karnataka unlock 60 ದಿನಗಳ ಲಾಕ್​ಡೌನ್ ಗ್ರಹಣಕ್ಕೆ ನಾಳೆಯಿಂದ ಅರ್ಧ ಮುಕ್ತಿ.. ಆದರೆ ಷರತ್ತುಗಳು ಅನ್ವಯ

TV9kannada Web Team

TV9kannada Web Team | Edited By: Ayesha Banu

Updated on: Jun 13, 2021 | 8:48 AM

ಇವತ್ತೊಂದೇ ದಿನ ಬಾಕಿ. ನಾಳೆ ಬೆಳಗಾಗ್ತಿದ್ದಂತೆ ಅಂದ್ರೆ ಸೋಮವಾರದಿಂದ ಬೆಂಗಳೂರು ಅನ್‌ಲಾಕ್ ಆಗಲಿದೆ. ಜೂನ್‌ 14ರಿಂದ ಲಾಕ್‌ ಓಪನ್ ಆಗಲಿದೆ. ಬೆಳಗ್ಗೆಿಯಿಂದ ಸಂಜೆ 7 ಗಂಟೆವರೆಗೆ ಓಪನ್ ಆಗಲಿದೆ. ಬಳಿಕ ರಾತ್ರಿ 7ರಿಂದ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್‌ ಕರ್ಫ್ಯೂ ಜಾರಿಯಾಗುತ್ತೆ.

karnataka unlock 60 ದಿನಗಳ ಲಾಕ್​ಡೌನ್ ಗ್ರಹಣಕ್ಕೆ ನಾಳೆಯಿಂದ ಅರ್ಧ ಮುಕ್ತಿ.. ಆದರೆ ಷರತ್ತುಗಳು ಅನ್ವಯ
ಬೆಂಗಳೂರು

ಬೆಂಗಳೂರು: ಇನ್ನು ಒಂದೇ ಒಂದು ದಿನ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ರಾಜ್ಯದ ಕಂಪ್ಲೀಟ್ ಚಿತ್ರಣ ಬದಲಾಗಲಿದೆ. ರಾಜಧಾನಿ ಬೆಂಗಳೂರು ಹಾಗೂ ಜಿಲ್ಲೆಗಳಿಗೆ ಕಳೆದೆರಡು ತಿಂಗಳಿಂದ ಹಿಡಿದಿರೋ ಲಾಕ್ಡೌನ್ ಗ್ರಹಣಕ್ಕೆ ನಾಳೆ ಸೂರ್ಯೋದಯದೊಂದಿಗೆ ಮುಕ್ತಿ ಸಿಗಲಿದೆ. ನಾಳೆಯಿಂದ ರಾಜ್ಯದ 19 ಜಿಲ್ಲೆಗಳಲ್ಲಿ ಹಾಫ್ ಅನ್ಲಾಕ್ ಜಾರಿಗೆ ಬರಲಿದೆ. 60 ದಿನಗಳ ಮನೆವಾಸದಿಂದ ಕಂಗೆಟ್ಟಿರೋ ಜನ್ರಿಗೆ ಅರ್ಧ ರಿಲೀಫ್ ಸಿಗಲಿದೆ.

ನಾಳೆಯಿಂದ ಕೆಲ ಜಿಲ್ಲೆಗಳಿಗೆ ಲಾಕ್ಡೌನ್ನಿಂದ ಮುಕ್ತಿ ಕೊರೊನಾ ಕಡಿಮೆ ಮಾಡಲು ಕಳೆದೆರಡು ತಿಂಗಳಿಂದ ಜಾರಿಮಾಡಲಾಗಿರೋ ಲಾಕ್ಡೌನ್ಗೆ ನಾಳೆಯಿಂದ ಮೊದಲ ಹಂತದ ರಿಲೀಫ್ ಸಿಗಲಿದೆ. ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗಿರೋ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ 19 ಜಿಲ್ಲೆಗಳಲ್ಲಿ ಹಾಫ್ ಅನ್ಲಾಕ್ಗೆ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ರು. ಇದರನ್ವಯ ನಾಳೆ ಬೆಳಗ್ಗೆ 6 ಗಂಟೆಯಿಂದ ಅನ್ಲಾಕ್ ಜಿಲ್ಲೆಗಳಲ್ಲಿ ಹೊಸ ರೂಲ್ಸ್ ಜಾರಿಗೆ ಬರಲಿದೆ. ಖರೀದಿ ಸಮಯ ವಿಸ್ತರಣೆ, ಕೆಲ ಕ್ಷೇತ್ರಗಳಿಗೆ ಅನುಮತಿ ಸೇರಿದಂತೆ ಹಲವು ಬದಲಾವಣೆಗಳೊಂದಿಗೆ ನಾಳೆಯಿಂದ ಅನ್ಲಾಕ್ ಜಾರಿಗೆ ಬರಲಿದೆ.

