರ್ಕಾಟಕ ರಾಶಿ, ವೃಷಭ ಲಗ್ನ ಆಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಚಂದ್ರನಿಂದ, ಅಂದರೆ ಕರ್ಕಾಟಕ ರಾಶಿಯಿಂದ ಎಂಟನೇ ಮನೆಯಲ್ಲಿ ಶನಿ ಇರುವುದರಿಂದ ಜಾಗತಿಕವಾಗಿ ಭಾರತದ ಏಳ್ಗೆಯನ್ನು ಸಹಿಸದ ಕೆಲವರು ಆರೋಪಗಳನ್ನು ಮಾಡುತ್ತಾ ಸಾಗುತ್ತಾರೆ. ಇದು ಮುಂದಿನ ಎರಡು ವರ್ಷಗಳ ತನಕ ಹೆಚ್ಚು- ಕಡಿಮೆ ಮುಂದುವರಿಯುತ್ತದೆ. ಇದರ ಪರಿಣಾಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎದುರಿಸುತ್ತಿದ್ದಾರೆ. ಆದರೆ ರಾಹು ದಶೆಯು ಭಾರತ ದೇಶದ ಪಾಲಿಗೆ ಅತ್ಯುತ್ತಮವಾದ ಸಮಯ. ಅಭಿವೃದ್ಧಿಯ ಹಾದಿಯಲ್ಲಿ ಇನ್ನೂ ವೇಗವಾಗಿ, ಎತ್ತರಕ್ಕೆ ದೇಶವು ಏರಲಿದೆ.

* ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ ಜನ್ಮ ಜಾತಕದ ಪ್ರಕಾರ ಕುಜ ದಶೆ ಬುಧ ಭುಕ್ತಿ ನಡೆಯುತ್ತಿದೆ. ಇನ್ನು ಬಿಜೆಪಿ ಅಸ್ತಿತ್ವಕ್ಕೆ ಬಂದ ಸಮಯಕ್ಕೆ ವೃಶ್ಚಿಕ ರಾಶಿ ಆಗುತ್ತದೆ. ಮುಂದಿನ ವರ್ಷದ ಮೇ ತಿಂಗಳಲ್ಲಿ ವೃಷಭ ರಾಶಿಗೆ ಗುರು ಗ್ರಹದ ಪ್ರವೇಶ ಆಗುತ್ತದೆ. ಆಗ ಸಪ್ತಮದ ಪೂರ್ಣ ದೃಷ್ಟಿ ವೃಶ್ಚಿಕ ರಾಶಿ ಮೇಲೆ ಇರುತ್ತದೆ. ಆದ್ದರಿಂದ ನರೇಂದ್ರ ಮೋದಿ ಅವರ ಸ್ಥಾನ ಅಬಾಧಿತವಾಗಿ ಮುಂದುವರಿಯುತ್ತದೆ. ಆದರೆ ಅವರ ಮೇಲಿನ ವಿರೋಧಿಗಳ ಮಾತಿನ ದಾಳಿ, ಸಂಚು, ಪಿತೂರಿ ಮುಂದುವರಿಯುತ್ತಲೇ ಇರುತ್ತದೆ. ಆದರೆ ಅವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ.

