Karnataka Unlock; ಕರ್ನಾಟಕದಲ್ಲಿ ಸೋಮವಾರದಿಂದ ಮೊದಲ ಹಂತದ ಅನ್ಲಾಕ್; ಏನಿರುತ್ತೆ, ಏನಿರಲ್ಲಾ?
Karnataka Covid 19 Unlock Guidelines: ಮೊದಲ ಹಂತದ ಅನ್ಲಾಕ್ನಲ್ಲಿ ಬಸ್ಗಳು ಸೌಂಡ್ ಮಾಡುತ್ತೆ. ಎಲ್ಲಾದ್ರು ಹೊರಗಡೆ ಹೋಗಿ ಸುತ್ತಾಡಿಕೊಂಡು ಬರೋಣ ಅಂತ ಕೆಲವರು ಥಿಂಕ್ ಮಾಡ್ತಿದ್ರು. ಇನ್ನು ಕೆಲವರು ಬಟ್ಟೆ ಅಂಗಡಿಗೆ ಹೋಗೋಣ ಅಂತಿದ್ರು. ಆದ್ರೆ, ಸರ್ಕಾರ ಜನರಿಗೆ ಶಾಕ್ ಕೊಟ್ಟಿದೆ. ಕೆಲ ಕ್ಷೇತ್ರಗಳನ್ನ ಬಂದ್ ಮಾಡಿದೆ.
Karnataka Covid Unlock Guidelines | ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ 2ನೇ ಅಲೆಯ ಹೊಡೆತದಿಂದ ಜನ ಮನೆಯಲ್ಲೇ ಕೂರುವಂತೆ ಆಗಿತ್ತು. ಕೊರೊನಾ ಕಟ್ಟು ಪಾಡುಗಳಲ್ಲಿ ಸಿಲುಕಿ ಜನ ಪರದಾಡುತ್ತಿದ್ರು. ಆದ್ರೀಗ, ಸರ್ಕಾರ 11 ಜಿಲ್ಲೆಗಳನ್ನ ಬಿಟ್ಟು ಉಳಿದ ಎಲ್ಲಾ ಜಿಲ್ಲೆಗಳ ಜನತೆಗೆ ರಿಲೀಫ್ ಕೊಟ್ಟಿದೆ. ಸೋಮವಾರದಿಂದ ಮೊದಲ ಹಂತದ ಬೀಗ ಓಪನ್ ಮಾಡಿದೆ. ಆದ್ರೆ, ಎಲ್ಲ ಕ್ಷೇತ್ರವೂ ಓಪನ್ ಆಗಿಲ್ಲ. ಜನ ಯಾವುದಕ್ಕೆ ಅವಕಾಶ ಸಿಗುತ್ತೆ ಅಂದುಕೊಂಡಿದ್ರೋ ಅದಕ್ಕೆ ಬ್ರೇಕ್ ಬಿದ್ದಿದೆ. ಅನ್ಲಾಕ್ ಘೋಷಿಸಿರೋ 19 ಜಿಲ್ಲೆಗಳಲ್ಲಿ ಮಧ್ಯಾಹ್ನ 2 ಗಂಟೆವರೆಗೂ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದೆ. ಹಾಗಾದ್ರೆ, ಯಾವುದಕ್ಕೆ ರಿಲೀಫ್ ಸಿಗುತ್ತೆ ಅಂತಾ ಅಂದುಕೊಂಡಿದ್ರು ಅನ್ನೋದನ್ನ ನೋಡೋದಾದ್ರೆ,
ರಸ್ತೆಗಿಳಿಯುತ್ತೆ ಆಟೋ, ಟ್ಯಾಕ್ಸಿ.. ಬಸ್ಗಿಲ್ಲ ಗ್ರೀನ್ ಸಿಗ್ನಲ್ ಮೊದಲ ಹಂತದ ಅನ್ಲಾಕ್ನಲ್ಲಿ ಶೇಕಡಾ 50 ರಷ್ಟು ಸೀಟ್ ಫಿಲ್ ಮಾಡ್ಕೊಂಡು ಬಸ್ ಸಂಚಾರಕ್ಕೆ ಅವಕಾಶ ಸಿಗುತ್ತೆ ಎನ್ನಲಾಗಿತ್ತು. ಆದ್ರೆ, ಸರ್ಕಾರ ಮೊದಲ ಹಂತದ ಅನ್ಲಾಕ್ನಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಬ್ರೇಕ್ ಕೊಟ್ಟಿದೆ. ಇಷ್ಟೇ ಅಲ್ಲ, ಖಾಸಗಿ ಬಸ್ಗಳ ಓಡಾಟಕ್ಕೂ ಅನುಮತಿ ನೀಡಿಲ್ಲ. ಜೊತೆಗೆ ಪಾಸ್ ಇದ್ದವರಿಗೆ ಮೆಟ್ರೋ ಸಂಚಾರಕ್ಕೆ ಅವಕಾಶ ಸಿಗೋ ನಿರೀಕ್ಷೆ ಇತ್ತು. ಆದ್ರೆ, ನಮ್ಮ ಮೆಟ್ರೋ ಸಂಚಾರಕ್ಕೂ ಸರ್ಕಾರ ಗ್ರೀನ್ ಸಿಗ್ನಲ್ ಕೊಡಲಿಲ್ಲ.
ಸೋಮವಾರದಿಂದ ಆಟೋ, ಟ್ಯಾಕ್ಸಿ ಓಡಾಟಕ್ಕೆ ಸರ್ಕಾರ ಅವಕಾಶ ನೀಡಿದೆ ಆದ್ರೆ ಆಟೋ, ಟ್ಯಾಕ್ಸಿಗಳಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬೇಕು ಅಂತಾ ಕಂಡಿಷನ್ ಹಾಕಿದೆ. ಇನ್ನು ಅಂತರ್ ಜಿಲ್ಲೆ ಹಾಗೂ ಅಂತರ್ ರಾಜ್ಯ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮಧ್ಯಾಹ್ನ 2ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದ್ದು, 10ಗಂಟೆವರೆಗೆ ಇದ್ದ ಅಗತ್ಯ ವಸ್ತು ಖರೀದಿ ಸಮಯವನ್ನ ವಿಸ್ತರಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಮಧ್ಯಾಹ್ನ ಎರಡ ಗಂಟೆವರೆಗೆ ಪರ್ಮಿಷನ್ ಕೊಡಲಾಗಿದೆ. ಇನ್ನು ಪಾರ್ಕ್ಗಳಲ್ಲಿ ವಾಯುವಿಹಾರ ಮಾಡಲು ಬೆಳಗ್ಗೆ 5ಗಂಟೆಯಿಂದ 10ಗಂಟೆವರೆಗೆ ಪಾರ್ಕ್‌ಗಳು ಓಪನ್ ಇರುತ್ತೆ.
ಮತ್ತೊಂದೆಡೆ ಲಾಕ್ಡೌನ್ನಿಂದ ಕುಸಿದಿರೋ ಆರ್ಥಿಕತೆ ಮೇಲೆತ್ತಲು ಕೆಲ ವಾಣಿಜ್ಯ ಚಟುವಟಿಕೆಗಳಿಗೂ ಅನುಮತಿ ಕೊಡಲಾಗಿದೆ. ಅನ್ಲಾಕ್ನಲ್ಲಿ ಎಲ್ಲ ರೀತಿಯ ಕಾರ್ಖಾನೆಗಳನ್ನ ತೆರೆಯಲು ಅನುಮತಿ ಕೊಡಲಾಗಿದ್ದು, ಶೇ. 50ರಷ್ಟು ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸಬೇಕು. ಅಲ್ಲದೇ ಶೇ. 30ರಷ್ಟು ಸಿಬ್ಬಂದಿಯೊಂದಿಗೆ ಗಾರ್ಮೆಂಟ್ಸ್ ತೆರೆಯಬಹುದು. ಇನ್ನು ಕಟ್ಟಡ ಕಾಮಗಾರಿಗಳಿಗೆ ಬೇಕಾದ ಸಿಮೆಂಟ್, ಸ್ಟೀಲ್ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ.
