TV9 Kannada Digital Exclusive: ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ರ ಸಾವಿನ ಬಗ್ಗೆ ವರ್ಷಕ್ಕೂ ಮುಂಚೆ ಎಚ್ಚರಿಸಿತ್ತು ಈ ಜ್ಯೋತಿಷ ಪತ್ರಿಕೆ

TV9 Kannada Digital Exclusive: ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ರ ಸಾವಿನ ಬಗ್ಗೆ ವರ್ಷಕ್ಕೂ ಮುಂಚೆ ಎಚ್ಚರಿಸಿತ್ತು ಈ ಜ್ಯೋತಿಷ ಪತ್ರಿಕೆ
ಮಾಡರ್ನ್ ಅಸ್ಟ್ರಾಲಜಿ ನಿಯತಕಾಲಿಕೆ ಸಂಪಾದಕಿ ಗಾಯತ್ರಿ ದೇವಿ ವಾಸುದೇವ್

ಸಿಡಿಎಸ್​ ಬಿಪಿಎನ್​ ರಾವತ್​ ಅವರ ದುರ್ಮರಣದ ನಂತರ ಬೆಂಗಳೂರು ಮೂಲದ ಈ ಜ್ಯೋತಿಷ ಪತ್ರಿಕೆಯ ಭವಿಷ ಬಹಳ ಚರ್ಚೆಯಲ್ಲಿದೆ. ಆ ಬಗ್ಗೆ ವಿವರ ಈ ಲೇಖನದಲ್ಲಿದೆ.

TV9kannada Web Team

| Edited By: Srinivas Mata

Dec 10, 2021 | 10:44 AM

ಅಗ್ರಣಿ ಪಬ್ಲಿಕೇಷನ್ಸ್​ನಿಂದ ಹೊರ ಬರುವ “ಮಾಡರ್ನ್ ಅಸ್ಟ್ರಾಲಜಿ” ಎಂಬ ಜ್ಯೋತಿಷ ಮಾಸಪತ್ರಿಕೆಯ ಪುಟವೊಂದು ದಿಢೀರನೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಶುರುವಾಗಿದೆ. ಅದು 2021ರ ಜನವರಿ ತಿಂಗಳಲ್ಲಿ ಹೊರಬಂದಿರುವ ಸಂಚಿಕೆ ಆಗಿದ್ದು, ಅದನ್ನು 2020ರ ನವೆಂಬರ್ ತಿಂಗಳಲ್ಲೇ ಬರೆಯಲಾಗಿದೆ. ಈ ಭವಿಷ್ಯದ ನುಡಿಗಳನ್ನು ಡಿಸೆಂಬರ್ 8ರ ಘಟನೆಯೊಂದಿಗೆ ನೋಡಿದಾಗ ಎದೆ ಝಲ್ ಎನಿಸುತ್ತದೆ. ಈ ಮಾಸಪತ್ರಿಕೆಯು ಹೊರಬರುತ್ತಿರುವುದು ಬೆಂಗಳೂರಿನಿಂದ. ಅದರ ಸಂಪಾದಕರು ಗಾಯತ್ರಿ ದೇವಿ ವಾಸುದೇವ್. ಅಂದಹಾಗೆ ಇವರು ಯಾರು ಗೊತ್ತಾ? ಜ್ಯೋತಿಷ ಶಾಸ್ತ್ರದಲ್ಲಿ ಭಾರತಕ್ಕೆ ಮಾತ್ರ ಅಲ್ಲ, ವಿದೇಶಗಳಲ್ಲೂ ಖ್ಯಾತರಾಗಿದ್ದ ಬಿ.ವಿ. ರಾಮನ್ ಅವರ ಮಗಳೇ ಗಾಯತ್ರಿ ವಾಸುದೇವ್. ಹಾಗಿದ್ದರೆ ಯಾವುದು ಆ ಪುಟ? ಅದೀಗ ಆ ಪರಿಯಲ್ಲಿ ವೈರಲ್ ಆಗಲು ಕಾರಣ ಏನು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

