TTD: ತಿರುಪತಿ ತಿರುಮಲ ಬೆಟ್ಟದಲ್ಲಿ ಕಾಡು ಪ್ರಾಣಿಗಳ ಸಂಚಾರ ಹೆಚ್ಚಳ; ಭಕ್ತರ ಸುರಕ್ಷತೆಗೆ ಟಿಟಿಡಿಯಿಂದ ಡ್ರೋನ್ ಬಳಕೆ
Tirumala Tirupati: ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುವ ವಾಕಿಂಗ್ ಪಾತ್ ನಲ್ಲಿ ಬರುವ ವನ್ಯ ಪ್ರಾಣಿಗಳಿಗೆ ಭಕ್ತರು ತಿನ್ನಲು ಏನನ್ನೂ ನೀಡಬಾರದು, ಹಾಗೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಫುಟ್ ಪಾತ್ ಮೇಲೆ ಅಂಗಡಿ ಇಟ್ಟಿರುವವರು ತ್ಯಾಜ್ಯವನ್ನು ಹೊರಗೆ ಎಸೆದರೆ ಕ್ರಮ ಕೈಗೊಳ್ಳಲಾಗುವುದು. ಭಕ್ತರ ಸುರಕ್ಷತೆಗಾಗಿ ಡ್ರೋನ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ. ಸುರಕ್ಷತೆ ಬಗ್ಗೆ ಭಕ್ತರಿಗೆ ಅರಿವು ಮೂಡಿಸಲಾಗುವುದು. ಅಲಿಪಿರಿ, ಗಾಳಿಗೋಪುರ ಹಾಗೂ 7ನೇ ಮೈಲುಗಲ್ಲುಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗುವುದು ಎಂದು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ತಿಳಿಸಿದ್ದಾರೆ.
ತಿರುಪತಿ ತಿರುಮಲ ಬೆಟ್ಟದಲ್ಲಿ (Tirumala Tirupati) ಕಾಡು ಪ್ರಾಣಿಗಳ (Wild Animals) ಸಂಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದನ್ನು ಹಿಡಿದಿದ್ದೇವೆ ಎಂದು ಹೇಳುತ್ತಿರುವಾಗಲೇ ಇನ್ನೊಂದು ಕಾಡುಪ್ರಾಣಿ ನಾನಿದ್ದೇನೆ ಎಂದು ಹೂಂಕರಿಸುತ್ತಿದೆ. ಇದು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ -ಟಿಟಿಡಿಯನ್ನು ಚಿಂತೆಗೀಡುಮಾಡಿದೆ, ಎಚ್ಚರಿಸಿದೆ. ಹಾಗಾಗಿ ಕ್ಷಿಪ್ರವಾಗಿ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಟಿಟಿಡಿ, ಬೆಟ್ಟದ ಮೇಲಿನ ಮೆಟ್ಟಿಲುಗಳು ಮತ್ತು ಘಟ್ಟ ಪ್ರದೇಶದ ಮಾರ್ಗಗಳಲ್ಲಿ ಭಕ್ತರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ತಿರುಮಲದಲ್ಲಿ ಭಕ್ತಾದಿಗಳ ( pilgrims ) ಸುರಕ್ಷತೆ ಮತ್ತು ಕಾಡು ಪ್ರಾಣಿಗಳ ಓಡಾಟದ ಬಗ್ಗೆ ಆತಂಕದ ಹಿನ್ನೆಲೆಯಲ್ಲಿ ಟಿಟಿಡಿ ಉನ್ನತ ಮಟ್ಟದ ಸಭೆ ನಡೆಸಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಭಕ್ತರ ರಕ್ಷಣೆಯೇ ತಮಗೆ ಮುಖ್ಯವಾಗಿದ್ದು, ಇದಕ್ಕಾಗಿ ಎಲ್ಲ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಟಿಟಿಡಿ (TTD) ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ತಿಳಿಸಿದ್ದಾರೆ. ಅಲಿಪಿರಿಯಲ್ಲಿ ಬೆಳಿಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರವೇ ಭಕ್ತರ ಸಂಚಾರಕ್ಕೆ ಅನುಮತಿ ನೀಡಲಾಗುವುದು. ಮತ್ತು ಮಧ್ಯಾಹ್ನ 2 ರ ನಂತರ ಅನುಮತಿ ಇಲ್ಲ. ವಯಸ್ಕರರಿಗೆ ರಾತ್ರಿ 10 ಗಂಟೆಯವರೆಗೆ ಕಾಲ್ನಡಿಗೆಯಲ್ಲಿ ಅನುಮತಿ ನೀಡಲಾಗಿದೆ. ಘಟ್ಟ ಪ್ರದೇಶದಲ್ಲಿ ಸಂಜೆ ಆರು ಗಂಟೆಯವರೆಗೆ ಮಾತ್ರ ದ್ವಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ಸುರಕ್ಷತೆಗಾಗಿ ಪರಿಣಿತ ಅರಣ್ಯ ಸಿಬ್ಬಂದಿಯನ್ನು ಭದ್ರತೆಗೆ ನೇಮಿಸಲಾಗುವುದು.
ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುವ ವಾಕಿಂಗ್ ಪಾತ್ ನಲ್ಲಿ ಬರುವ ವನ್ಯ ಪ್ರಾಣಿಗಳಿಗೆ ಭಕ್ತರು ತಿನ್ನಲು ಏನನ್ನೂ ನೀಡಬಾರದು, ಹಾಗೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಫುಟ್ ಪಾತ್ ಮೇಲೆ ಅಂಗಡಿ ಇಟ್ಟಿರುವವರು ತ್ಯಾಜ್ಯವನ್ನು ಹೊರಗೆ ಎಸೆದರೆ ಕ್ರಮ ಕೈಗೊಳ್ಳಲಾಗುವುದು ಎಂದೂ ಕಟ್ಟುನಿಟ್ಟಾಗಿ ಎಚ್ಚರಿಸಿದ್ದಾರೆ. ಭಕ್ತರ ಸುರಕ್ಷತೆಗಾಗಿ ಡ್ರೋನ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ ಎಂದು ಕರುಣಾಕರ ರೆಡ್ಡಿ ಹೇಳಿದರು. ಸುರಕ್ಷತೆ ಬಗ್ಗೆ ಭಕ್ತರಿಗೆ ಅರಿವು ಮೂಡಿಸಲಾಗುವುದು. ಅಲಿಪಿರಿ, ಗಾಳಿಗೋಪುರ ಹಾಗೂ 7ನೇ ಮೈಲುಗಲ್ಲುಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗುವುದು ಎಂದರು. ಕಾಲ್ನಡಿಗೆಯಲ್ಲಿ ಹೋಗುವ ಪ್ರತಿಯೊಬ್ಬ ಭಕ್ತರಿಗೂ ಕೋಲು ನೀಡಲಾಗುವುದು.
Also Read: ತಿಮ್ಮಪ್ಪನ ಆಶೀರ್ವಾದ! ತಿರುಮಲದಲ್ಲಿ ಎಲ್ಲಾ ಉದ್ಯೋಗಿಗಳಿಗೆ 310 ಎಕರೆಯಲ್ಲಿ ಸೈಟ್ ಮಂಜೂರು
ತಿರುಪತಿ ಮತ್ತು ತಿರುಮಲ ನಡುವೆ 500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಭಕ್ತರು ಗುಂಪು ಗುಂಪಾಗಿ ತೆರಳುವಂತೆ ಸೂಚಿಸಲಾಗಿದೆ. ವಾಕಿಂಗ್ ಮಾರ್ಗದಲ್ಲಿ ಬೇಸ್ ಕ್ಯಾಂಪ್ ನಲ್ಲಿ ಮತ್ತು ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಲಾಗುವುದು. ಮೆಟ್ಟಿಲುಗಳಲ್ಲಿ ಫೋಕಸ್ ಲೈಟ್‌ಗಳನ್ನು ಅಳವಡಿಸಲಾಗುವುದು. ಬೇಲಿ ಹಾಕುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ಇದಕ್ಕೆ ಟಿಟಿಡಿ ಸಿದ್ಧವಿದೆ, ಆದರೆ ಅರಣ್ಯ ಇಲಾಖೆ ನಿರ್ಧಾರ ತೆಗೆದುಕೊಳ್ಳಬೇಕು. ಅರಣ್ಯ ಇಲಾಖೆಯ ನಿಯಮಗಳು ಕಟ್ಟುನಿಟ್ಟಾಗಿರುತ್ತದೆ ಎಂದು ನೆನಪಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