Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿನ್ ಪೈಲಟ್​​ ಚಲನವಲನದ ಮೇಲೆ ನಿಗಾ, ಫೋನ್ ಕದ್ದಾಲಿಕೆ ಮಾಡಲಾಗಿತ್ತು: ಗೆಹ್ಲೋಟ್ ಅವರ ಒಎಸ್​​ಡಿ

ಸಚಿನ್ ಪೈಲಟ್ ಅವರ ಬೆಂಬಲಿಗರು ಆರೋಪಿಸಿದಂತೆ ಪೈಲಟ್‌ನ ಫೋನ್ ಟ್ಯಾಪ್ ಮಾಡಲಾಗಿದೆಯೇ ಮತ್ತು ಅವರ ಚಲನವಲನಗಳನ್ನು ಅನುಸರಿಸಲಾಗಿದೆಯೇ ಎಂಬ ಪ್ರಶ್ನೆಗೆ, ಶರ್ಮಾ ಅವರು "ಅವರು ಎಲ್ಲಿಗೆ ಹೋಗುತ್ತಿದ್ದಾರೆ, ಯಾರನ್ನು ಭೇಟಿಯಾಗುತ್ತಿದ್ದಾರೆ, ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದು ಖಚಿತವಾಗಿ ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ.

ಸಚಿನ್ ಪೈಲಟ್​​ ಚಲನವಲನದ ಮೇಲೆ ನಿಗಾ, ಫೋನ್ ಕದ್ದಾಲಿಕೆ ಮಾಡಲಾಗಿತ್ತು: ಗೆಹ್ಲೋಟ್ ಅವರ ಒಎಸ್​​ಡಿ
ಸಚಿನ್ ಪೈಲಟ್- ಅಶೋಕ್ ಗೆಹ್ಲೋಟ್
Follow us
ರಶ್ಮಿ ಕಲ್ಲಕಟ್ಟ
|

Updated on: Dec 05, 2023 | 4:26 PM

ದೆಹಲಿ ಡಿಸೆಂಬರ್ 05: ಒಂದು ಕಾಲದ ಕಾಂಗ್ರೆಸ್ ಬಂಡಾಯಗಾರರಾದ ಸಚಿನ್ ಪೈಲಟ್ (Sachin Pilot) ಮತ್ತು ಟಿಎಸ್ ಸಿಂಗ್ ದೇವ್ (TS Singh Deo)  ಅವರ ಭವಿಷ್ಯವು ಇದಕ್ಕಿಂತ ಭಿನ್ನವಾಗಿರಲು ಸಾಧ್ಯವಿಲ್ಲ. ಛತ್ತೀಸ್‌ಗಢದ ನಿರ್ಗಮಿತ ಉಪಮುಖ್ಯಮಂತ್ರಿ ದೇವ್ ಅವರು ಅಂಬಿಕಾಪುರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸೋತರು. ಇತ್ತ ಪೈಲಟ್ ರಾಜಸ್ಥಾನದಲ್ಲಿ (Rajasthan) ಟೋಂಕ್ ಅನ್ನು ವ್ಯಾಪಕ ಅಂತರದಿಂದ ಉಳಿಸಿಕೊಂಡರು. ಇಂತಿರುವಾಗ ನಿರ್ಗಮಿತ ಸಿಎಂ ಅಶೋಕ್ ಗೆಹ್ಲೋಟ್ ಅವರ ಕಚೇರಿಯಲ್ಲಿ ವಿಶೇಷ ಕರ್ತವ್ಯದಲ್ಲಿರುವ ಲೋಕೇಶ್ ಶರ್ಮಾ ಕೆಲವೊಂದು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿರುವುದಾಗಿ ನ್ಯೂಸ್18 ವರದಿ ಮಾಡಿದೆ.

ರಾಜಸ್ಥಾನದಲ್ಲಿ ನಷ್ಟವನ್ನು ತಡೆಯಬಹುದಾಗಿತ್ತು ಅಂತಾರೆ ಶರ್ಮಾ. ನನ್ನ ಸಮೀಕ್ಷೆಗಳ ಆಧಾರದ ಮೇಲೆ, ಹಾಲಿ ಶಾಸಕರನ್ನು ಬದಲಾಯಿಸಬೇಕು. ಸಚಿನ್ ಜಿ ಪ್ರಸ್ತಾಪಿಸಿದ ಪೇಪರ್ ಸೋರಿಕೆ ವಿಷಯದ ಬಗ್ಗೆ ಗಮನ ಹರಿಸಬೇಕು ಎಂದು ನಾನು ಸಿಎಂಗೆ ಹೇಳಿದ್ದೆ. ನಾವು ಗೆಲ್ಲಬಹುದಾಗಿದ್ದ ಚುನಾವಣೆಯಲ್ಲಿ ಅವರ ಒಳಜಗಳವು ಪಕ್ಷದ ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಸಚಿನ್ ಪೈಲಟ್ ಅವರ ಸಂವಹನ ಮತ್ತು ಚಲನವಲನದ ಮೇಲೆ ನಿಗಾ ಇಡಲಾಗಿದೆ ಎಂಬ ಹೇಳಿಕೆ ಸೇರಿದಂತೆ ಗಂಭೀರ ಆರೋಪಗಳನ್ನು ಶರ್ಮಾ ಮಾಡಿದ್ದಾರೆ. ಕಾಂಗ್ರೆಸ್ ನಾಯಕನ ಬೆಂಬಲಿಗರು ಆರೋಪಿಸಿದಂತೆ ಪೈಲಟ್‌ನ ಫೋನ್ ಟ್ಯಾಪ್ ಮಾಡಲಾಗಿದೆಯೇ ಮತ್ತು ಅವರ ಚಲನವಲನಗಳನ್ನು ಅನುಸರಿಸಲಾಗಿದೆಯೇ ಎಂಬ ಪ್ರಶ್ನೆಗೆ, ಶರ್ಮಾ ಅವರು “ಅವರು ಎಲ್ಲಿಗೆ ಹೋಗುತ್ತಿದ್ದಾರೆ, ಯಾರನ್ನು ಭೇಟಿಯಾಗುತ್ತಿದ್ದಾರೆ, ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದು ಖಚಿತವಾಗಿ ಎಲ್ಲರಿಗೂ ತಿಳಿದಿದೆ.”