ಮದ್ಯಪ್ರಿಯರಿಗೆ ‘ಮಧ್ಯಾಹ್ನ’ದವರೆಗೂ ಕಿಕ್ ಇತ್ತ ಮದ್ಯಪ್ರಿಯರಿಗೂ ಸರ್ಕಾರ ಅನ್ಲಾಕ್ ಗುಡ್ನ್ಯೂಸ್ ಕೊಟ್ಟಿದ್ದು, ಬೆಳಗ್ಗೆ 10 ಗಂಟೆವರೆಗೆ ಇದ್ದ ಟೈಮ್ ಲಿಮಿಟ್ನ್ನು ಮಧ್ಯಾಹ್ನ 2 ಗಂಟೆವರೆಗೆ ವಿಸ್ತರಿಸಿದೆ. ಮದ್ಯ ಪಾರ್ಸೆಲ್ ಪಡೆಯಲು ಮಧ್ಯಾಹ್ನ 2ರವರೆಗೆ ಅವಕಾಶವನ್ನ ಸರ್ಕಾರ ನೀಡಿದೆ. ಬಾರ್ & ರೆಸ್ಟೋರೆಂಟ್, ವೈನ್ ಸ್ಟೋರ್, ಎಂಎಸ್‌ಐಎಲ್‌ನಲ್ಲಿ ಮಧ್ಯಾಹ್ನ 2ಗಂಟೆವರೆಗೂ ಪಾರ್ಸೆಲ್‌ಗೆ ಅವಕಾಶವಿದೆ. ಹೋಟೆಲ್‌ಗಳಿಗೆ ಈಗಿರುವ ಮಾರ್ಗಸೂಚಿ ಅನ್ವಯವಾಗಲಿದ್ದು, ರಾತ್ರಿವರೆಗೂ ಪಾರ್ಸೆಲ್ಗೆ ಮಾತ್ರ ಅನುಮತಿ ನೀಡಲಾಗಿದೆ.
ಹಲವು ವಲಯಕ್ಕೆ ಸಿಗದ ಅನುಮತಿ ಮೊದಲ ಹಂತದಲ್ಲಿ ಬಟ್ಟೆ ಅಂಗಡಿ, ಚಿನ್ನದಂಗಡಿ, ಫುಟ್ವೇರ್ ಶಾಪ್ ಓಪನ್ ಮಾಡಲು ಸರ್ಕಾರ ಅನುಮತಿ ಕೊಡುತ್ತೆ ಎನ್ನಲಾಗಿತ್ತು. ಆದ್ರೆ, ಸರ್ಕಾರ ಬಂದ್ ಮಾಡಿದೆ. ಹೊರಾಂಗಣ ಸಿನಿಮಾ ಚಿತ್ರೀಕರಣಕ್ಕೆ ಸರ್ಕಾರ ಅವಕಾಶ ಕೊಡೋ ನಿರೀಕ್ಷೆ ಇತ್ತು. ಆದ್ರೆ, ಹೊರಾಂಗಣ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಕೊಟ್ಟಿದೆ. ಜೊತೆಗೆ ಧಾರವಾಹಿ ಚಿತ್ರೀಕರಣದ ಕನಸು ನುಚ್ಚುನೂರಾಗಿದೆ. ಅಲ್ದೆ, ಜಿಮ್, ಸ್ವಿಮ್ಮಿಂಗ್ಪೂಲ್ ಸಂಪೂರ್ಣ ಕ್ಲೋಸ್ ಮಾಡಲಾಗಿದೆ.
