ಮಾಳವಿಯಾ ಟ್ವೀಟ್​​ಗೆ ಟೀಕೆ; ಸಚಿನ್ ಪೈಲಟ್‌ಗೆ ಅಶೋಕ್ ಗೆಹ್ಲೋಟ್ ಬೆಂಬಲ

ಕಾಂಗ್ರೆಸ್ ನಾಯಕ ರಾಜೇಶ್ ಪೈಲಟ್ ಭಾರತೀಯ ವಾಯುಪಡೆಯ ವೀರ ಪೈಲಟ್ ಆಗಿದ್ದರು. ಅವರನ್ನು ಅವಮಾನಿಸುವ ಮೂಲಕ ಬಿಜೆಪಿ ಭಾರತೀಯ ವಾಯುಪಡೆಯ ತ್ಯಾಗವನ್ನು ಅವಮಾನಿಸುತ್ತಿದೆ. ಇಡೀ ದೇಶ ಇದನ್ನು ಖಂಡಿಸಬೇಕು ಎಂದು ಗೆಹ್ಲೋಟ್ ಹೇಳಿದ್ದಾರೆ. ಸಚಿನ್ ಪೈಲಟ್ ಮತ್ತು ಗೆಹ್ಲೋಟ್ ನಡುವಿನ ಗುದ್ದಾಟಗಳು ರಹಸ್ಯವಾಗಿಯೇನೂ ಇರಲಿಲ್ಲ. ಆದರೆ ಈ ವರ್ಷ ರಾಜಸ್ಥಾನದದಲ್ಲಿ ಚುನಾವಣೆ ನಡೆಯಲಿದ್ದು ಎರಡೂ ನಾಯಕರು ಜತೆಯಾಗಿ ನಿಂತಿದ್ದಾರೆ ಎಂಬುದನ್ನು ಈ ನಡೆ ತೋರಿಸುತ್ತದೆ.

ಮಾಳವಿಯಾ ಟ್ವೀಟ್​​ಗೆ ಟೀಕೆ; ಸಚಿನ್ ಪೈಲಟ್‌ಗೆ ಅಶೋಕ್ ಗೆಹ್ಲೋಟ್ ಬೆಂಬಲ
ಅಶೋಕ್ ಗೆಹ್ಲೋಟ್- ಸಚಿನ್ ಪೈಲಟ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 16, 2023 | 9:04 PM

ದೆಹಲಿ ಆಗಸ್ಟ್ 16: ಭಾರತೀಯ ವಾಯುಪಡೆಯಲ್ಲಿದ್ದಾಗ ರಾಜೇಶ್ ಪೈಲಟ್ (Rajesh Pilot), ಮಿಜೋರಾಂನಲ್ಲಿ ದೇಶದ ನಾಗರಿಕರ ಮೇಲೆ ಬಾಂಬ್ ಎಸೆದಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿತ್ತು. ಈ ಆರೋಪಕ್ಕೆ ಸಚಿನ್ ಪೈಲಟ್ ಖಡಕ್ ಉತ್ತರವನ್ನೂ ಕೊಟ್ಟಿದ್ದರು. ಇದೀಗ ರಾಜಸ್ಥಾನ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್ (Ashok Gehlot)ಕೂಡಾ ತಮ್ಮ ಸಹೋದ್ಯೋಗಿ ಸಚಿನ್ ಪೈಲಟ್ (Sachin Pilot) ಬೆಂಬಲಕ್ಕೆ ನಿಂತಿದ್ದಾರೆ.ಮಾರ್ಚ್ 5, 1966 ರಂದು ಮಿಜೋರಾಂನ ರಾಜಧಾನಿ ಐಜ್ವಾಲ್‌ನಲ್ಲಿ ಬಾಂಬ್ ದಾಳಿ ಮಾಡಿದ ಭಾರತೀಯ ವಾಯುಪಡೆಯ ವಿಮಾನಗಳನ್ನು ರಾಜೇಶ್ ಪೈಲಟ್ ಮತ್ತು ಸುರೇಶ್ ಕಲ್ಮಾಡಿ ಹಾರಿಸುತ್ತಿದ್ದರು ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ. ಇದಾದ ನಂತರ ಇಬ್ಬರೂ ಕಾಂಗ್ರೆಸ್ ಟಿಕೆಟ್‌ಗಳಲ್ಲಿ ಸಂಸದರು ಮತ್ತು ಸರ್ಕಾರದಲ್ಲಿ ಸಚಿವರಾದರು.. ಇಂದಿರಾ ಗಾಂಧಿ ಅವರು ರಾಜಕೀಯದಲ್ಲಿ ಸ್ಥಾನವನ್ನು ಪ್ರತಿಫಲವಾಗಿ ನೀಡಿದರು. ಈಶಾನ್ಯದಲ್ಲಿ ತಮ್ಮದೇ ಜನರ ಮೇಲೆ ವಾಯುದಾಳಿ ನಡೆಸಿದವರಿಗೆ ಗೌರವ ನೀಡಿದರು ಎಂಬುದು ಸ್ಪಷ್ಟವಾಗಿದೆ ಎಂದಿದ್ದರು ಮಾಳವಿಯಾ

ಮಾಳವಿಯಾ ಟ್ವೀಟ್ ಗೆ ಪ್ರತಿಕ್ರಿಯಿಸಿದ ಗೆಹ್ಲೋಟ್ ಪ್ರತಿಕ್ರಿಯಿಸಿ ಬಿಜೆಪಿಯು ಐಎಎಫ್‌ನ ತ್ಯಾಗವನ್ನು ಅವಮಾನಿಸುತ್ತಿದೆ ಎಂದಿದ್ದಾರೆ.