“ದೇಶದಲ್ಲಿ ಅಪರಾಧ ಹಾಗೂ ಹಿಂಸೆ ಜಾಸ್ತಿ ಆಗಲಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟದಲ್ಲಿ ಹೈಪ್ರೊಫೈಲ್ ಸಚಿವರ ಭದ್ರತೆ ಹೆಚ್ಚಿಸುವಂತೆ ಆಗುತ್ತದೆ. ದೇಶದ ಅತಿ ಉಚ್ಚ ನಾಯಕರ ಮೇಲೆ (ಸೇನಾ ಮುಖ್ಯಸ್ಥರೂ ಆಗಬಹುದು) ಕನಿಷ್ಠ ಎರಡು ಹಿಂಸಾ ಪ್ರಯತ್ನ ನಡೆಯಬಹುದು. ಅದು ಜುಲೈ 25, 2021ರಲ್ಲಿ ಅನೂರಾಧ ನಕ್ಷತ್ರದಲ್ಲಿ ಕೇತು ಪ್ರವೇಶ ಮಾಡಿದ ಸಂದರ್ಭದಲ್ಲಿ ಆಗಬಹುದು. ಅದೇ ರೀತಿ ಸೂರ್ಯ ಗ್ರಹಣಗಳು ನಡೆಯುವಂಥ ಮೇ 26, 2021 ಹಾಗೂ ಡಿಸೆಂಬರ್ 4, 2021ರ ಸಮಯ ಕೂಡ ಬಹಳ ಸೂಕ್ಷ್ಮವಾದದ್ದು. ಡಿಸೆಂಬರ್ 14, 2021ರ ಸಮಯದಲ್ಲೂ ದುಷ್ಕರ್ಮಿಗಳು ಸಕ್ರಿಯರಾಗಬಹುದು,” ಎಂದಿದೆ.

ಇದೀಗ ಡಿಸೆಂಬರ್ 8, 2021ರಂದು ಸಿಡಿಎಸ್ ಬಿಪಿನ್ ರಾವತ್ ಅವರು ಸೇನಾ ಹೆಲಿಕಾಪ್ಟರ್ ಪತನದಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆಯ ನಂತರದಲ್ಲಿ 2021ರ ಜನವರಿಯಲ್ಲಿ ಪ್ರಕಟವಾಗಿದ್ದ ಲೇಖನದ ತುಣುಕು ಭಾರೀ ವೈರಲ್ ಆಗಿ, ಹರಿದಾಡುತ್ತಿದೆ. ಈ ಬಗ್ಗೆ ಗಾಯತ್ರಿ ದೇವಿ ವಾಸುದೇವ್ ಅವರನ್ನು ಟಿವಿ9 ಕನ್ನಡ ಡಿಜಿಟಲ್​ನಿಂದ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿಸಲಾಗಿದೆ.

Astrology News

ವೈರಲ್ ಆಗಿರುವ ಪತ್ರಿಕೆ ಪುಟದ ತುಣುಕು

“ನಾನು ಕಾನೂನು ಪದವಿ ಪಡೆದ ಸಂದರ್ಭದಲ್ಲಿ ನಡೆದ ಘಟನೆಯೊಂದು ನನ್ನ ಜೀವನದಲ್ಲಿ ಪ್ರಭಾವ ಬೀರಿ, ಜ್ಯೋತಿಷ ಕಲಿಯುವಂತೆ ಮಾಡಿತು. ನನ್ನ ತಂದೆಯವರಿಂದ 30 ವರ್ಷಗಳ ಕಾಲ ಜ್ಯೋತಿಷ ಅಧ್ಯಯನ ಮಾಡಿದ್ದೇನೆ. ಪಬ್ಲಿಕೇಷನ್​ ಮಾತ್ರ ನಡೆಸಿಕೊಂಡು ಹೋಗುತ್ತಿದ್ದೇನೆ ವಿನಾ ಯಾವುದೇ ಕನ್ಸಲ್ಟೇಷನ್ ಅಂತ ಮಾಡುವುದಿಲ್ಲ. ಆದರೆ ನಿನ್ನೆಯ ಘಟನೆ (ಸೇನಾ ಮುಖ್ಯಸ್ಥರ ಸಾವಿನ ಘಟನೆ) ನಂತರ ತುಂಬ ಕರೆಗಳು ಬರುತ್ತಿವೆ. ನಾನು ಸಾಮಾನ್ಯವಾಗಿ ಮಾಧ್ಯಮಗಳಿಗೆ ಸಂದರ್ಶನ ನೀಡುವುದಿಲ್ಲ,” ಎಂದು ಹೇಳಿದರು.