ಇಷ್ಟೆಲ್ಲಾ ರಿಲೀಫ್ ಕೊಟ್ಟಿರೋ ಸರ್ಕಾರ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿ ಮಾಡೋದನ್ನು ಮರೆತಿಲ್ಲ. ಕೊರೊನಾ ಸಂಪೂರ್ಣ ಹತೋಟಿಗೆ ತರೋ ನಿಟ್ಟಿನಲ್ಲಿ ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲು ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ.
ನೈಟ್, ವೀಕೆಂಡ್ ‘ಲಾಕ್’..! ಇನ್ನು ರಾಜ್ಯಾದ್ಯಂತ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿ ಮಾಡ್ಲಾಗಿದೆ. ಸಂಜೆ 7ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿ ಮತ್ತು ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತೆ.
ಕೊರೊನಾ ಅಬ್ಬರ ಕಡಿಮೆಯಾಗ್ತಿದ್ದಂತೆ ರಾಜ್ಯ ಅನ್ಲಾಕ್ಗೆ ರೆಡಿಯಾಗಿದ್ದು, ಸೋಮವಾರದಿಂದ ಜೂನ್ 21ರವರೆಗೂ ರಾಜ್ಯ ಅರ್ಧ ಓಪನ್ ಅರ್ಧ ಬಂದ್ ಆಗಿರಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ 19 ಜಿಲ್ಲೆಗಳು ಇನ್ನು ಎರಡೇ ದಿನಗಳಲ್ಲಿ ಅನ್ಲಾಕ್ ಮೋಡ್ಗೆ ಶಿಫ್ಟ್ ಆಗಲಿದೆ.
ಇನ್ನು, ಹಂತ ಹಂತವಾಗಿ ಕೆಲ ಕ್ಷೇತ್ರಗಳಿಗೆ ರಿಲೀಫ್ ಸಿಗೋ ಸಾಧ್ಯತೆ ಇತ್ತು. ಹಾಗಾದ್ರೆ, 2ನೇ ಹಂತದಲ್ಲಿ ಯಾವುದಕ್ಕೆ ಅವಕಾಶ ಸಿಗಬಹುದು ಅಂತಾ ನೋಡೋದಾದ್ರೆ,
2ನೇ ಹಂತದಲ್ಲಿ ಏನೆಲ್ಲ ಇರುತ್ತೆ? – 1ನೇ ಹಂತದಲ್ಲಿ ರಿಲೀಫ್ ಸಿಗದ ಕ್ಷೇತ್ರಕ್ಕೆ ಅವಕಾಶ – BMTC, KSRTCಬಸ್ ಸಂಚಾರ ಸಾಧ್ಯತೆ – ಹೋಟೆಲ್, ರೆಸ್ಟೋರೆಂಟ್ ಓಪನ್ಗಿಲ್ಲ ಅವಕಾಶ – ಶೇ.50ರಷ್ಟು ಗ್ರಾಹಕರಿಗೆ ಹೋಟೆಲ್ ಒಳಗೆ ಪ್ರವೇಶ ಸಾಧ್ಯತೆ – 1ನೇ ಹಂತದಲ್ಲಿ ರಿಲೀಫ್ ಸಿಗದ ವಾಣಿಜ್ಯ ಚಟುವಟಿಕೆಗೆ ಅವಕಾಶ?
ಒಟ್ನಲ್ಲಿ, ಮೊದಲ ಹಂತದ ಅನ್ಲಾಕ್ನಲ್ಲಿ ಬಸ್ಗಳು ರೋಡಿಗೆ ಇಳಿಯುತ್ತೆ. ರೂಲ್ಸ್ ಫಾಲೋ ಮಾಡ್ಕೊಂಡು ಬಸ್ಗಳಲ್ಲಿ ಓಡಾಡ ಬಹುದು. ಊರಿಗೆ ಹೋಗಬಹುದು. ಸಂಬಂಧಿಕರನ್ನ ಮಾತನಾಡಿಸಬಹುದು ಅಂತಾ ಅಂದುಕೊಂಡಿದ್ದ ಜನರ ಮೂಡ್ ಆಫ್ ಆಗಿದೆ.