AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜೇಶ್ ಪೈಲಟ್ ಬಾಂಬ್ ಹಾಕಿದ್ದಾರೆ ಎಂದು ಬಗ್ಗೆ ಮಾಳವಿಯಾ ಟ್ವೀಟ್; ಫ್ಯಾಕ್ಟ್ ಚೆಕ್ ಮಾಡಿ ಪ್ರತಿಕ್ರಿಯಿಸಿದ ಸಚಿನ್ ಪೈಲಟ್

ತನ್ನ ಅಪ್ಪನ ಬಗ್ಗೆ ಆರೋಪ ಹೊರಿಸಿದ ಮಾಳವಿಯಾ ಅವರಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಸಚಿನ್ ಪೈಲಟ್ (Sachin Pilot), ಅಮಿತ್ ಮಾಳವಿಯಾ ಅವರೇ, ನೀವು ತಪ್ಪು ದಿನಾಂಕ ಮತ್ತು ಸತ್ಯವಲ್ಲದ್ದನ್ನು ಹೇಳುತ್ತಿದ್ದೀರಿ.ಹೌದು, ಭಾರತೀಯ ವಾಯುಪಡೆಯ ಪೈಲಟ್ ಆಗಿ, ನನ್ನ ದಿವಂಗತ ತಂದೆ ಬಾಂಬ್‌ಗಳನ್ನು ಹಾಕಿದ್ದರು. ಆದರೆ ಅದು ಹಿಂದಿನ ಪೂರ್ವ ಪಾಕಿಸ್ತಾನದಲ್ಲಿ 1971ರಲ್ಲಿ. ಇಂಡೋ-ಪಾಕ್ ಯುದ್ಧವೇಳೆ ಆಗಿದ್ದು. ನೀವು ಹೇಳುವಂತೆ  ಮಾರ್ಚ್ 5, 1966 ರಂದು ಮಿಜೋರಾಂನಲ್ಲಿ ಅಲ್ಲ ಎಂದಿದ್ದಾರೆ.

ರಾಜೇಶ್ ಪೈಲಟ್ ಬಾಂಬ್ ಹಾಕಿದ್ದಾರೆ ಎಂದು ಬಗ್ಗೆ ಮಾಳವಿಯಾ ಟ್ವೀಟ್; ಫ್ಯಾಕ್ಟ್ ಚೆಕ್ ಮಾಡಿ ಪ್ರತಿಕ್ರಿಯಿಸಿದ ಸಚಿನ್ ಪೈಲಟ್
ಸಚಿನ್ ಪೈಲಟ್
ರಶ್ಮಿ ಕಲ್ಲಕಟ್ಟ
|

Updated on:Aug 16, 2023 | 2:33 PM

Share

ದೆಹಲಿ ಆಗಸ್ಟ್ 16: 1966ರ ಮಾರ್ಚ್‌ನಲ್ಲಿ ಮಿಜೋರಾಂನಲ್ಲಿ ರಾಜೇಶ್ ಪೈಲಟ್ ವಾಯುಪಡೆಯ ಪೈಲಟ್ ಆಗಿದ್ದಾಗ ಬಾಂಬ್‌ಗಳನ್ನು ಎಸೆದಿದ್ದಾರೆ. ಮಾರ್ಚ್ 5, 1966 ರಂದು ಮಿಜೋರಾಂನ ರಾಜಧಾನಿ ಐಜ್ವಾಲ್‌ನಲ್ಲಿ ಬಾಂಬ್ ದಾಳಿ ಮಾಡಿದ ಭಾರತೀಯ ವಾಯುಪಡೆಯ ವಿಮಾನಗಳನ್ನು ರಾಜೇಶ್ ಪೈಲಟ್ (Rajesh Pilot) ಮತ್ತು ಸುರೇಶ್ ಕಲ್ಮಾಡಿ ಹಾರಿಸುತ್ತಿದ್ದರು ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ (Amit Malviya) ಟ್ವೀಟ್ ಮಾಡಿದ್ದಾರೆ. ನಂತರ ಇಬ್ಬರೂ ಕಾಂಗ್ರೆಸ್ ಟಿಕೆಟ್‌ಗಳಲ್ಲಿ ಸಂಸದರು ಮತ್ತು ಸರ್ಕಾರದಲ್ಲಿ ಮಂತ್ರಿಗಳಾದರು. ಇಂದಿರಾ ಗಾಂಧಿ ಅವರು ರಾಜಕೀಯದಲ್ಲಿ ಸ್ಥಾನವನ್ನು ಪ್ರತಿಫಲವಾಗಿ ನೀಡಿದರು, ಈಶಾನ್ಯದಲ್ಲಿ ತಮ್ಮದೇ ಜನರ ಮೇಲೆ ವಾಯುದಾಳಿ ನಡೆಸಿದವರಿಗೆ ಗೌರವ ನೀಡಿದರು ಎಂಬುದು ಸ್ಪಷ್ಟವಾಗಿದೆ ಎಂದು ಮಾಳವಿಯಾ ಟ್ವೀಟ್ ಮಾಡಿದ್ದಾರೆ.