ಜ್ಯೋತಿಷದಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಸಂದರ್ಭದಲ್ಲಿ ಏನೇನಾಗುತ್ತದೆ ಎಂಬ ಬಗ್ಗೆ ನಮ್ಮ ಋಷಿ-ಮುನಿಗಳು ದಾಖಲಿಸಿದ್ದಾರೆ. ಇನ್ನು ನನ್ನ ತಂದೆಯವರಿಂದ ಬಂದ ಅಧ್ಯಯನ ಹಾಗೂ ಅನುಭವ ಭವಿಷ್ಯದ ಬಗ್ಗೆ ಚಿಂತನೆಗೆ ನೆರವು ನೀಡುತ್ತದೆ. 2001ರ ಸೆಪ್ಟೆಂಬರ್ 11ರಂದು ಅಲ್ ಕೈದಾ ಉಗ್ರರಿಂದ ಅಮೆರಿಕದಲ್ಲಿ ಅವಳಿ ವಾಣಿಜ್ಯ ಕಟ್ಟಡದ ಮೇಲೆ ದಾಳಿ ನಡೆಯಿತಲ್ಲ, ಅದು ಕೂಡ ಜ್ಯೋತಿಷದ ಬಗ್ಗೆ ಅಧ್ಯಯನ ಮಾಡಬೇಕು ಅಂತರ ಇರುವವರು ತಿಳಿದುಕೊಳ್ಳಬೇಕಾದ ಗ್ರಹ ಸ್ಥಿತಿ. ಏಕೆಂದರೆ, ಜ್ಯೋತಿಷ ಅಂದರೆ ಮೂರು ವರ್ಗದಲ್ಲಿ ವಿಂಗಡಿಸಲಾದ ಭವಿಷ್ಯದ ಚಿಂತನೆ. ಅಮೆರಿಕದ ಮೇಲೆ ದಾಳಿ ನಡೆದ ದಿನ ಮಂಗಳವಾರ ಇತ್ತು. ಕುಜನ ಹಾಗೂ ರಾಹುವಿನ ಪ್ರಭಾವ ಇವೆಲ್ಲ ಬಿಡಿಸುತ್ತಾ ಹೋದರೆ ಫಲಿತಾಂಶ ಗೊತ್ತಾಗುತ್ತದೆ. ಆದರೆ ಕಿವಿಗೆ ಇಂಪಾದ ಮಾತುಗಳನ್ನೇ ಕೇಳಿಸಿಕೊಳ್ಳಬೇಕು ಅಂತ ಬಯಸುವವರಿಗೆ ನಾನು ಏನೂ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಮಾತು ಮುಗಿಸಿದರು.

ಇದನ್ನೂ ಓದಿ: Bipin Rawat Death: ಸೇನಾ ಹೆಲಿಕಾಪ್ಟರ್ ಪತನ ದುರಂತ; ಸಿಡಿಎಸ್ ಬಿಪಿನ್ ರಾವತ್​ ದುರ್ಮರಣ

Follow us on

Related Stories

Most Read Stories

Click on your DTH Provider to Add TV9 Kannada