* ನರೇಂದ್ರ ಮೋದಿ ಅವರ ಜನ್ಮ ಜಾತಕದ ಪ್ರಕಾರ ವೃಶ್ಚಿಕ ರಾಶಿಯಲ್ಲಿ ಚಂದ್ರ, ಕುಜ ಗ್ರಹ ಇದೆ. ತುಲಾ ಲಗ್ನ. ಕನ್ಯಾ ರಾಶಿಯಲ್ಲಿ ಶನಿ, ರವಿ, ವಕ್ರೀ ಬುಧ, ಕೇತು ಹೀಗೆ ನಾಲ್ಕು ಗ್ರಹ ಗಳಿವೆ. ಸಿಂಹದಲ್ಲಿ ಶುಕ್ರ, ಮೀನದಲ್ಲಿ ರಾಹು ಹಾಗೂ ಕುಂಭದಲ್ಲಿ ವಕ್ರೀ ಗುರು ಇದೆ. ಲಗ್ನಕ್ಕೆ ದ್ವಿತೀಯದಲ್ಲಿ ಕುಜ ಇರುವುದರಿಂದ ಮೋದಿ ಅವರ ಮಾತಿನಲ್ಲಿ ಆಕ್ರಮಣಕಾರಿ ಧೋರಣೆ ಕಾಣುತ್ತದೆ. ಇನ್ನು ಚಂದ್ರನಿಗೆ ಏಕಾದಶದಲ್ಲಿ ನಾಲ್ಕು ಗ್ರಹಗಳಿವೆ. ಇದು ಲಗ್ನಕ್ಕೆ ದ್ವಾದಶವೂ ಹೌದು. ಶನಿ ಗ್ರಹಕ್ಕೆ ಮೌಢ್ಯ ಬಂದಿದೆ. ಹೀಗಂದರೆ ಶನಿ ಹಾಗೂ ರವಿಯ ಮಧ್ಯ ಒಂದು ಡಿಗ್ರಿಗಿಂತ ಕಡಿಮೆ ಅಂತರ ಇದೆ. ಹೀಗಿದ್ದರೆ ರವಿಯ ಶಕ್ತಿಯನ್ನು ಪಡೆಯುವ ಶನಿಯು ಈ ಜಾತಕರಿಗೆ ಅಗಾಧವಾದ ಪ್ರಭಾವವನ್ನು ನೀಡುತ್ತದೆ. ಇನ್ನು ಬುಧಾದಿತ್ಯ ಯೋಗ ಹಾಗೂ ಬುಧನಿಂದ ಅದ್ಭುತ ನೆನಪಿನ ಶಕ್ತಿ ಹಾಗೂ ಯಾವುದೇ ವಿಚಾರ- ವಿಷಯದಲ್ಲಿ ಅದ್ಭುತವಾದ ಗ್ರಹಿಕೆಯನ್ನು ಇದು ತೋರುತ್ತದೆ. ಇದರ ಜತೆಗೆ ಮೋದಿ ಅವರ ಜಾತಕದಲ್ಲಿ ಶಶಿ-ಮಂಗಳ ಯೋಗ, ನೀಚಭಂಗ ರಾಜ ಯೋಗ ಸಹ ಇದೆ.

* ಇನ್ನು ಅದೇ ಮನೆಯಲ್ಲಿ ಇರುವಂಥ ಕೇತು ದೈವ ಭಕ್ತಿಯನ್ನು ನೀಡುತ್ತಾನೆ. ಲಗ್ನಕ್ಕೆ ದ್ವಾದಶದಲ್ಲಿ ಕೇತು ಇರುವುದರಿಂದ ಸಹಜವಾಗಿ ವೈರಾಗ್ಯ ಸ್ವಭಾವ ಇರುತ್ತದೆ. ಇನ್ನು ಒಂದೇ ರಾಶಿಯಲ್ಲಿ ನಾಲ್ಕು ಗ್ರಹಗಳು ಇರುವುದಿಂದ ಇವರಿಗೆ ಪರಿವ್ರಾಜಕ ಯೋಗ ಸಹ ಇದೆ. ಹೀಗಂದರೆ ಇವರು ಸನ್ಯಾಸಿಯ ಬದುಕನ್ನು ಬದುಕುತ್ತಾರೆ. ಯಾರೂ ಊಹೆ ಕೂಡ ಮಾಡದ ರೀತಿಯಲ್ಲಿ ಲೌಕಿಕ ವ್ಯವಹಾರಗಳಿಂದ ದೂರ ಉಳಿದು, ಆಧ್ಯಾತ್ಮಿಕ ಜೀವನವನ್ನು ನಡೆಸುತ್ತಾರೆ.

* ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಇನ್ನು ಅದಾಗಿ ಕೆಲ ಸಮಯ ತಮ್ಮ ಜವಾಬ್ದಾರಿಯನ್ನು ಮುಂದುವರಿಸುವ ಅವರು, ಆ ನಂತರ ಸ್ಥಾನ ತ್ಯಾಗವನ್ನು ಮಾಡುತ್ತಾರೆ. ಪ್ರಾಯಶಃ ಬುಧ ಭುಕ್ತಿ ಮುಗಿದು, ಕೇತು ಭುಕ್ತಿ ಶುರು ಆಗುವಾಗ ಅವರು ತಮ್ಮ ವ್ಯವಹಾರಗಳಿಂದ (ರಾಜಕೀಯ ಕ್ಷೇತ್ರ) ಹಿಂದೆ ಸರಿಯಬಹುದು ಎಂಬುದನ್ನು ಅಂದಾಜಿಸಬಹುದು.

