Uttar Pradesh: ಉತ್ತರ ಪ್ರದೇಶದಲ್ಲಿ ವಂದೇ ಭಾರತ್ ರೈಲು ಡಿಕ್ಕಿ ಹೊಡೆದು ಓರ್ವ ಸಾವು
ಉತ್ತರ ಪ್ರದೇಶ(Uttar Pradesh) ದ ತುಂಡ್ಲಾ ಪ್ರದೇಶದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲು ಡಿಕ್ಕಿ ಹೊಡೆಸು ಓರ್ವ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶ(Uttar Pradesh) ದ ತುಂಡ್ಲಾ ಪ್ರದೇಶದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲು ಡಿಕ್ಕಿ ಹೊಡೆಸು ಓರ್ವ ಮೃತಪಟ್ಟಿದ್ದಾರೆ. ರೈಲು ವಾರಣಾಸಿಯಿಂದ ದೆಹಲಿಗೆ ತೆರಳುತ್ತಿದ್ದಾಗ ತುಂಡ್ಲಾ ಬಳಿಯ ಜಲೇಸರ್ ಮತ್ತು ಪೋರಾ ಪಟ್ಟಣಗಳ ನಡುವೆ ಈ ಅಹಿತಕರ ಘಟನೆ ಸಂಭವಿಸಿದೆ. ರೈಲ್ವೇ ಹಳಿ ದಾಟಲು ಯತ್ನಿಸಿದಾಗ ಈ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಘಟನೆಯ ಸುತ್ತಲಿನ ನಿಖರವಾದ ವಿವರಗಳು ಇನ್ನೂ ಲಭ್ಯವಾಗಿಲ್ಲ, ತನಿಖೆ ಮುಂದುವರೆದಿದೆ.
ವಾರಾಣಸಿಯಿಂದ ಹಿಂದಿರುಗುವಾಗ ಹಸುವೊಂದಕ್ಕೆ ಡಿಕ್ಕಿ ಹೊಡೆದ ಘಟನೆ ವರದಿಯಾಗಿತ್ತು. ಕಳೆದ ತಿಂಗಳು ಕೇರಳದಲ್ಲಿ ಒಂದೇ ಭಾರತ್ ರೈಲಿಗೆ ಸಿಲುಕಿ ವ್ಯಕ್ತಿ ಮೃತಪಟ್ಟಿದ್ದರು. ರೈಲು ಕಾಸರಗೋಡಿನಿಂದ ತಿರುವನಂತಪುರಕ್ಕೆ ತೆರಳುತ್ತಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಐದು ವಂದೇ ಭಾರತ್ ರೈಲಿಗೆ ಭೋಪಾಲ್ನಲ್ಲಿ ಚಾಲನೆ ನೀಡಿದರು.
ಮತ್ತಷ್ಟು ಓದಿ: Vande Bharat Express: ಧಾರವಾಡ – ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರದ ಸಮಯ, ಟಿಕೆಟ್ ದರ ಇಲ್ಲಿದೆ
ಮಧ್ಯ ಪ್ರದೇಶದ ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ರಾಣಿ ಕಮಲಾಪತಿ-ಜಬಾಲ್ಪುರ, ಖಜುರಾಹೊ- ಭೂಪಾಲ್- ಇಂದೋರ್, ಗೋವಾದ ಮಂಡಗಾವ್- ಮುಂಬೈ, ಧಾರವಾಡ- ಬೆಂಗಳೂರು, ಹಟಿಯಾ- ಪಾಟ್ನಾ ನಡುವೆ ಸಂಚರಿಸಲು ರೈಲುಗಳಿಗೆ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:51 am, Wed, 28 June 23