ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರನ್ನು ‘ತುಳಸಿ ಭಾಯಿ’ ಎಂದು ಕರೆದು ಸ್ವಾಗತಿಸಿದ ಮೋದಿ, ನನಗೆ ಆ ಹೆಸರು ಇಷ್ಟ ಎಂದ ಘೆಬ್ರೆಯೆಸಸ್
ಗಾಂಧಿನಗರದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿದ ಘೆಬ್ರೆಯೆಸಸ್, ತುಳಸಿ ಭಾಯಿ ಎಂಬ ಹೆಸರು ನನಗೆ ಇಷ್ಟವಾಗಿದೆ ಏಕೆಂದರೆ 'ತುಳಸಿ' ಒಂದು ಔಷಧೀಯ ಸಸ್ಯ. ನಾನು ಇಲ್ಲಿ ವೆಲ್ನೆಸ್ ಸೆಂಟರ್‌ನಲ್ಲಿ ತುಳಸಿ ನೆಟ್ಟಿದ್ದೇನೆ. ಇದನ್ನು ಮಾಡಲು ನನಗೆ ತುಂಬಾ ಸಂತೋಷವಾಗಿದೆ ಏಕೆಂದರೆ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದಿದ್ದಾರೆ.
ದೆಹಲಿ ಆಗಸ್ಟ್ 16: ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ (Tedros Adhanom Ghebreyesus) ಅವರು ಆರೋಗ್ಯ ಮತ್ತು ಔಷಧದ ಕುರಿತು ಹಲವಾರು ಸಮಾವೇಶಗಳಲ್ಲಿ ಭಾಗವಹಿಸಲು ಬುಧವಾರ ಗುಜರಾತ್‌ಗೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಘೆಬ್ರೆಯೆಸಸ್ ಅವರನ್ನು ಸ್ವಾಗತಿಸಿ, ತುಳಸಿ ಬಾಯಿ ಎಂಬ ಹೊಸ ಹೆಸರಿನಿಂದ ಕರೆದಿದ್ದಾರೆ. ತಮ್ಮ ಹೊಸ ಹೆಸರಿನ ಬಗ್ಗೆ ಪ್ರತಿಕ್ರಿಯಿಸಿದ WHO ಮುಖ್ಯಸ್ಥರು ಪಕ್ಕಾ ಗುಜರಾತಿ ಹೆಸರು ನನಗಿಷ್ಟವಾಯಿತು ಎಂದಿದ್ದಾರೆ.
ಗಾಂಧಿನಗರದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿದ ಘೆಬ್ರೆಯೆಸಸ್, ತುಳಸಿ ಭಾಯಿ ಎಂಬ ಹೆಸರು ನನಗೆ ಇಷ್ಟವಾಗಿದೆ ಏಕೆಂದರೆ ‘ತುಳಸಿ’ ಒಂದು ಔಷಧೀಯ ಸಸ್ಯ. ನಾನು ಇಲ್ಲಿ ವೆಲ್ನೆಸ್ ಸೆಂಟರ್‌ನಲ್ಲಿ ತುಳಸಿ ನೆಟ್ಟಿದ್ದೇನೆ. ಇದನ್ನು ಮಾಡಲು ನನಗೆ ತುಂಬಾ ಸಂತೋಷವಾಗಿದೆ ಏಕೆಂದರೆ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದಿದ್ದಾರೆ.
#WATCH | WHO (World Health Organisation) DG, Tedros Adhanom Ghebreyesus says “I like the name Tulsi Bhai because the ‘Tulsi’is a medicinal plant. I just planted Tulsi here in the Wellness Centre. I’m really happy to do that because it has many benefits. WHO has always supported… pic.twitter.com/C1dFtIBHd0
— ANI (@ANI) August 16, 2023
ಇದಕ್ಕೂ ಮೊದಲು, ಪ್ರಧಾನಿ ಮೋದಿ ಕೇಂದ್ರ ಆಯುಷ್ ಸಚಿವಾಲಯದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಲ್ಲಿ WHO ಮುಖ್ಯಸ್ಥರು ಸ್ಥಳದಲ್ಲಿ ದಾಂಡಿಯಾ ನೃತ್ಯದಲ್ಲಿ ಭಾಗವಹಿಸಿರುವುದು ಕಾಣಬಹುದು. ನನ್ನ ಒಳ್ಳೆಯ ಸ್ನೇಹಿತೆ ತುಳಸಿ ಭಾಯೀ ನವರಾತ್ರಿಗೆ ಸಿದ್ಧರಾಗಿದ್ದಾರೆ. ಭಾರತಕ್ಕೆ ಸುಸ್ವಾಗತ, @DrTedros!” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ನಡೆದ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯಲ್ಲಿ ಈ ಹೆಸರನ್ನು ಅವರಿಗೆ ಮೊದಲು ನೀಡಲಾಯಿತು, ಅಲ್ಲಿ ಅವರು ‘ಪಕ್ಕ ಗುಜರಾತಿ’ ಹೆಸರು ನೀಡುವಂತೆ ಘೆಬ್ರೆಯೆಸಸ್ ಕೇಳಿದ್ದರು. ಟೆಡ್ರೊಸ್ ನನ್ನ ಉತ್ತಮ ಸ್ನೇಹಿತ. ನನಗೆ ಭಾರತೀಯ ಶಿಕ್ಷಕರು ಕಲಿಸಿದರು ಮತ್ತು ಅವರಿಂದಲೇ ನಾನು ಇಲ್ಲಿದ್ದೇನೆ ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಇಂದು ಅವರು ನನ್ನಲ್ಲಿ ‘ನಾನು ಪಕ್ಕಾ ಗುಜರಾತಿ ಆಗಿದ್ದೇನೆ. ನೀವು ನನಗೆ ಹೆಸರನ್ನು ನಿರ್ಧರಿಸಿದ್ದೀರಾ?’ ಎಂದು ಕೇಳಿದರು. ಹಾಗಾಗಿ ನಾನು ಅವರನ್ನು ಗುಜರಾತಿ ಹೆಸರು ತುಳಸಿ ಭಾಯಿ ಎಂದು ಕರೆಯುತ್ತೇನೆ ಎಂದು ಪ್ರಧಾನಿ ಮೋದಿ ಕಳೆದ ವರ್ಷ ಹೇಳಿದ್ದರು.