ತನ್ನ ಅಪ್ಪನ ಬಗ್ಗೆ ಆರೋಪ ಹೊರಿಸಿದ ಮಾಳವಿಯಾ ಅವರಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಸಚಿನ್ ಪೈಲಟ್ (Sachin Pilot), ಅಮಿತ್ ಮಾಳವಿಯಾ ಅವರೇ, ನೀವು ತಪ್ಪು ದಿನಾಂಕ ಮತ್ತು ಸತ್ಯವಲ್ಲದ್ದನ್ನು ಹೇಳುತ್ತಿದ್ದೀರಿ.ಹೌದು, ಭಾರತೀಯ ವಾಯುಪಡೆಯ ಪೈಲಟ್ ಆಗಿ, ನನ್ನ ತಂದೆ ಬಾಂಬ್‌ಗಳನ್ನು ಹಾಕಿದ್ದರು. ಆದರೆ ಅದು ಹಿಂದಿನ ಪೂರ್ವ ಪಾಕಿಸ್ತಾನದಲ್ಲಿ 1971ರಲ್ಲಿ. ಇಂಡೋ-ಪಾಕ್ ಯುದ್ಧವೇಳೆ ಆಗಿದ್ದು. ನೀವು ಹೇಳುವಂತೆ  ಮಾರ್ಚ್ 5, 1966 ರಂದು ಮಿಜೋರಾಂನಲ್ಲಿ ಅಲ್ಲ. ಅವರು 29 ಅಕ್ಟೋಬರ್ 1966ರಲ್ಲಿ IAF ಗೆ ನೇಮಕಗೊಂಡರು! (ಪ್ರಮಾಣಪತ್ರ ಲಗತ್ತಿಸಲಾಗಿದೆ). ಜೈ ಹಿಂದ್ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದಿದ್ದಾರೆ.

1966 ರಲ್ಲಿ ಮಿಜೋರಾಂನಲ್ಲಿ ಭಾರತೀಯ ವಾಯುಸೇನೆಯನ್ನು ಬಳಸಿಕೊಳ್ಳುವ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ನಿರ್ಧಾರವನ್ನು ಟೀಕಿಸಿದ್ದಕ್ಕಾಗಿ ಕಾಂಗ್ರೆಸ್ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿತ್ತು. ತಮ್ಮ ಹಿರೀಕರು ತಪ್ಪಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿ, ಬಿಜೆಪಿ ಸುಮ್ಮನೆ ಚರ್ಚೆ ಮಾಡುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.

ಇದನ್ನೂ ಓದಿ: ಏನಿದು ಸಂಸದೀಯ ಸಮಿತಿ? ಅವುಗಳ ಪಾತ್ರವೇನು?

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, 1962 ರಲ್ಲಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರು “ಮಿಜೋರಾಂನಲ್ಲಿ ಜನರ ಮೇಲೆ ದಾಳಿ ಮಾಡಲು” ರೇಡಿಯೊ ಮೂಲಕ ವಾಯುಪಡೆಗೆ ಆದೇಶಿಸಿದ್ದರು ಎಂದು ಮೋದಿ ಹೇಳಿದ್ದು, ಈಶಾನ್ಯ ಭಾಗವು ಚೀನಾದ ಆಕ್ರಮಣದ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೆಣಗಾಡಿದ್ದು ಕಾಂಗ್ರೆಸ್‌ ಅವರನ್ನು ನಿರ್ಲಕ್ಷಿಸಿತ್ತು ಎಂದು ಆರೋಪಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:31 pm, Wed, 16 August 23

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