“ಕಾಂಗ್ರೆಸ್ ನಾಯಕ ರಾಜೇಶ್ ಪೈಲಟ್ ಭಾರತೀಯ ವಾಯುಪಡೆಯ ವೀರ ಪೈಲಟ್ ಆಗಿದ್ದರು. ಅವರನ್ನು ಅವಮಾನಿಸುವ ಮೂಲಕ ಬಿಜೆಪಿ ಭಾರತೀಯ ವಾಯುಪಡೆಯ ತ್ಯಾಗವನ್ನು ಅವಮಾನಿಸುತ್ತಿದೆ. ಇಡೀ ದೇಶ ಇದನ್ನು ಖಂಡಿಸಬೇಕು ಎಂದು ಗೆಹ್ಲೋಟ್ ಹೇಳಿದ್ದಾರೆ.

ಸಚಿನ್ ಪೈಲಟ್ ಮತ್ತು ಗೆಹ್ಲೋಟ್ ನಡುವಿನ ಗುದ್ದಾಟಗಳು ರಹಸ್ಯವಾಗಿಯೇನೂ ಇರಲಿಲ್ಲ. ಆದರೆ ಈ ವರ್ಷ ರಾಜಸ್ಥಾನದದಲ್ಲಿ ಚುನಾವಣೆ ನಡೆಯಲಿದ್ದು ಎರಡೂ ನಾಯಕರು ಜತೆಯಾಗಿ ನಿಂತಿದ್ದಾರೆ ಎಂಬುದನ್ನು ಈ ನಡೆ ತೋರಿಸುತ್ತದೆ.

ಇದನ್ನೂ ಓದಿ: ರಾಜೇಶ್ ಪೈಲಟ್ ಬಾಂಬ್ ಹಾಕಿದ್ದಾರೆ ಎಂದು ಬಗ್ಗೆ ಮಾಳವಿಯಾ ಟ್ವೀಟ್; ಫ್ಯಾಕ್ಟ್ ಚೆಕ್ ಮಾಡಿ ಪ್ರತಿಕ್ರಿಯಿಸಿದ ಸಚಿನ್ ಪೈಲಟ್

ಮಾಳವಿಯಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಸಚಿನ್ ಪೈಲಟ್, ಅಮಿತ್ ಮಾಳವಿಯಾ ಅವರೇ, ನೀವು ತಪ್ಪು ದಿನಾಂಕ ಮತ್ತು ಸತ್ಯವಲ್ಲದ್ದನ್ನು ಹೇಳುತ್ತಿದ್ದೀರಿ.ಹೌದು, ಭಾರತೀಯ ವಾಯುಪಡೆಯ ಪೈಲಟ್ ಆಗಿ, ನನ್ನ ದಿವಂಗತ ತಂದೆ ಬಾಂಬ್‌ಗಳನ್ನು ಹಾಕಿದ್ದರು. ಆದರೆ ಅದು ಹಿಂದಿನ ಪೂರ್ವ ಪಾಕಿಸ್ತಾನದಲ್ಲಿ 1971ರಲ್ಲಿ. ಇಂಡೋ-ಪಾಕ್ ಯುದ್ಧವೇಳೆ ಆಗಿದ್ದು.ನೀವು ಹೇಳುವಂತೆ ಅಲ್ಲ, ಮಾರ್ಚ್ 5, 1966 ರಂದು ಮಿಜೋರಾಂನಲ್ಲಿ ಅಲ್ಲ. ಅವರು 29 ಅಕ್ಟೋಬರ್ 1966ರಲ್ಲಿ IAF ಗೆ ನೇಮಕಗೊಂಡರು! (ಪ್ರಮಾಣಪತ್ರ ಲಗತ್ತಿಸಲಾಗಿದೆ). ಜೈ ಹಿಂದ್ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದಿದ್ದಾರೆ.

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, 1962 ರಲ್ಲಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರು “ಮಿಜೋರಾಂನಲ್ಲಿ ಜನರ ಮೇಲೆ ದಾಳಿ ಮಾಡಲು” ರೇಡಿಯೊ ಮೂಲಕ ವಾಯುಪಡೆಗೆ ಆದೇಶಿಸಿದ್ದರು ಎಂದು ಮೋದಿ ಹೇಳಿದ್ದು, ಈಶಾನ್ಯ ಭಾಗವು ಚೀನಾದ ಆಕ್ರಮಣದ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೆಣಗಾಡಿದ್ದು ಕಾಂಗ್ರೆಸ್‌ ಅವರನ್ನು ನಿರ್ಲಕ್ಷಿಸಿತ್ತು ಎಂದು ಆರೋಪಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್