Delighted to be in #India for the @WHO Traditional Medicine Global Summit, the Ministerial Meeting on Ending TB in @WHOSEARO and the G20 Health Ministers Meeting. Namaste India! pic.twitter.com/908fzLAGjR
— Tedros Adhanom Ghebreyesus (@DrTedros) August 16, 2023
WHO ಮುಖ್ಯಸ್ಥರು ಕ್ಷಯರೋಗ ತೊಡೆದುಹಾಕುವ ಉದ್ದೇಶದ ಸಚಿವರ ಸಭೆ, ಡಬ್ಲ್ಯುಎಚ್ಒ ಸಾಂಪ್ರದಾಯಿಕ ಔಷಧ ಜಾಗತಿಕ ಶೃಂಗಸಭೆ ಮತ್ತು G20 ಆರೋಗ್ಯ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಂಶೋಧನೆ, ಸಾಕ್ಷ್ಯ ಮತ್ತು ಕಲಿಕೆ, ನೀತಿ, ಡೇಟಾ ಮತ್ತು ನಿಯಂತ್ರಣ, ನಾವೀನ್ಯತೆ ಮತ್ತು ಡಿಜಿಟಲ್ ಆರೋಗ್ಯ, ಜೀವವೈವಿಧ್ಯ, ಇಕ್ವಿಟಿ ಮತ್ತು ಸಾಂಪ್ರದಾಯಿಕ ಆರೋಗ್ಯ ರಕ್ಷಣೆ ಜ್ಞಾನದ ಬಗ್ಗೆ ಇಲ್ಲಿ ಗೋಷ್ಠಿ ನಡೆಯಲಿದೆ.
ಇದನ್ನೂ ಓದಿ: ಇತಿಹಾಸ ರಚಿಸಲು ಪ್ರಧಾನಿ ಮೋದಿ ಸಮರ್ಥರಲ್ಲ: ಮ್ಯೂಸಿಯಂ ಹೆಸರು ಬದಲಾಯಿಸಿದ್ದಕ್ಕೆ ಪ್ರತಿಪಕ್ಷಗಳ ಟೀಕೆ
ಸಚಿವಾಲಯವು ಕನ್ವೆನ್ಷನ್ ಸೆಂಟರ್‌ನಲ್ಲಿ ಯೋಗ ಮತ್ತು ಧ್ಯಾನದ ಬಗ್ಗೆ ಗೋಷ್ಠಿಗಳನ್ನು ಆಯೋಜಿಸುತ್ತದೆ. ಹೋಟೆಲ್ ಸ್ಥಳಗಳಲ್ಲಿ ಯೋಗ ಮತ್ತು ಧ್ಯಾನ ಸೆಷನ್‌ಗಳ ನಡುವೆ ಮಹಾತ್ಮಾ ಮಂದಿರ ಕನ್ವೆನ್ಷನ್ ಸೆಂಟರ್‌ನಲ್ಲಿ ಸಣ್ಣ ಯೋಗ ವಿರಾಮಗಳು ಸಹ ಇರುತ್ತವೆ ಎಂದು ಎಎನ್‌ಐ ವರದಿ ಮಾಡಿದೆ. ಘೆಬ್ರೆಯೆಸಸ್ ಅವರು ಕೇಂದ್ರದ ಪ್ರಾಥಮಿಕ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ ಅನ್ನು ಶ್ಲಾಘಿಸಿದರು. ಭಾರತ ಸರ್ಕಾರದ ಆಯುಷ್ಮಾನ್ ಭಾರತ್ ಉಪಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಸರಿಯಾದ ಹೂಡಿಕೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