ಉತ್ತರ ಪ್ರದೇಶದಲ್ಲಿ ಮಹಿಳೆ ಸೇರಿದಂತೆ ಐವರು ನಕ್ಸಲರನ್ನು ಬಂಧಿಸಿದ ಭಯೋತ್ಪಾದನಾ ನಿಗ್ರಹ ದಳ

ಮಹಿಳಾ ಗುಂಪಿನ ಮುಖ್ಯಸ್ಥೆ ತಾರಾ ದೇವಿ ಸೇರಿದಂತೆ ಐವರು ನಕ್ಸಲರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಲ್ಲಿಯಾದಲ್ಲಿ ಬಂಧಿಸಿದೆ. ಸಹತ್ವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಸಂತಪುರ ಗ್ರಾಮದಲ್ಲಿ ಅಡಗಿದ್ದ ನಕ್ಸಲರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ನಕ್ಸಲೀಯ ಸಾಹಿತ್ಯ, ಕೈಬರಹದ ಸಂದೇಶಗಳು, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ನಿಷೇಧಿತ ಸಿಪಿಐ ಮಾವೋವಾದಿ ಗುಂಪಿನೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ.

ನಕ್ಸಲರು-ಸಾಂದರ್ಭಿಕ ಚಿತ್ರImage Credit source: Mint
Follow us
ನಯನಾ ರಾಜೀವ್
|

Updated on:Aug 17, 2023 | 8:21 AM

ಮಹಿಳಾ ಗುಂಪಿನ ಮುಖ್ಯಸ್ಥೆ ತಾರಾ ದೇವಿ ಸೇರಿದಂತೆ ಐವರು ನಕ್ಸಲರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಲ್ಲಿಯಾದಲ್ಲಿ ಬಂಧಿಸಿದೆ. ಸಹತ್ವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಸಂತಪುರ ಗ್ರಾಮದಲ್ಲಿ ಅಡಗಿದ್ದ ನಕ್ಸಲರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ನಕ್ಸಲೀಯ ಸಾಹಿತ್ಯ, ಕೈಬರಹದ ಸಂದೇಶಗಳು, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ನಿಷೇಧಿತ ಸಿಪಿಐ ಮಾವೋವಾದಿ ಗುಂಪಿನೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ.

ತಾರಾ ದೇವಿ ಅಲಿಯಾಸ್ ಮಂಜು ಅವರು 2005 ರಿಂದ ನಿಷೇಧಿತ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಬಿಹಾರದ ಮಧುಬನ್ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಮತ್ತೊಬ್ಬ ಬಂಧಿತನನ್ನು ಸತ್ಯಪ್ರಕಾಶ್ ಎಂದು ಗುರುತಿಸಲಾಗಿದ್ದು, ಈತ ನಕ್ಸಲೀಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದ ಮತ್ತು ರೈತರ ಸಂಘಟನೆಯನ್ನು ರೂಪಿಸಿದ ಆರೋಪ ಹೊತ್ತಿದ್ದಾನೆ.

ಪೂರ್ವಾಂಚಲ್ ಪ್ರದೇಶದಲ್ಲಿ ಸಮಿತಿ ಮತ್ತು ಗುಂಪು ಸಭೆಗಳನ್ನು ಕರೆಯುವ ಮೂಲಕ ಅವರು ನಕ್ಸಲ್ ಸಿಂಡಿಕೇಟ್ ಅನ್ನು ಮುನ್ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಮತ್ತಷ್ಟು ಓದಿ: Chhattisgarh: ಕುಟುಂಬಸ್ಥರ ಎದುರೇ ಬಿಜೆಪಿ ಮುಖಂಡನನ್ನು ಹತ್ಯೆ ಮಾಡಿದ ನಕ್ಸಲರು

ನಾಗ್ಪುರದಲ್ಲಿ ನಕ್ಸಲರ ಬಂಧನ ನಾಗ್ಪುರದಲ್ಲಿ ನಕ್ಸಲ್ ಸಂಘಟನೆಯ ನಾಲ್ವರನ್ನು ಬಂಧಿಸಲಾಗಿದ್ದು, ಅವರಿಂದ ಸ್ವಯಂಚಾಲಿತ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸರು ಬುಧವಾರ ತಿಳಿಸಿದ್ದಾರೆ. ಅವರ ಬಳಿಯಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳ ಛಾಯಾಚಿತ್ರಗಳು ಮತ್ತು ಕೆಲವು ನಕ್ಸಲ್ ಸಾಹಿತ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಗುಂಪಿನ ನಾಯಕ ಮುರಳಿ ಅಲಿಯಾಸ್ ಮಹೇಶ್ ರೆಡ್ಡಿ, ನೆರೆ ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ. ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಸಲೇಕಸ ಮತ್ತು ದರೇಕಸ ಭೂಪ್ರದೇಶದಲ್ಲಿ ಈತ ಕಾರ್ಯಾಚರಣೆ ನಡೆಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಂಧಿತ ಇತರ ಮೂವರನ್ನು ಧನಂಜಯ್ ಅಲಿಯಾಸ್ ಧನ್ನು ಬುರ್ಲಿ, ನರೇಶ್ ಬನ್ಸೋಡ್ ಮತ್ತು ಅರುಣ್ ಕುಮಾರ್ ಪೆರೆರಾ ಎಂದು ಗುರುತಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:14 am, Thu, 17 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್