* ಇನ್ನು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಕೆಲವು ಸೇರಿಕೊಂಡು, ರಚಿಸಿಕೊಂಡಿರುವ ‘ಇಂಡಿಯಾ’ ಮೈತ್ರಿಕೂಟ ಅಸ್ತಿತ್ವದಲ್ಲಿ ಬಹು ಕಾಲ ಇರುವುದಿಲ್ಲ. ಏಕೆಂದರೆ ಅದು ಅಸ್ತಿತ್ವಕ್ಕೆ ಬಂದಿದ್ದೇ ಅಮಾವಾಸ್ಯೆಯಂದು. ಯಾವುದೇ ವಿಚಾರ, ಸಂಘ- ಸಂಘಟನೆ ಇರಬಹುದು, ಕೃಷ್ಣ ಪಕ್ಷದ ಚುತುರ್ದಶಿ ಹಾಗೂ ಅಮಾವಾಸ್ಯೆಯಂದು ಆರಂಭವಾದದ್ದು ಯಶಸ್ಸು ಕಾಣುವುದಿಲ್ಲ. ಇದಕ್ಕೆ ಪ್ರಮಾಣ ಮತ್ತು ಶಾಸ್ತ್ರವಚನವೇ ಇದೆ. ಜ್ಯೋತಿಷ ಶಾಸ್ತ್ರದ ಮುಹೂರ್ತ ಗ್ರಂಥಗಳಲ್ಲೇ ಈ ಬಗ್ಗೆ ಉಲ್ಲೇಖ ಇದ್ದು, ಅಮಾವಾಸ್ಯೆಯಂದು ಯಾವುದೇ ಶುಭ ಕಾರ್ಯಗಳನ್ನು, ವೃದ್ಧಿ ಕಾರ್ಯಗಳಲ್ಲಿ ಅದೇ ಕಾರಣಕ್ಕೆ ಮಾಡುವುದಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷದ ಅಸ್ತಿತ್ವವೇ ಈ ಲೋಕಸಭೆ ಚುನಾವಣೆ ನಂತರ ಕಷ್ಟಕ್ಕೆ ಸಿಲುಕಿಕೊಳ್ಳಬಹುದು. ನಾಯಕತ್ವದ ಬಿಕ್ಕಟ್ಟಿನಿಂದ ತಲ್ಲಣಿಸುವಂತೆ ಕಾಣಿಸುತ್ತದೆ. ರಾಹುಲ್ ಗಾಂಧಿ ಅವರಿಗೆ ಯಶಸ್ಸು ದೊರೆಯುವಂತೆ ಕಾಣುವುದಿಲ್ಲ. ಏಕೆಂದರೆ ಅವರ ಜನ್ಮ ಜಾತಕದಲ್ಲಿ ಸಂಪೂರ್ಣ ಯೋಗಗಳು ಅಂತ ಇಲ್ಲ. ಬರುವ ಅನುಕೂಲಗಳು ಸಹ ಭಂಗ ಆಗುವ ಲಕ್ಷಣಗಳೇ ಹೆಚ್ಚಿವೆ.

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರದಾಗಿರುತ್ತದೆ ಮತ್ತು ಜ್ಯೋತಿಷ ಆಧಾರದಲ್ಲಿ ಹೇಳಿದಂಥದ್ದಾಗಿರುತ್ತದೆ. ಇಲ್ಲಿ ವ್ಯಕ್ತವಾಗಿರುವ ವಿಚಾರಗಳನ್ನು ಟಿವಿ 9 ಕನ್ನಡ ಅಥವಾ ಅದರ ಸೋದರ ಸಂಸ್ಥೆಗಳು ಅನುಮೋದಿಸುವುದಿಲ್ಲ ಹಾಗೂ ಜವಾಬ್ದಾರ ಆಗಿರುವುದಿಲ್ಲ. -ಸಂಪಾದಕರು)

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