ಇನ್ನು ರಾಜ್ಯ ಸರ್ಕಾರ ಘೋಷಿಸಿರೋ ಅನ್ಲಾಕ್ ನಿಯಮಗಳು ಏನೇನು ಅನ್ನೋದನ್ನ ನೋಡೋದಾದ್ರೆ. ಅನ್ಲಾಕ್ ರೂಲ್ಸ್ ರಾಜ್ಯದ19 ಜಿಲ್ಲೆಗಳಲ್ಲಿ ಅನ್ಲಾಕ್ ಘೋಷಣೆ ಮಾಡಲಾಗಿದ್ದು, ಜೂನ್ 21ರವರೆಗೂ ಅರ್ಧ ದಿನ ಲಾಕ್ ರಿಲೀಫ್ ಸಿಗಲಿದೆ. ಹೀಗಾಗಿ ಅಗತ್ಯ ವಸ್ತುಗಳ ಖರೀದಿ ಸಮಯ ವಿಸ್ತರಣೆ ಮಾಡಲಾಗಿದೆ. ಅಗತ್ಯ ವಸ್ತು ಖರೀದಿಗೆ ಮಧ್ಯಾಹ್ನದವರೆಗೆ ಅವಕಾಶ ನೀಡಲಾಗಿದೆ. ಅಂದ್ರೆ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅನುಮತಿ ಕೊಡಲಾಗಿದೆ. ಈ ಮೊದಲು ಬೆಳಗ್ಗೆ 6ರಿಂದ 10ರವರೆಗೆ 4 ಗಂಟೆ ಮಾತ್ರ ಖರೀದಿಗೆ ಅನುಮತಿ ಇತ್ತು. ಈಗ ಮಧ್ಯಾಹ್ನದವರೆಗೂ ಅವಕಾಶ ನೀಡಿದ ಹಿನ್ನೆಲೆ 8 ಗಂಟೆಗಳ ಕಾಲ ಖರೀದಿಗೆ ಅವಕಾಶ ಕೊಟ್ಟಂತಾಗಿದೆ.

ಅನ್ಲಾಕ್ ಆದ್ರೂ ಟಫ್ ರೂಲ್ಸ್ ಇರುತ್ತೆ ಹುಷಾರ್ ಇನ್ನು ಅನ್ಲಾಕ್ ಮಾಡಲಾಗಿದೆ, ನಾಳೆಯಿಂದ ಬಿಂದಾಸ್ ಆಗಿ ಓಡಾಡಬಹುದು, ಮನೆಯಲ್ಲಿ ಕೂತು ಬೋರಾಗಿದೆ ಒಂದ್ ರೌಂಡ್ ಹೊಡೆದು ಬರ್ತೀವಿ ಅಂತಾ ಹೊರಟ್ರೆ ಖಾಕಿ ನಿಮ್ಮನ್ನು ಅರ್ಧ ದಾರಿಯಲ್ಲೇ ಅಡ್ಡ ಹಾಕುತ್ತೆ. ನಿಮ್ಮ ಓಡಾಟಕ್ಕೆ ಸೂಕ್ತ ಕಾರಣ ಕೊಟ್ಟಿಲ್ಲಾಂದ್ರೆ ದಂಡ ಕಟ್ಟಬೇಕಾಗುತ್ತೆ ಹುಷಾರ್. ಇನ್ನು ಇಂಥಾ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಹೀಗಾಗಿ ಸಂಜೆ ಸ್ನ್ಯಾಕ್ಸ್, ಔಟಿಂಗ್ ಅಂತಾ ಓಡಾಡುವಂತಿಲ್ಲ. ವೀಕೆಂಡ್ನಲ್ಲಿ ಶಾಪಿಂಗ್, ರೌಂಡ್ಸ್ ಅಂತಾ ಸುತ್ತಾಡುವಂತಿಲ್ಲ.

11 ಜಿಲ್ಲೆಗಳಿಗೆ ಸದ್ಯಕ್ಕಿಲ್ಲ ಲಾಕ್ಡೌನ್ನಿಂದ ರಿಲೀಫ್ ಮತ್ತೊಂದೆಡೆ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಯಲಿದೆ. ನಾಳೆಯಿಂದ ಮತ್ತೆ ಒಂದು ವಾರ ಅಂದ್ರೆ ಜೂನ್ 21ರವರೆಗೂ ಲಾಕ್ಡೌನ್ ಸಂಕಷ್ಟದಿಂದ ಮುಕ್ತಿ ಸಿಗಲ್ಲ. ಕೊರೊನಾ ಕಂಟ್ರೋಲ್ ಮಾಡೋ ನಿಟ್ಟಿನಲ್ಲಿ ನಾಳೆಯಿಂದ ನಿಯಮಗಳು ಮತ್ತಷ್ಟು ಟಫ್ ಆಗಿರಲಿದೆ. ಅಂದಹಾಗೇ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ 25.17ರಷ್ಟಿದೆ. ಈ ಕುರಿತು ಸಿಎಂ ಆತಂಕ ವ್ಯಕ್ತಪಡಿಸಿದ್ದು, ಚಿಕ್ಕಮಗಳೂರಲ್ಲಿ ಲಾಕ್ಡೌನ್ ಕಂಟಿನ್ಯೂ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ. ಇದ್ರ ಜತೆಗೆ, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ, ಕೊಡಗು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಜೂನ್ 21ರ ವರೆಗೂ ಲಾಕ್ಡೌನ್ ಕಂಟಿನ್ಯೂ ಆಗಲಿದೆ.

ಒಟ್ನಲ್ಲಿ ಕೊರೊನಾ ಹೆಮ್ಮಾರಿ ಆರ್ಭಟ ತಗ್ಗಿದ ಹಿನ್ನೆಲೆ ರಾಜ್ಯ ಮುಕ್ಕಾಲು ಭಾಗ ನಾಳೆ ಬೆಳಗ್ಗೆಯಿಂದ ಅನ್ಲಾಕ್ ಆಗಲಿದೆ. ಮೊದಲಿದ್ದ ನಿರ್ಬಂಧಗಳನ್ನು ಸಡಿಲಿಸಿರೋ ಸರ್ಕಾರ ಕೆಲ ಕ್ಷೇತ್ರಗಳಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಿದೆ.

ಇದನ್ನೂ ಓದಿ: Karnataka Unlock; ಕರ್ನಾಟಕದಲ್ಲಿ ಸೋಮವಾರದಿಂದ ಮೊದಲ ಹಂತದ ಅನ್ಲಾಕ್; ಏನಿರುತ್ತೆ, ಏನಿರಲ್ಲಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada