AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಮ್ಮಪ್ಪನ ಆಶೀರ್ವಾದ! ತಿರುಮಲದಲ್ಲಿ ಎಲ್ಲಾ ಉದ್ಯೋಗಿಗಳಿಗೆ 310 ಎಕರೆಯಲ್ಲಿ ಸೈಟ್ ಮಂಜೂರು ಮಾಡುವುದಾಗಿ ಘೋಷಿಸಿದ TTD

TTD Employees: ವಡಮಾಲ ಪೇಟೆಯಲ್ಲಿ ನೌಕರರ ವಸತಿಗಾಗಿ ಮಂಜೂರಾದ 310 ಎಕರೆ ಜಮೀನು ಪರಿಶೀಲನೆಯನ್ನು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಅವರು ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಭೂಮನ ಮಾತನಾಡಿದರು. ಸೆಪ್ಟೆಂಬರ್ 18 ರಂದು ಮುಖ್ಯಮಂತ್ರಿ ಜಗನ್ ಅವರ ಕೈಯಿಂದ ಮನೆ ನಿವೇಶನ ವಿತರಣೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಅಗತ್ಯವಿದ್ದಲ್ಲಿ ಇನ್ನೂ 100 ಎಕರೆಯನ್ನು ಆಡಳಿತಾರೂಢ ಸರಕಾರದಿಂದ ಸಂಗ್ರಹಿಸಿ ಎಲ್ಲರಿಗೂ ಮನೆ ನಿವೇಶನ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.

ತಿಮ್ಮಪ್ಪನ ಆಶೀರ್ವಾದ! ತಿರುಮಲದಲ್ಲಿ ಎಲ್ಲಾ ಉದ್ಯೋಗಿಗಳಿಗೆ 310 ಎಕರೆಯಲ್ಲಿ ಸೈಟ್ ಮಂಜೂರು ಮಾಡುವುದಾಗಿ ಘೋಷಿಸಿದ TTD
TTD ಉದ್ಯೋಗಿಗಳಿಗೆ ತಿರುಮಲದಲ್ಲಿ 310 ಎಕರೆಯಲ್ಲಿ ಸೈಟ್ ಮಂಜೂರು
ಸಾಧು ಶ್ರೀನಾಥ್​
|

Updated on: Aug 16, 2023 | 11:38 AM

Share

ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ. ಎಲ್ಲಾ ಟಿಟಿಡಿ ನೌಕರರಿಗೆ ( TTD Employees) ಗೃಹ ನಿರ್ಮಾಣಕ್ಕಾಗಿ ನಿವೇಶನ ( Site) ನೀಡುವ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಮಂಗಳವಾರ ಟಿಟಿಡಿ ಪ್ರಧಾನ ಕಾರ್ಯನಿರ್ವಹಣಾಧಿಕಾರಿ ಎ.ವಿ. ಧರ್ಮಾ ರೆಡ್ಡಿ, ಜೆಇಒ ಸದಾ ಭಾರ್ಗವಿ ಹಾಗೂ ಸಂಘದ ಮುಖಂಡರೊಂದಿಗೆ ವಡಮಾಲ ಪೇಟೆಯಲ್ಲಿ (Vadamalapeta near chennai highway) ನೌಕರರ ವಸತಿಗಾಗಿ ಮಂಜೂರಾದ 310 ಎಕರೆ ಜಮೀನು ಪರಿಶೀಲನೆಯನ್ನು ಅವರು ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಭೂಮನ ಮಾತನಾಡಿದರು. ಸೆಪ್ಟೆಂಬರ್ 18 ರಂದು ಮುಖ್ಯಮಂತ್ರಿ ಜಗನ್ ಅವರ ಕೈಯಿಂದ ಮನೆ ನಿವೇಶನ ವಿತರಣೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಅಗತ್ಯವಿದ್ದಲ್ಲಿ ಇನ್ನೂ 100 ಎಕರೆಯನ್ನು ಆಡಳಿತಾರೂಢ ಸರಕಾರದಿಂದ ಸಂಗ್ರಹಿಸಿ ಎಲ್ಲರಿಗೂ ಮನೆ ನಿವೇಶನ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು. ಅವರು ಮಾಡಿದ ಈ ಘೋಷಣೆಯಿಂದ ಟಿಟಿಡಿ ನೌಕರರು ಹರ್ಷ ವ್ಯಕ್ತಪಡಿಸಿದ್ದಾರೆ (Tirupati).

