Chandrayaan 3: ಬಂದೇ ಬಿಡ್ತು ಕೋಟಿ ಕೋಟಿ ಭಾರತೀಯರ ಕನಸು ನನಸಾಗುವ ಕ್ಷಣ, ಇಂದು ನಿರ್ಣಾಯಕ ದಿನ

ಚಂದ್ರಯಾನ-3.. ಇಡೀ ದೇಶವೇ ಕಾಯುತ್ತಿರುವ ಕ್ಷಣ ಹತ್ತಿರವಾಗುತ್ತಿದೆ. ಇಸ್ರೋ ಉಡಾವಣೆ ಮಾಡಿದ್ದ ನೌಕೆ ಚಂದ್ರನ ಅಂತಿಮ ಕಕ್ಷೆ ಸೇರಿದ್ದು, ಇಂದು ನೌಕೆಯಿಂದ ಲ್ಯಾಂಡರ್ ಪ್ರತ್ಯೇಕಗೊಳ್ಳಲು ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ಇಡೀ ದೇಶವೇ ಕಾಯುತ್ತಿರುವ ಕ್ಷಣ ಹತ್ತಿರವಾಗುತ್ತಿದೆ.

Chandrayaan 3: ಬಂದೇ ಬಿಡ್ತು ಕೋಟಿ ಕೋಟಿ ಭಾರತೀಯರ ಕನಸು ನನಸಾಗುವ ಕ್ಷಣ, ಇಂದು ನಿರ್ಣಾಯಕ ದಿನ
ಚಂದ್ರಯಾನ-3
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: ರಮೇಶ್ ಬಿ. ಜವಳಗೇರಾ

Updated on: Aug 17, 2023 | 7:26 AM

ಬೆಂಗಳೂರು, (ಆಗಸ್ಟ್ 17): ಕೋಟಿ ಕೋಟಿ ಭಾರತೀಯರ ಕನಸು ನನಸಾಗುವ ಕ್ಷಣ ಬಂದಿದೆ. ಭಾರತದ(India) ಮಹತ್ವಾಕಾಂಕ್ಷೆಯ ಇಸ್ರೋದ(ISRO) ಚಂದ್ರಯಾನ-3(Chandrayaan 3:), ಐದನೇ ಹಾಗೂ ಅಂತಿಮ ಕಕ್ಷೆಯನ್ನ ಯಶಸ್ವಿಯಾಗಿ ತಲುಪಿದೆ. ಚಂದ್ರನನ್ನ ಚುಂಬಿಸಲು ನೌಕೆ ಮತ್ತಷ್ಟು ಹತ್ತಿರವಾಗಿದೆ. ಚಂದ್ರನ ದಕ್ಷಿಣ ಧ್ರುವದಿಂದ ಜಸ್ಟ್ 163 ಕಿಲೋಮೀಟರ್ ದೂರದಲ್ಲಿ ನೌಕೆ ಸಾಗುತ್ತಿದೆ. ಆಗಸ್ಟ್ 5ರಿಂದ ಹಂತ ಹಂತವಾಗಿ ಕಕ್ಷೆಯಿಂದ ಕಕ್ಷೆಗೆ ನೌಕೆಯನ್ನ ದಾಟಿಸುವಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ನಿನ್ನೆ (ಆಗಸ್ಟ್ 16) ಬೆಳಗಿನ ಜಾವ 8.30ಕ್ಕೆ ಸರಿಯಾಗಿ ಅಂತಿಮ ಕಕ್ಷೆ ಸೇರಿದೆ. ನೌಕೆಯ ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್‌ ಪ್ರತ್ಯೇಕಗೊಳ್ಳಲು ಕ್ಷಣಗಣನೆ ಆರಂಭವಾಗಿದ್ದು ಇಂದು (ಆಗಸ್ಟ್ 17) ಪ್ರತ್ಯೇಕಗೊಳ್ಳಲಿವೆ. ಹೀಗಾಗಿ ಕೋಟಿ ಕೋಟಿ ಭಾರತೀಯರು ಕಾಯುತ್ತಿರುವ ಕ್ಷಣ ಹತ್ತಿರವಾಗುತ್ತಿದ್ದು, ಆಗಸ್ಟ್ 23ರಂದು ನೌಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಸ್ಮೂತ್ ಲ್ಯಾಂಡ್ ಆಗಲಿದೆ.

ಈವರೆಗೂ ಇಸ್ರೋ ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದೆ. ಸ್ಮೂತ್ ಲ್ಯಾಂಡಿಂಗ್ ಬಳಿಕ ಚಂದ್ರನ ಮೇಲೆ ನೀರು ಸೇರಿದಂತೆ ಹಲವು ರೀತಿ ಅಧ್ಯಯನ ನಡೆಸಲು ಇಸ್ರೋದ ವಿಜ್ಞಾನಿಗಳು ಸಿದ್ಧತೆ ನಡೆಸಿದ್ದಾರೆ. ರೋವರ್ ಚಂದ್ರನ ಮೇಲೆ ಲ್ಯಾಂಡ್ ಆದ ನಂತರವೇ ಮುಂದಿನ ಹಂತ ಶುರುವಾಗಲಿದ್ದು, ಅಲ್ಲಿಂದ ಭಾರತ ಬಾಹ್ಯಾಕಾಶ ಲೋಕದಲ್ಲಿ ಹೊಸ ಇತಿಹಾಸ ಬರೆಯಲಿದೆ.

ಇದನ್ನೂ ಓದಿ: ಚಂದ್ರಯಾನ 3 ರ ಐದನೇ ಮತ್ತು ಅಂತಿಮ ಚಂದ್ರನ ಕಕ್ಷೆಯ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ!

ಚಂದ್ರಯಾನ-3 ಮಿಷನ್ ಆಗಸ್ಟ್ 23, ಸಂಜೆ 5:47 ಕ್ಕೆ ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯಲಿದೆ. ಇದು ಯಶಸ್ವಿಯಾದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಐತಿಹಾಸಿಕ ಸಾಧನೆಯಾಗಲಿದೆ. ಅಲ್ಲದೇ ಚಂದ್ರನ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಸಹಾಯಕವಾಗಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