ರೋಗಿಯ ಮಿದುಳಲ್ಲಿದ್ದ ಬ್ಲ್ಯಾಕ್ ಫಂಗಸ್​ ಹೊರತೆಗೆದ ವೈದ್ಯರು; ಅದರ ಅಳತೆ ನೋಡಿ ಕಂಗಾಲು

| Updated By: Lakshmi Hegde

Updated on: Jun 13, 2021 | 9:17 AM

ರೋಗಿಯ ಹೆಸರು ಅನಿಲ್​ ಕುಮಾರ್​. ಜಮುಯಿಯ ನಿವಾಸಿಯಾಗಿದ್ದಾರೆ. ಇವರಿಗೆ ತಲೆ ಸುತ್ತುತ್ತಿತ್ತು.. ಹಾಗೂ ಪದೇಪದೆ ಎಚ್ಚರತಪ್ಪಿ ಬೀಳುತ್ತಿದ್ದರು. ದಿನದಿನಕ್ಕೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿತ್ತು.

ರೋಗಿಯ ಮಿದುಳಲ್ಲಿದ್ದ ಬ್ಲ್ಯಾಕ್ ಫಂಗಸ್​ ಹೊರತೆಗೆದ ವೈದ್ಯರು; ಅದರ ಅಳತೆ ನೋಡಿ ಕಂಗಾಲು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ದೇಶದಲ್ಲಿ ಕೊವಿಡ್ 2ನೇ ಅಲೆಯ ಅಬ್ಬರವಿನ್ನೂ ಕಡಿಮೆಯಾಗಿಲ್ಲ. ಆದರೆ ಈ ಬಾರಿ ಕೊರೊನಾದೊಟ್ಟಿಗೆ ಬ್ಲ್ಯಾಕ್​ಫಂಗಸ್ (ಕಪ್ಪುಶಿಲೀಂದ್ರ) ಕಾಟವೂ ಶುರುವಾಗಿದೆ. ದೇಶದ ಎಲ್ಲ ಭಾಗಗಳಲ್ಲೂ ಕೊರೊನಾದಿಂದ ಗುಣಮುಖರಾದ ಕೆಲವರು ಈ ಬ್ಲ್ಯಾಕ್​ ಫಂಗಸ್​​ಗೆ ಒಳಗಾಗುತ್ತಿದ್ದಾರೆ. ಅದರಲ್ಲೀಗ ಪಾಟ್ನಾದ ಇಂದಿರಾ ಗಾಂಧಿ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ (ಐಜಿಐಎಂಎಸ್​) ನ ವೈದ್ಯರು 60 ವರ್ಷದ ವ್ಯಕ್ತಿಯ ಮಿದುಳಿನಿಂದ ಕ್ರಿಕೆಟ್ ಚೆಂಡಿನ ಅಳತೆಯ ಬ್ಲ್ಯಾಕ್​ ಫಂಗಸ್​​​ ನ್ನು ಹೊರತೆಗೆದಿದ್ದಾರೆ.

ಕಪ್ಪುಶಿಲೀಂದ್ರದ  ಅಳತೆಯನ್ನು ನೋಡಿ ವೈದ್ಯರೇ ಶಾಕ್​ ಆಗಿದ್ದಾರೆ. ಸುಮಾರು 3 ತಾಸುಗಳ ಸರ್ಜರಿಯ ಬಳಿಕ ಈ ಗಡ್ಡೆ ಹೊರತೆಗೆಯಲಾಗಿದೆ. ಸದ್ಯ ರೋಗಿಯ ಸ್ಥಿತಿ ಸ್ಥಿರವಾಗಿದೆ. ಬಿಹಾರದ ಈ ಆಸ್ಪತ್ರೆಯಲ್ಲಿ ಹಲವರಿಗೆ ಬ್ಲ್ಯಾಕ್​ಫಂಗಸ್​​​ಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಆದರೆ ಇದು ಮಾತ್ರ ತುಂಬ ಸವಾಲಿನಿಂದ ಕೂಡಿತ್ತು. ಮಿದುಳಿಗೆ ಹರಡಿದ್ದರಿಂದ ಸರ್ಜರಿ ಸಮಯದಲ್ಲಿ ರೋಗಿಯು ಕಣ್ಣು ಕಳೆದುಕೊಳ್ಳುವಂತೆ ನೋಡಿಕೊಳ್ಳುವುದು ಸಾಹಸವಾಗಿತ್ತು ಎಂದು ಇಲ್ಲಿನ ವೈದ್ಯರು ಹೇಳಿದ್ದಾರೆ.

ಈ ರೋಗಿಯ ಹೆಸರು ಅನಿಲ್​ ಕುಮಾರ್​. ಜಮುಯಿಯ ನಿವಾಸಿಯಾಗಿದ್ದಾರೆ. ಇವರಿಗೆ ತಲೆ ಸುತ್ತುತ್ತಿತ್ತು.. ಹಾಗೂ ಪದೇಪದೆ ಎಚ್ಚರತಪ್ಪಿ ಬೀಳುತ್ತಿದ್ದರು. ದಿನದಿನಕ್ಕೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿತ್ತು. ಮಿದುಳಿನಲ್ಲಿದ್ದ ಬ್ಲ್ಯಾಕ್​ ಫಂಗಸ್​ ಗಡ್ಡೆಯನ್ನು ಡಾ. ಬ್ರಜೇಶ್​ ಕುಮಾರ್​ ಮತ್ತು ಅವರ ತಂಡ ಯಶಸ್ವಿಯಾಗಿ ತೆಗೆದುಹಾಕಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮನೀಶ್​ ಮಂಡಲ್​ ತಿಳಿಸಿದ್ದಾರೆ.

ಇದನ್ನೂ ಓದಿ: karnataka unlock 60 ದಿನಗಳ ಲಾಕ್​ಡೌನ್ ಗ್ರಹಣಕ್ಕೆ ನಾಳೆಯಿಂದ ಅರ್ಧ ಮುಕ್ತಿ.. ಆದರೆ ಷರತ್ತುಗಳು ಅನ್ವಯ

Doctors Remove Cricket Ball Sized Black Fungus From Brain of 60 Year Old Man In Bihar