Hair Donation: ಕೊರೊನಾ ನಂತರ ತಿರುಪತಿ ತಿಮ್ಮಪ್ಪನಿಗೆ ಭಕ್ತರಿಂದ ಹೆಚ್ಚು ಕೇಶ ಕಾಣಿಕೆ: TTD ಆದಾಯದ ಮೊತ್ತ ಎಷ್ಟು ಗೊತ್ತಾ?

ಕೊರೊನಾ ನಂತರ ಶ್ರೀವಾರಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದರಿಂದ ಟಿಟಿಡಿಗೆ ಕೇಶ ಕಾಣಿಕೆಯಿಂದ ಆದಾಯ ವಿಪರೀತವಾಗಿ ಏರಿಕೆಯಾಗಿದೆ. ಇದರಿಂದಾಗಿ ತಲೆಗೂದಲು ಬಾಬತ್ತಿನಲ್ಲಿ ಆದಾಯ ಹೆಚ್ಚಿದ್ದು, ಈ ವರ್ಷ ಟಿಟಿಡಿ ಮತ್ತೊಂದು ದಾಖಲೆ ಬರೆಯಲು ಹೊರಟಿದೆ. ಅಂದಾಜಿನ ಪ್ರಕಾರ ಇದುವರೆಗೆ 120 ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ.

Hair Donation: ಕೊರೊನಾ ನಂತರ ತಿರುಪತಿ ತಿಮ್ಮಪ್ಪನಿಗೆ ಭಕ್ತರಿಂದ ಹೆಚ್ಚು ಕೇಶ ಕಾಣಿಕೆ: TTD ಆದಾಯದ ಮೊತ್ತ ಎಷ್ಟು ಗೊತ್ತಾ?
ತಿಮ್ಮಪ್ಪನಿಗೆ ಭಕ್ತರಿಂದ ಹೆಚ್ಚು ಕೇಶ ಕಾಣಿಕೆ
Follow us
ಸಾಧು ಶ್ರೀನಾಥ್​
|

Updated on: Aug 14, 2023 | 1:47 PM

ತಿರುಪತಿ, ಆಗಸ್ಟ್ 14: ಅಪಾರ ಭಕ್ತರ ಆರಾಧ್ಯದೈವ ಶ್ರೀ ವೆಂಕಟೇಶ್ವರ ಸ್ವಾಮಿಗೆ ತಲೆಗೂದಲನ್ನು ಅರ್ಪಿಸಿ ಮುಡಿ ಕೊಡುವುದು ಭಕ್ತರ ಆಶಯವಾಗಿದೆ. ತಿರುಮಲದ ಬೆಟ್ಟದ ಮೇಲೆ ತಿಮ್ಮಪ್ಪನ ಪಾದತಲದಲ್ಲಿ ತಮ್ಮ ಕೇಶ ಕಾಣಿಕೆ ಅರ್ಪಿಸಿ, ಶಿವನನ್ನು ದರ್ಶನ ಮಾಡುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿನಿತ್ಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಲ್ಲಿ ಕೇಶ ಕಾಣಿಕೆಯನ್ನು (Hair donation) ಅರ್ಪಿಸಿ ಪೂಜೆ ಸಲ್ಲಿಸುವುದರಿಂದ (Tirumala Tirupati Devasthanam-TTD) ಆದಾಯ ಹೆಚ್ಚುತ್ತಿದೆ. ತಿರುಮಲದಲ್ಲಿ ಕಲ್ಯಾಣಕಟ್ಟೆಯಲ್ಲಿ ಗೋವಿಂದನ ಪೂಜೆ ಸಲ್ಲಿಸಿ ಭಕ್ತರು ತಲೆಗೂದಲು ಕೊಡುವುದರಿಂದ ಟಿಟಿಡಿಯ ವಾರ್ಷಿಕ ಆದಾಯ ರೂ. 120 ಕೋಟಿ ರೂಪಾಯಿಗೂ ಅಧಿಕವಾಗಿದೆ. ಐದಾರು ವರ್ಷಗಳಿಂದ ಟಿಟಿಡಿ ಇದನ್ನು ಇನ್ನಷ್ಟು ಸುವ್ಯವಸ್ಥೆಗೊಳಿಸಿದೆ. ಇದರಿಂದಾಗಿ ತಲೆಗೂದಲು ಬಾಬತ್ತಿನಲ್ಲಿ ಆದಾಯ ಹೆಚ್ಚಿದ್ದು, ಈ ವರ್ಷ ಮತ್ತೊಂದು ದಾಖಲೆ ಬರೆಯಲು ಹೊರಟಿದೆ. ಟಿಟಿಡಿ ಅಂದಾಜಿನ ಪ್ರಕಾರ ಇದುವರೆಗೆ 120 ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ.