ಪೈಲಟ್ ಈಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಬದ್ಧರಾಗಿದ್ದಾರೆ. ಸಭೆಯಲ್ಲಿ ಮುಕ್ತವಾಗಿ ಮಾತನಾಡುವುದಾಗಿ ಅವರು ಈಗಾಗಲೇ ಹೇಳಿದ್ದಾರೆ. “ಲೋಕೇಶ್ ಶರ್ಮಾ ಅವರು ಏನು ಹೇಳಿದ್ದಾರೆ ಎಂಬುದನ್ನು ಅರಿಯಬೇಕು ಮತ್ತು ಚರ್ಚಿಸಬೇಕು” ಎಂದು ಪೈಲಟ್ ಹೇಳಿದ್ದಾರೆ.

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಲೋಕೇಶ್ ಶರ್ಮಾಗೆ ಟಿಕೆಟ್ ನಿರಾಕರಿಸಲಾಗಿತ್ತು.ಈ ಬಗ್ಗೆ ಮಾತನಾಡಿದ ಅವರು ಗೆಹ್ಲೋಟ್ ಪಕ್ಷದ ಹೈಕಮಾಂಡ್ ಅನ್ನು ವಂಚಿಸಿದ್ದಾರೆ. ಸರಿಯಾದ ಪ್ರತಿಕ್ರಿಯೆಯನ್ನು ಮೇಲಕ್ಕೆ ತಲುಪಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು. 20 ವರ್ಷಗಳಿಂದ ಕಾಂಗ್ರೆಸ್ ಸೋಲುತ್ತಿದ್ದ ಕ್ಷೇತ್ರವಾದ ಬಿಕಾನೇರ್ ಮತ್ತು ನಂತರ ಭಿಲ್ವಾರಾದಿಂದ ಚುನಾವಣೆಗೆ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರೂ ಗೆಹ್ಲೋಟ್ ಪ್ರಯೋಗ ಮಾಡಲು ನಿರಾಕರಿಸಿದರು ಎಂದಿದ್ದಾರೆ.

ಸಚಿನ್ ಪೈಲಟ್‌ಗೆ ಕಾಂಗ್ರೆಸ್ ಈಗ ಏನು ನೀಡಬಹುದು ಎಂಬುದು ಸ್ಪಷ್ಟವಾಗಿಲ್ಲ. ರಾಜಸ್ಥಾನ ಬಿಟ್ಟು ಹೋಗುವುದಿಲ್ಲ ಎಂದು ನಾಯಕ ದೃಢವಾಗಿ ಹೇಳಿದ್ದಾರೆ. 2019 ರಂತೆಯೇ, 2024 ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಲು ಪೈಲಟ್ ಸಂತೋಷಪಡುತ್ತಾರೆ. ಆದರೆ ಈ ಬಾರಿ ದೊಡ್ಡ ಕುರ್ಚಿ ಸಿಗದೇ ಇರುವುದನ್ನು ಅವರು ಒಪ್ಪುವುದಿಲ್ಲ.

ಇದನ್ನೂ ಓದಿ:ಮಾಳವಿಯಾ ಟ್ವೀಟ್​​ಗೆ ಟೀಕೆ; ಸಚಿನ್ ಪೈಲಟ್‌ಗೆ ಅಶೋಕ್ ಗೆಹ್ಲೋಟ್ ಬೆಂಬಲ

ಛತ್ತೀಸ್‌ಗಢದಲ್ಲಿ ಟಿಎಸ್‌ ಸಿಂಗ್‌ ದೇವ್‌ಗೆ, ಪಕ್ಷದ ಪ್ರತಿಸ್ಪರ್ಧಿ ಭೂಪೇಶ್‌ ಬಘೇಲ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸಿರುವುದು ಸಮಾಧಾನಕರವಲ್ಲ. ಆದರೆ ಈ ನಷ್ಟವು ಪಕ್ಷದ ನಾಯಕತ್ವವು ಈಗ ಬದಲಾಯಿಸಬೇಕಾದದ್ದನ್ನು ಕೇಳುತ್ತದೆ ಎಂಬ ಭರವಸೆಯನ್ನು ತರುತ್ತದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕತ್ವವು ಈ ಬಂಡಾಯಗಾರರ ಬಗ್ಗೆ ಸ್ವಲ್ಪ ಗಮನ ಹರಿಸುವುದು ಒಳ್ಳೆಯದು. ಅವರಿಂದಾಗಿ 2024 ರಲ್ಲಿ ಪಕ್ಷದಲ್ಲಿ ಬದಲಾವಣೆಗಳೂ ಸಂಭವಿಸಬಹುದು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್