AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರಾತನ ಚೌಕಾಬಾರಾ ಆಟದಲ್ಲಿ ಘರ್ಷಣೆ – ಸ್ನೇಹಿತನ ಕೊಂದ ಸಹ ಆಟಗಾರ!

ವಿಶಾಖಪಟ್ಟಣದಲ್ಲಿ ಚೌಕಾಬಾರಾ ಆಡುವ ಸಂದರ್ಭದಲ್ಲಿ ನಾಲ್ವರು ಸ್ನೇಹಿತರ ನಡುವೆ ಆರಂಭವಾದ ಜಗಳ ಒಬ್ಬರನ್ನು ಉಸಿರುಗಟ್ಟಿಸಿ, ಸಾಯಿಸುವಂತೆ ಮಾಡಿದೆ. ಆಟ ಆರಂಭವಾಗುತ್ತಿದ್ದಂತೆ ಇಬ್ಬರ ನಡುವೆ ಜಗಳ ನಡೆದಿದೆ. ಗುಡುಗು ಸಿಡಿಲುಳಂತೆ ಪರಸ್ಪರ ಘರ್ಜಿಸಿದ್ದಾರೆ, ಗುದ್ದಾಡಿಕೊಂಡಿದ್ದಾರೆ. ಗುದ್ದಾಡುವಾಗ ಹಿಂದಕ್ಕೆ ಬಿದ್ದ ವ್ಯಕ್ತಿ ಸಿಮೆಂಟ್ ಗೋಡೆಗೆ ತಲೆ ತಾಕಿಸಿಕೊಂಡಿದ್ದರಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಮದ್ದಿಲಪಾಲೆಂ ಪೀಠಾಪುರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ವಿವರ ಹೀಗಿದೆ.

ಪುರಾತನ ಚೌಕಾಬಾರಾ ಆಟದಲ್ಲಿ ಘರ್ಷಣೆ - ಸ್ನೇಹಿತನ ಕೊಂದ ಸಹ ಆಟಗಾರ!
ಪುರಾತನ ಚೌಕಾಬಾರಾ ಆಟದಲ್ಲಿ ಘರ್ಷಣೆ - ಸ್ನೇಹಿತನ ಕೊಂದ ಸಹ ಆಟಗಾರ!
ಸಾಧು ಶ್ರೀನಾಥ್​
|

Updated on: Aug 16, 2023 | 1:00 PM

Share

ಚೌಕಾಬಾರಾ (chowka bara game) ಎಂಬುದು ಅತ್ಯಂತ ಪುರಾತನ ಆಟ, ಅದು ಯಾವಾಗ ಶುರುವಾಯಿತು ಎಂಬುದು ನಿಖರವಾಗಿ ತಿಳಿಯದು. ಆದರೆ ಈ ಆಟ ಇಂದಿಗೂ ಆಟ ಆಡುವುವವರಿಂದ ಹಿಡಿದು, ಆಟ ನೋಡುವವರಲ್ಲೂ ಒಂದು ರೀತಿಯ ಹವಾ ಎಬ್ಬಿಸುತ್ತದೆ. ಆದರೆ ಅದು ಘರ್ಷಣೆಯ (Clash) ಮಟ್ಟಕ್ಕೆ ಹೋಗುತ್ತದೆ, ಅದರಲ್ಲೂ ಸಹ ಆಟಗಾರನನ್ನೇ ಕೊಲ್ಲುವ ಮಟ್ಟಕ್ಕೆ (Murder) ಹೋಗುತ್ತದೆ ಎಂಬುದು ವಿಪರ್ಯಾಸವೇ ಸರಿ. ವಿಶಾಖಪಟ್ಟಣದಲ್ಲಿ (Visakhapatnam, Andhra Pradesh) ಚೌಕಾಬಾರಾ ಆಡುವ ಸಂದರ್ಭದಲ್ಲಿ ನಾಲ್ವರು ಸ್ನೇಹಿತರ ನಡುವೆ ಆರಂಭವಾದ ಜಗಳ ಒಬ್ಬರನ್ನು ಉಸಿರುಗಟ್ಟಿಸಿ, ಸಾಯಿಸುವಂತೆ ಮಾಡಿದೆ. ಆಟ ಆರಂಭವಾಗುತ್ತಿದ್ದಂತೆ ಇಬ್ಬರ ನಡುವೆ ಜಗಳ ನಡೆದಿದೆ. ಗುಡುಗು ಸಿಡಿಲುಳಂತೆ ಪರಸ್ಪರ ಘರ್ಜಿಸಿದ್ದಾರೆ, ಗುದ್ದಾಡಿಕೊಂಡಿದ್ದಾರೆ. ಗುದ್ದಾಡುವಾಗ ಹಿಂದಕ್ಕೆ ಬಿದ್ದ ವ್ಯಕ್ತಿ ಸಿಮೆಂಟ್ ಗೋಡೆಗೆ ತಲೆ ತಾಕಿಸಿಕೊಂಡಿದ್ದರಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಮದ್ದಿಲಪಾಲೆಂ ಪೀಠಾಪುರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ವಿವರ ಹೀಗಿದೆ. ಪೀಠಾಪುರ ಕಾಲೋನಿ ಗವರಿವೀದಿಯ ಪೇಂಟರ್ ನಾರಾಯಣ ರಾವ್.. ಮದ್ದಿಲಪಾಲೆನಿಯ ರಾಮಬಾಬು ಮತ್ತು ರಮಣ ದಾಸು ಒಳ್ಳೆಯ ಸ್ನೇಹಿತರು. ಪೇಂಟಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಾಲ್ವರೂ ಸೇರಿ ಮದ್ದಿಲಪಾಲೆಂ ಬಜಾರ್ ಬಳಿಯ ಸುಲಭ್​​ ಕಾಂಪ್ಲೆಕ್ಸ್ ತಲುಪಿದ್ದಾರೆ. ಅಲ್ಲಿ ಚೌಕಾಬಾರಾ ಆಟ ಆಡತೊಡಗಿದ್ದಾರೆ.

