AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್‌ನಲ್ಲಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ದಾಳಿ; ಉಗ್ರ ತರಬೇತುದಾರ ಟೆಕ್ಕಿ ಸೇರಿದಂತೆ 18 ವರ್ಷದ ಯುವತಿಯ ಸೆರೆ

Gujarat Anti Terrorism Squad: ಅಮೀರ್ ಪೇಟ್​​​ನಲ್ಲಿ ಟೆಕ್ಕಿಯಾಗಿರುವ ಜಾವೀದ್ ಬಕ್ರೀದ್ ನಿಮಿತ್ತ ನಾಲ್ಕು ದಿನಗಳ ಹಿಂದೆ ಮಗಳೊಂದಿಗೆ ರಾಮಗುಂಡಕ್ಕೆ ಹೋಗಿದ್ದ. ಹೈದರಾಬಾದಿನ ಅಮೀರ್ ಪೇಟ್​​​ನಲ್ಲಿ ಜಾವೀದ್ ಗೆ ಸೇರಿದ ಕೋಚಿಂಗ್ ಸೆಂಟರ್ ನ ಚಟುವಟಿಕೆಗಳ ಬಗ್ಗೆ ಎಟಿಎಸ್ ವಿಚಾರಣೆ ನಡೆಸುತ್ತಿದೆ.

ಹೈದರಾಬಾದ್‌ನಲ್ಲಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ದಾಳಿ; ಉಗ್ರ ತರಬೇತುದಾರ ಟೆಕ್ಕಿ ಸೇರಿದಂತೆ 18 ವರ್ಷದ ಯುವತಿಯ ಸೆರೆ
ಹೈದರಾಬಾದ್‌ನಲ್ಲಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ದಾಳಿ
ಸಾಧು ಶ್ರೀನಾಥ್​
|

Updated on: Jun 28, 2023 | 10:10 AM

Share

ತೆಲಂಗಾಣದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳು (Terrorism) ಸಂಚಲನ ಮೂಡಿಸುತ್ತಿವೆ. ಗುಜರಾತಿನ ಭಯೋತ್ಪಾದಕ ಶಂಕಿತನ ಜೊತೆ ರಾಮಗುಂಡಂ ಯುವತಿ ಚಾಟ್ ಮಾಡಿರುವುದು ಇದೀಗ ಸಂಚಲನ ಮೂಡಿಸಿದೆ. ಫೇಸ್‌ಬುಕ್ (Facebook) ಮೂಲಕ ನಡೆದಿರುವ ಚಾಟಿಂಗ್​​ ಸಾಮಾನ್ಯ ಸಂಭಾಷಣೆಯಾಗಿದೆಯೇ ಅಥವಾ ಅದಕ್ಕೆ ಬೇರೆ ಯಾವುದಾದರೂ ಕೋನವಿದೆಯೇ ಎಂದು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್ Gujarat Anti Terrorism Squad) ತನಿಖೆ ನಡೆಸುತ್ತಿದೆ. ಸದ್ಯ ಅನುಮಾನವಷ್ಟೇ ಇದೆ ಎಂದು ಹೇಳಿರುವ ಗುಜರಾತ್ ಎಟಿಎಸ್ ಅಧಿಕಾರಿಗಳು, ಯುವತಿಯನ್ನು ವಿಚಾರಣೆ ನಡೆಸಿದ ಬಳಿಕ ಸ್ಪಷ್ಟನೆ ನೀಡುವುದಾಗಿ ಹೇಳಿದ್ದಾರೆ.

ಹೈದರಾಬಾದ್‌ಗೆ ಧಾವಿಸಿ ಬಂದಿರುವ ಗುಜರಾತ್ ಎಟಿಎಸ್ ಅಧಿಕಾರಿಗಳು ಯುವತಿಯ ಫೋನ್ ಸಂಭಾಷಣೆಗಳು, ಫೇಸ್‌ಬುಕ್ ಚಾಟಿಂಗ್ ಮುಂತಾದ ವಿಷಯಗಳ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಎಟಿಎಸ್ ಮಾಹಿತಿ ಪ್ರಕಾರ ಹುಡುಗಿಯ ವಯಸ್ಸು 18 ವರ್ಷಗಳು. ಆರನೇ ತರಗತಿಯ ನಂತರ ಅವಳು ಓದುವುದನ್ನು ನಿಲ್ಲಿಸಿದ್ದಾಳೆ.

ಮೊಬೈಲ್ ಇದ್ದರೆ ಆಗಾಗ ಗೇಮ್ ಆಡುತ್ತಾಳೆ ಅಂದುಕೊಂಡಿದ್ದೆವು ಎನ್ನುತ್ತಾರೆ ಆ ಯುವತಿಯ ಪಾಲಕರು. ಎಟಿಎಸ್ ಅಧಿಕಾರಿಗಳು ಬರುವವರೆಗೂ ಅವರ ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆ ಅಥವಾ ಅವರ ಚಾಟ್‌ಗಳ ಬಗ್ಗೆ ನಮಗೆ ತಿಳಿದಿರಲಿಲ್ಲ ಎಂದು ಪೋಷಕರು ಆತಂಕದ ದನಿಯಲ್ಲಿ ಹೇಳಿದ್ದಾರೆ. ಆದರೆ ಈ ಹೇಳಿಕೆಯು ಕೇವಲ ಅನುಮಾನಾಸ್ಪದವಾಗಿದೆ ಮತ್ತು ಯಾವುದೇ ಭಯೋತ್ಪಾದನೆಯ ಅಂಶವನ್ನು ದೃಢಪಡಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಎಟಿಎಸ್ ಅಧಿಕಾರಿಗಳು ಹೈದರಾಬಾದ್‌ನಲ್ಲಿ ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಹೈದರಾಬಾದ್‌ನ ಹಲವು ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ರಾಮಗುಂಡಂನಲ್ಲಿ ಒಬ್ಬರನ್ನು, ವಾರಂಗಲ್‌ನ ಇಬ್ಬರು ಮತ್ತು ಹೈದರಾಬಾದ್‌ನಲ್ಲಿ ಇಬ್ಬರನ್ನು ಬಂಧಿಸಲಾಗಿದೆಯಂತೆ. ಸೋಮವಾರ ರಾತ್ರಿ ಕಾಲಾಪತ್ತಾರ್ (41) ಎಂಬುವರನ್ನು ಎಟಿಎಸ್ ಅಧಿಕಾರಿಗಳು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಟೋಲಿ ಚೌಕಿ ನಿವಾಸಿ ಮೊಹಮ್ಮದ್ ಜಾವೀದ್ ಸಹ ಬಂಧಿತ ಆರೋಪಿ.

ಜಾವೀದ್ ಅಮೀರ್ ಪೇಟ್​​​ನ ಕೋಚಿಂಗ್ ಸೆಂಟರ್‌ನಲ್ಲಿ ಸಾಫ್ಟ್‌ವೇರ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದಾನೆ. ಬಕ್ರೀದ್ ನಿಮಿತ್ತ ನಾಲ್ಕು ದಿನಗಳ ಹಿಂದೆ ಮಗಳೊಂದಿಗೆ ರಾಮಗುಂಡಕ್ಕೆ ಹೋಗಿದ್ದ. ಜಾವೀದ್ ಗೆ ಸೇರಿದ ಕೋಚಿಂಗ್ ಸೆಂಟರ್ ನ ಚಟುವಟಿಕೆಗಳ ಬಗ್ಗೆ ಎಟಿಎಸ್ ವಿಚಾರಣೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಅಮೀರ್ ಪೇಟೆಯ gಲ್ಲಿ ಗಲ್ಲಿಗಳನ್ನು ಜರಡಿ ಹಿಡಿಯಲಾಗುತ್ತಿದೆ.

ಇನ್ನೂ ನಾಲ್ಕು ಕೋಚಿಂಗ್ ಸೆಂಟರ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಉಗ್ರನಿಗೆ ಕೋಚಿಂಗ್ ರೂಪದಲ್ಲಿ ತರಬೇತಿ ನೀಡಲಾಗಿದೆ ಎಂದು ಗುಜರಾತ್ ಎಟಿಎಸ್ ಅಧಿಕಾರಿಗಳು ಶಂಕಿಸಿದ್ದಾರೆ. ಎಟಿಎಸ್ ಅಧಿಕಾರಿಗಳು ಅದರ ವಿವರಗಳನ್ನು ಸಂಪೂರ್ಣವಾಗಿ ತನಿಖೆ ಮಾಡುವ ನಿಟ್ಟಿನಲ್ಲಿ ಮಗ್ನರಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