ದಿವಂಗತ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಅವಧಿಯಲ್ಲಿ ಅವರ ಪ್ರಯತ್ನದಿಂದ ನೌಕರರಿಗೆ ಮನೆ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದರು. ನಂತರದ ಬೆಳವಣಿಗೆಗಳಿಂದ ಹತ್ತು ವರ್ಷಗಳಿಂದ ಈ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿತ್ತು ಎಂದು ಹೇಳಿದರು. ಜಗನ್ ಮುಖ್ಯಮಂತ್ರಿ ಆಗಿರುವುದರಿಂದ ಎಲ್ಲ ನೌಕರರಿಗೂ ಮನೆ ನಿವೇಶನಗಳು ಸಿಗುತ್ತಿವೆ ಎಂಬುದನ್ನು ನೆನಪಿನಲ್ಲಿಡಬೇಕು ಎಂದರು.

ಇನ್ನೊಂದೆಡೆ 35 X 55 ಅಡಿ ಅಳೆತೆಯ ಮನೆ ನಿವೇಶನ ನೀಡಲಾಗುವುದು ಎಂದು ಧರ್ಮ ರೆಡ್ಡಿ ಪ್ರಕಟಿಸಿದರು. ಸುಮಾರು 7 ಸಾವಿರ ಉದ್ಯೋಗಿಗಳಿಗೆ ಇಲ್ಲಿ ಮನೆ ಸಿಗಲಿದೆ. ಇದರಿಂದ ದೊಡ್ಡ ಟೌನ್ ಶಿಪ್ ನಿರ್ಮಾಣವಾಗಲಿದೆ ಎಂದರು. ಚೆನ್ನೈ ಹೆದ್ದಾರಿಯ ಪಕ್ಕದಲ್ಲಿರುವ ಈ ಸ್ಥಳವು ಉತ್ತಮ ಮೌಲ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ. ಟಿಟಿಡಿ ಅಧ್ಯಕ್ಷರ ಆದೇಶದನ್ವಯ ಸೆ. 18ರೊಳಗೆ ಈ ಜಾಗವನ್ನು ಪ್ಲಾಟ್‌ಗಳಾಗಿ ವಿಂಗಡಿಸಿ ಡಾಂಬರೀಕರಣ ಮಾಡಿದ ರಸ್ತೆಗಳನ್ನು ಹಾಕಿಕೊಡಲು ಪ್ರಯತ್ನಿಸಲಾಗುವುದು ಎಂದರು.

Also read: Hair Donation: ಕೊರೊನಾ ನಂತರ ತಿರುಪತಿ ತಿಮ್ಮಪ್ಪನಿಗೆ ಭಕ್ತರಿಂದ ಹೆಚ್ಚು ಕೇಶ ಕಾಣಿಕೆ: TTD ಆದಾಯದ ಮೊತ್ತ ಎಷ್ಟು ಗೊತ್ತಾ?

ಇದೇ ವೇಳೆ ಭಾರತದ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವಿವಿಧ ಇಲಾಖೆಗಳ 30 ಅಧಿಕಾರಿಗಳು ಮತ್ತು 219 ನೌಕರರು ಮತ್ತು ಎಸ್‌ವಿಬಿಸಿಯ 7 ಉದ್ಯೋಗಿಗಳಿಗೆ ಟಿಟಿಡಿ ಅಧ್ಯಕ್ಷರು ಶ್ರೀವಾರಿ ಬೆಳ್ಳಿ ಡಾಲರ್ ಮತ್ತು ಪ್ರಶಂಸಾ ಪತ್ರವನ್ನು ನೀಡಿದರು.

ಅಲ್ಲದೆ, 12ನೆ ತರಗತಿಯಲ್ಲಿ ತೇರ್ಗಡೆಯಾದ 26 ವಿದ್ಯಾರ್ಥಿಗಳಿಗೆ ತಲಾ 2,116 ರೂ. ಹಾಗೂ 10ನೇ ತರಗತಿಯಲ್ಲಿ ಉತ್ತೀರ್ಣರಾದ 32 ವಿದ್ಯಾರ್ಥಿಗಳಿಗೆ ತಲಾ 1,116 ರೂ.ಗಳ ಬಹುಮಾನ ವಿತರಿಸಲಾಯಿತು. ಇನ್ನೊಂದು ವಿಷಯವೆಂದರೆ ಟಿಟಿಡಿ ಕಣ್ಗಾವಲು ಮತ್ತು ಭದ್ರತಾ ವಿಭಾಗ ಆಯೋಜಿಸಿದ್ದ ಜಾಗಿಲಗಳ ಪ್ರದರ್ಶನ ಆಕರ್ಷಣೆಯಾಗಿತ್ತು. ಅಲ್ಲದೆ ತಾತಯ್ಯ ಗುಂಟ ಗಂಗಮ್ಮ ದೇವಸ್ಥಾನದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಅಧ್ಯಕ್ಷರು ಪರಿಶೀಲಿಸಿದರು. ಕಾಮಗಾರಿ ವೇಗ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್