ಸ್ವಲ್ಪ ಸಮಯದ ನಂತರ ನಾರಾಯಣ ರಾವ್ ರಾಂಬಾಬು ಎಂಬ ನಾಲ್ವರ ನಡುವೆ ಜಗಳ ಶುರುವಾಯಿತು. ಇದರೊಂದಿಗೆ ನಾರಾಯಣರಾವ್ ಚೌಕಾಬಾರಾದಲ್ಲಿ ಉಪಯೋಗಿಸುವ ಕಾಯಿಗಳನ್ನು ಆ ಕಡೆ ಈ ಕಡೆಗೆ ತಳ್ಳಿದ್ದಾನೆ. ಇದರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಾಮಬಾಬು, ನಾರಾಯಣ ರಾವ್ ಮೇಲೆ ಹಲ್ಲೆ ನಡೆಸಿದ್ದಾರೆ. ಜತೆಗೆ ಬಲವಾಗಿ ಹಿಂದಕ್ಕೆ ತಳ್ಳಿದ್ದರಿಂದ ನಾರಾಯಣ ರಾವ್ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಆತನ ತಲೆ ಅಲ್ಲಿನ ಸಿಮೆಂಟ್ ಕಟ್ಟೆಗೆ ಬಡಿದಿದೆ. ಕುಸಿದು ಬಿದ್ದು ನಾರಾಯಣ ರಾವ್ ಪ್ರಾಣ ಕಳೆದುಕೊಂಡಿದ್ದಾನೆ. ಸ್ಥಳಕ್ಕೆ ಧಾವಿಸಿದ ಎಂವಿಪಿ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆದರೆ, ಈ ನಾಲ್ವರು ಮದ್ಯದ ಅಮಲಿನಲ್ಲಿದ್ದರು. ಪೀಠಾಪುರ ಕಾಲೋನಿ ಬಜಾರ್‌ನಲ್ಲಿರುವ ಸುಲಭ್ ಕಾಂಪ್ಲೆಕ್ಸ್‌ಗೆ ಆಗಮಿಸಿದರು. ಅಲ್ಲಿ ಆಟ ಶುರುವಾಯಿತು. ಅಲ್ಲಿದ್ದ ಕೇರ್ ಟೇಕರ್ ರಾಮಕೃಷ್ಣ ನಾಲ್ವರನ್ನೂ ಹೊರಡಲು ಹೇಳಿದರು. ಆದರೆ ಅಲ್ಲಿಗೆ ಮತ್ತೆ ಬಂದಿದ್ದಾರೆ. ಆಗಲೂ ರಾಮಕೃಷ್ಣನ ಮೇಲೆ ತಿರುಗಿಬಿದ್ದಿದ್ದಾರೆ. ಒಂದು ಹಂತದಲ್ಲಿ ಆ ನಾಲ್ವರು ರಾಮಕೃಷ್ಣ ಮೇಲೆ ಹಲ್ಲೆಗೆ ಯತ್ನಿಸಿದರು.

ಚೌಕಾಬಾರಾ ಆಟವಾಡಲು ಶುರು ಮಾಡಿದಾಗ ಅಲ್ಲೇ ಇದ್ದ ಸುಲಭ್​​ ಕಾಂಪ್ಲೆಕ್ಸ್ ನ ಕೇರ್ ಟೇಕರ್ ರಾಮಕೃಷ್ಣ ಅವರನ್ನು ಪ್ರಶ್ನಿಸಿದರು. ಅದಕ್ಕೆ ಕಿವಿಗೊಡದೆ ಆಟ ಆರಂಭಿಸಿ ಜಗಳಕ್ಕಿಳಿದರು. ಆದರೆ.. ಅಲ್ಲಿಗೆ ಬರುವ ಮುನ್ನವೇ ಅವರ ನಡುವೆ ಜಗಳವಾಗಿತ್ತು ಎಂದು ಪ್ರತ್ಯಕ್ಷದರ್ಶಿ ರಾಮಕೃಷ್ಣ ಹೇಳುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