ಟಿಟಿಡಿ ಪ್ರತಿ ವರ್ಷ ನಾಲ್ಕು ಬಾರಿ ಈ ಹರಾಜು ಪ್ರಕ್ರಿಯೆಯನ್ನು ನಡೆಸುತ್ತದೆ ಮತ್ತು ತಲೆಗೂದಲನ್ನು ಆಯಾ ಶ್ರೇಣಿಗಳಾಗಿ ವಿಂಗಡಿಸಿ ಮಾರಾಟ ಪ್ರಕ್ರಿಯೆ ಆಯೋಜಿಸುತ್ತದೆ. ತಲೆಗೂದಲನ್ನು 5 ಗ್ರೇಡ್‌ಗಳಾಗಿ ವಿಂಗಡಿಸಿ ಹರಾಜು ಮಾಡುತ್ತಿರುವ ಟಿಟಿಡಿ, ಮೊದಲ ಮೂರು ಗ್ರೇಡ್‌ಗಳಲ್ಲಿ ಹೇರ್​ ಡೈ ಮತ್ತು ಕಪ್ಪು ಕೂದಲನ್ನು ಪ್ರತ್ಯೇಕಿಸಿ ಎರಡು ವಿಧಗಳಾಗಿ ವಿಂಗಡಿಸುತ್ತದೆ. ತಿರುಪತಿಯ ಟಿಟಿಡಿ ಮಾರ್ಕೆಟಿಂಗ್ ಗೋಡಾನ್‌ನಲ್ಲಿ ಟಿಟಿಡಿ ತಿರುಮಲದಿಂದ 1400 ಕೆಜಿ ತಲೆಗೂದಲನ್ನು ಸಂಗ್ರಹಿಸುತ್ತಿದೆ. ತಿರುಮಲದಲ್ಲಿರುವ ಟಿಟಿಡಿ ಕಲ್ಯಾಣ ಕಟ್ಟೆ ಅತಿಥಿ ಗೃಹದಲ್ಲಿ ತಲೆಗೂದಲನ್ನು ಸಂಗ್ರಹಿಸಿ, ಮಾರಾಟ ಮಾಡುವ ವ್ಯವಸ್ಥೆ ಮಾಡಿದ್ದು, ಟಿಟಿಡಿ ಹಲವಾರು ಮುನ್ನೆಚ್ಚರಿಕೆಗಳನ್ನು ಅನುಸರಿಸುತ್ತದೆ. ಭಕ್ತರು 1400 ಕೆ.ಜಿ ಕೂದಲನ್ನು ಕಾಣಿಗೆಯ ಅಂಗವಾಗಿ ಅರ್ಪಿಸುತ್ತಾರೆ. ಅದು ಒಣಗಿದ ನಂತರ ಒಂದು ಮೆಟ್ರಿಕ್ ಟನ್ ವರೆಗೆ TTD ಗೋದಾಮಿಗೆ ತಲುಪುತ್ತದೆ. ಕರೋನಾ ನಂತರ ಶ್ರೀವಾರಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದರಿಂದ ಟಿಟಿಡಿಗೆ ಕೇಶ ಕಾಣಿಕೆಯಿಂದ ಆದಾಯ ವಿಪರೀತವಾಗಿ ಏರಿಕೆಯಾಗಿದೆ.

Also Read: ತಿರುಪತಿ ದೇವಸ್ಥಾನದ ಬಳಿ 6 ವರ್ಷದ ಬಾಲಕಿಯನ್ನು ಕೊಂದಿದ್ದ ಚಿರತೆಯ ಸೆರೆ

ಕಳೆದ ಐದಾರು ವರ್ಷಗಳಿಂದ ಟಿಟಿಡಿಯ ವಾರ್ಷಿಕ ಆದಾಯ 120 ಕೋಟಿ ರೂ. ಗೂ ಅಧಿಕವಾಗಿದ್ದರೆ, 2022-23ನೇ ಹಣಕಾಸು ವರ್ಷದಲ್ಲಿ ಟಿಟಿಡಿಗೆ ಈಗಾಗಲೇ 120 ಕೋಟಿ ರೂ. ದಾಟಿದೆ. 2023-24ರ ಆರ್ಥಿಕ ವರ್ಷದಲ್ಲಿ ಟಿಟಿಡಿ ಇದುವರೆಗೆ ಎರಡು ಬಾರಿ ಈ ಹರಾಜನ್ನು ನಡೆಸಿದೆ. ಇದೇ ಸಾಲಿನಲ್ಲಿ ಇನ್ನೂ ಎರಡು ಬಾರಿ ಈ ಹರಾಜು ನಡೆಸಲು ಟಿಟಿಡಿ ಸಿದ್ಧತೆ ನಡೆಸಿದ್ದು, ಈ ಆರ್ಥಿಕ ವರ್ಷದಲ್ಲಿ ತಲೆಗೂದಲು ಬಾಬತ್ತಿನಲ್ಲಿ ಆದಾಯ ಇನ್ನೂ ಅಧಿಕವಾಗುವ ಅಂದಾಜಿದೆ ಎಂದು ಟಿಟಿಡಿ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
ನಿಜಾಮನ ರಜಾಕರು ಮುಸಲ್ಮಾನರಲ್ಲ ಅಂತ ಪ್ರಿಯಾಂಕ್ ಹೇಳುತ್ತಾರೆ: ಯತ್ನಾಳ್
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